ಹಾರರ್ ಡಿಸೆಂಬರ್ 24 ಟ್ರೈಲರ್ ಬಿಡುಗಡೆ

december 24 kannada movie trailer

ಹುಲಿಯೂರು ದುರ್ಗದಲ್ಲಿ 2015 ರಿಂದ 2019ರ ನಡುವೆ ನಡೆದ ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ನಿರ್ಮಿಸಲಾಗಿರುವ ಹಾರರ್, ಥ್ರಿಲ್ಲರ್ ಚಿತ್ರ ಡಿಸೆಂಬರ್ 24. ಭಾಗ್ಯಲಕ್ಷ್ಮಿ ಖ್ಯಾತಿಯ ಭೂಮಿಕಾ ರಮೇಶ್ ನಾಯಕಿಯಾಗಿ ನಟಿಸಿರುವ, ಎಂ.ಜಿ.ಎನ್. ಪ್ರೊಡಕ್ಷನ್ಸ್ ಲಾಂಛನದಲ್ಲಿ ನಾಗರಾಜ್ ಎಂಜಿ ಗೌಡ ಕಥೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದ ಟೀಸರ್ ಸಾಂಗ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.
ರೈತಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರು ಟ್ರೈಲರ್ ಲಾಂಚ್ ಮಾಡಿ ಹಳ್ಳಿಯ ರೈತರ ಮಕ್ಕಳು ಸೇರಿ ಒಳ್ಳೆಯ ಕಾನ್ಸೆಪ್ಟ್ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ನಾನು ಸಿನಿಮಾ ನೋಡಿದ್ದೇನೆ, ಚೆನ್ನಾಗಿ ಬಂದಿದೆ ಎಂದರು.december 24 kannada movie trailer

ಸಾಂಗ್ ರಿಲೀಸ್ ಮಾಡಿದ ನಿರ್ದೇಶಕ ಮಾ.ಚಂದ್ರು ಮಾತನಾಡಿ, ಈ ಹಾಡಿಗೂ ನಿರ್ದೇಶಕರಿಗೂ ಹತ್ತಿರದ ಸಂಬಂಧವಿದೆ. ಅವರ ಫ್ಯಾಮಿಲಿಯಲ್ಲೂ ಇಂಥದ್ದೊಂದು ಇನ್ಸಿಡೆಂಟ್ ನಡೆದಿದೆ. ಅಲ್ಲದೆ ಸಿನಿಮಾ ರಿಲೀಸಿಗೂ ಮುಂಚೆಯೇ ೫ ಸಾವಿರ ಟಿಕೆಟ್ ಸೇಲ್ ಮಾಡಿದ್ದಾರೆ ಎಂದರು.december 24 kannada movie trailer

ಚಿತ್ರದಲ್ಲಿ ಫಾರೆಸ್ಟ್‌ ಆಫೀಸರ್ ಪಾತ್ರ ಮಾಡಿರುವ ಆನಂದ್ ಪಟೇಲ್ ಹುಲಿಕಟ್ಟೆ ಮಾತನಾಡಿ ಮೆಣಸಿನಕೆರೆದೊಡ್ಡಿ ಎಂಬ ಕುಗ್ರಾಮದಿಂದ ಬಂದ ನಾಗರಾಜ್ ಗೌಡ ಒಂದು ಸಾಮಾಜಿಕ ಕಳಕಳಿಯಿರುವ ಸಿನಿಮಾ ಮಾಡಿದ್ದಾರೆ. ನಮಗೂ ಒಂದು ಪಾತ್ರಕೊಟ್ಟಿದ್ದಾರೆ ಎಂದರು. ನಟ ಅನಿಲ್ ಗೌಡ್ರು ಮಾತನಾಡಿ ಬದಲಾದ ಜೀವನಶೈಲಿಯಲ್ಲಿ ಹುಟ್ಟಿದ ಮಕ್ಕಳು ಯಾವರೀತಿ ಸಾವನ್ನಪ್ಪುತ್ತಾರೆ ಎಂಬುದನ್ನು ಅವರಿಗಾದ ಅನುಭವ ಇಟ್ಟುಕೊಂಡು ಶೂಟ್ ಮಾಡಿದ್ದಾರೆ. ಫಾರೆಸ್ಟ್ ನಲ್ಲಿ ಮಳೆ ಇದ್ದರೂ ಚಿತ್ರೀಕರಣ ಮಾಡಿದ್ದಾರೆ. ನನ್ನದು ನೆಗೆಟಿವ್ ಪಾತ್ರ ಎಂದರು. ಛಾಯಾಗ್ರಾಹಕ ವಿನಯ್ ಗೌಡ ಮಾತನಾಡಿ ಫಾರೆಸ್ಟ್ ನಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣ ಮಾಡಿದ್ದೇವೆ. ಎಂದರು.december 24 kannada movie trailer

