ವೈದ್ಯವಿಜ್ಞಾನದ ವಿಪರೀತ ದಾಹ ವಿನಾಶಕ್ಕೆ ದಾರಿ!

dr 56 movie review

Dr.56 4/5

ಕೆಲವೊಂದು ಕೊಲೆಗಳಿಗೆ ಕಾರಣವೇ ಗೊತ್ತಾಗೋದಿಲ್ಲ. ಅದೂ ಹೈ ಪ್ರೊಫೈಲ್‌ ಮರ್ಡರ್‌ ಕೇಸುಗಳು ಕಗ್ಗಂಟಾಗೇ ಉಳಿದುಬಿಡುತ್ತವೆ. ಸ್ಥಳೀಯ ಪೊಲೀಸರು ಕಂಡು ಹಿಡಿಯಲಾರದೇ ಕೈಬಿಟ್ಟ ಪ್ರಕರಣಗಳನ್ನು ಸಿಬಿಐಗೆ ವಹಿಸಲಾಗುತ್ತದೆ. ಒಂದಕ್ಕೊಂದು ಸೂತ್ರ ಸಂಬಂಧ ಇಲ್ಲದ, ಸಣ್ಣ ಸುಳಿವೂ ಸಿಗದ ಕೊಲೆ ಕೇಸುಗಳನ್ನು ಬೇಧಿಸುವುದು ಬಲು ತ್ರಾಸದ ಕೆಲಸ. ಭಯಾನಕ ಕೊಲೆಗಳು ಮತ್ತು ಅದರ ಸುತ್ತಲಿನ ವಿದ್ಯಮಾನಗಳನ್ನು ರೋಚಕತೆಯೊಂದಿಗೆ ಬೆರೆಸಿ ಸಿನಿಮಾ ರೂಪ ಕೊಡಲಾಗಿದೆ. ಅದಕ್ಕಿಟ್ಟ ಹೆಸರು ಡಾ. 56…!dr 56 movie review

ಇವತ್ತು ವೈದ್ಯಕೀಯ ವಿಜ್ಞಾನ ಜಗತ್ತು ವಿಪರೀತ ಮುಂದುವರೆದಿದೆ. ಅದರ ಜೊತೆಗೆ ಹಣಬಾಕ ವೈದ್ಯರ ದುರಾಸೆ ಕೂಡಾ ಅಷ್ಟೇ ಮಿತಿಮೀರಿಹೋಗಿದೆ. ಆರಂಭದಲ್ಲಿ ಇಲಿ, ಹೆಗ್ಗಣ, ಕಪ್ಪೆಗಳ ಮೇಲೆ ಪ್ರಯೋಗ ನಡೆಸುವ ವೈದ್ಯ ವಿಜ್ಞಾನಕ್ಕೆ ನರಬಲಿಯೂ ಬೇಕು ಅನ್ನೋದು ಡಾ. 56 ಚಿತ್ರದ ಮೂಲ ಧಾತು. ಭಾರತದಂಥಾ ದೇಶದಲ್ಲಿ ಮೆಡಿಕಲ್‌ ಎಕ್ಸ್ ಪರಿಮೆಂಟು, ರಿಸರ್ಚುಗಳಿಗೆ ಬಲಿಯಾಗುತ್ತಿರೋದು ಬಡ ಜೀವಗಳು. ಕಾನೂನಿನ ಚೌಕಟ್ಟಿನಲ್ಲಿ ಯಾವುದೇ ಆವಿಷ್ಕಾರಗಳು ನಡೆಯಲಿ. ಆದರೆ, ಲಾಭ, ಲೋಭಕ್ಕೆ ಬಿದ್ದ ವೈದ್ಯರು ಮಾಫಿಯಾದ ಭಾಗವಾಗಿದ್ದಾರೆ. ಕಾನೂನು ಬಾಹಿರ ಕೆಲಸಕ್ಕೆ ಮುಂದಾಗಿದ್ದಾರೆ.dr 56 movie review

ಏನೇನೂ ಅರಿಯದ ಅಮಾಯಕರ ಜೀವಗಳನ್ನು ಆಪೋಶನ ತೆಗೆದುಕೊಳ್ಳುತ್ತಿದ್ದಾರೆ.
ಇಂಥ ಮೆಡಿಕಲ್‌ ಮಾಫಿಯಾಗೂ ಹೀರೋಗೂ ಏನು ಸಂಬಂಧ ಅನ್ನೋದೇ ಡಾ. 56 ಚಿತ್ರದಲ್ಲಿ ಕುತೂಹಲ ಮೂಡಿಸುವ ಅಂಶ. ಸ್ವತಃ ಕತೆ ಬರೆದು ನಾಯಕನಾಗಿ ಅಭಿನಯಿಸಿರುವ ಪ್ರವೀಣ್‌ ರೆಡ್ಡಿ (ಪಿ.ಆರ್‌) ಪಾಲಿಗೆ ಇದು ಮೊದಲ ಸಿನಿಮಾ ಅನ್ನಿಸುವುದೇ ಇಲ್ಲ. ಪ್ರಿಯಾಮಣಿ ಸಿಬಿಐ ಅಧಿಕಾರಿಣಿಯ ಗತ್ತು ಗಾಂಭೀರ್ಯವನ್ನು ಆವಾಹಿಸಿಕೊಂಡು ನಟಿಸಿದ್ದಾರೆ. ಯತಿರಾಜ್ ಕೂಡಾ ಅದಕ್ಕೆ ಸಾಥ್‌ ನೀಡಿದ್ದಾರೆ. ಮಂಜುನಾಥ್‌ ಹೆಗ್ಡೆ ತುಂಬಾ ಇಷ್ಟವಾಗುತ್ತಾರೆ. ಪ್ರದೀಪ್‌ ಬಂದು ಇಡೀ ಚಿತ್ರಕ್ಕೆ ಮಹಾ ತಿರುವು ನೀಡಿ ಹೋಗುತ್ತಾರೆ. ಚಿತ್ರದಲ್ಲಿ ನಾಯಿ ಕೂಡಾ ಕೀ ರೋಲ್‌ ಪ್ಲೇ ಮಾಡಿದೆ.dr 56 movie reviewಇನ್ನೊಂದಿಷ್ಟು ವಿವರವಾಗಿ ತೋರಿಸಬಹುದಾದ ದೃಶ್ಯಗಳನ್ನು ಸಂಭಾಷಣೆಯಲ್ಲೇ ಮುಗಿಸಿದ್ಧಾರೆ ಅನ್ನೋದು ಬಿಟ್ಟರೆ ಡಾ. 56 ಪಕ್ವವಾದ ಚಿತ್ರ. ರಾಕೇಶ್‌ ಸಿ. ತಿಲಕ್‌ ಕ್ಯಾಮೆರಾ ಕೆಲಸ ಸಿನಿಮಾದ ತಾಕತ್ತು. ನಿರ್ದೇಶಕ ರಾಜೇಶ್‌ ಆನಂದಲೀಲಾ ಥ್ರಿಲ್ಲರ್‌ ಸಬ್ಜೆಕ್ಟನ್ನು ಎಲ್ಲೂ ಎಳೆದಾಡದೆ ಅಷ್ಟೇ ಚುಟುಕಾಗಿ ನಿರೂಪಿಸಿದ್ದಾರೆ.dr 56 movie review ಇತ್ತೀಚೆಗೆ ಯಾವುದೇ ಸಿನಿಮಾ ನೋಡಿದಾಗ ಇದು ʻಲ್ಯಾಗ್ʼ ಎನ್ನುವ ಉದ್ಘಾರ ಕೇಳಿಬರುತ್ತದೆ. ಅದಕ್ಕೆಲ್ಲಾ ಅವಕಾಶವೇ ಕೊಡದ ಡಾ.56 ಚಿತ್ರತಂಡ ಎಷ್ಟು ಬೇಕೋ ಅಷ್ಟನ್ನೇ ಉಳಿಸಿಕೊಂಡು ಮೊಟಕು ಮಾಡಿದ್ದಾರೆ. ಸಿನಿಮಾ ಸಾಗುವುದೇ ಗೊತ್ತಾಗೋದಿಲ್ಲ. ಒಂದಿಷ್ಟೂ ಕಷ್ಟ ಕೊಡದೆ ಸಲೀಸಾಗಿ ನೋಡಿಸಿಕೊಂಡು ಹೋಗುವ ಗುಣ ಹೊಂದಿರುವ ಡಾ. 56 ಅನ್ನು ನೀವೂ ಒಮ್ಮೆ ನೋಡಿಬಿಡಿ!dr 56 movie review

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…