ನಾಗರಾಜ್ ಗೌಡ ಮಾತನಾಡಿ ಕೇವಲ ೨೦೦ರೂ. ಇಟ್ಟುಕೊಂಡು ಈ ಸಿನಿಮಾ ಆರಂಭಿಸಿದೆ. ಈಗ ೮೦ ಲಕ್ಷ ಆಗಿದೆ. ಒಬ್ಬ ನಿರ್ಮಾಪಕರು ಕೊಡುತ್ತೇನೆ ಎಂದು ಭರವಸೆ ನೀಡಿ ಬಿಟ್ಟುಬಿಟ್ಟರು. ಮೆಡಿಕಲ್ ರೀಸರ್ಚ್ ಗೂ ಡಿಸೆಂಬರ್ ೨೪ಕ್ಕೂ ಏ‌ನು ಲಿಂಕ್ ಅಂತ ಹೇಳೋದೇ ಈ ಚಿತ್ರ. ಮಾರ್ಸ್ ಸುರೇಶ್ ಚಿತ್ರವನ್ನು ರಿಲೀಸ್ ಮಾಡುತ್ತಿದ್ದಾರೆ ಎಂದರು.
ನಾಯಕಿ ಭೂಮಿಕಾ ರಮೇಶ್ ಮಾತನಾಡಿ ಬೇಸಿಕಲಿ ನಾನು ಡಾನ್ಸರ್. ಪುನೀತ್ ಅವರ ಜೊತೆ ಅಭಿನಯಿಸಬೇಕೆಂಬುದು ನನ್ನ ಕನಸಾಗಿತ್ತು. ಕಾವ್ಯ ಎಂಬ ಮೆಡಿಕಲ್ ಸ್ಟೂಡೆಂಟ್ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಫ್ರೆಂಡ್‌ಷಿಪ್‌ಗೆ ಹೆಚ್ಚು ಪ್ರಾಮುಖ್ಯತೆ ಇರುವ ಕಥೆ ಇದರಲ್ಲಿದ್ದು, ಈ ಚಿತ್ರದಿಂದ ನಾನು ತುಂಬಾ ಕಲಿತಿದ್ದೇನೆ. ಅಭಿನಯ ಏನೆಂದು ಹೇಳಿಕೊಟ್ಟಿದ್ದೇ ನಾಗರಾಜ್ ಅವರು. ಅಜಯ್ ಎನ್ನುವ ವ್ಯಕ್ತಿಯ ಮನೆಯಲ್ಲಿ ನಡೆದ ಘಟನೆಯಿಂದ ಆತನ ಸ್ನೇಹಿತರಾದ ನಾವೆಲ್ಲ ಅದಕ್ಕೆ ಮೆಡಿಸಿನ್‌ ಹುಡುಕಿಕೊಂಡು ಕಾಡಿಗೆ ಹೋಗುತ್ತೇವೆ. ಅಲ್ಲಿ ನಡೆಯುವ ಘಟನೆಗಳೇ ಚಿತ್ರದ ಮುಖ್ಯ ಕಥಾವಸ್ತು. ರೆಸ್ಪಿರೇಟರಿ ಇಶ್ಯೂ ಮೇಲೆ ಮಾಡಿದಂಥ ಕಥೆಯಿದು ಎಂದರು. ಉಳಿದಂತೆ ನಾಯಕ ಅಪ್ಪು ಬಡಿಗೇರ್, ರವಿ ಕೆಆರ್.ಪೇಟೆ, ಜಗದೀಶ್ , ದಿವ್ಯ ಆಚಾರ್, ಸಾಗರ್ ಎಲ್ಲರೂ ತಂತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು.december 24 kannada movie trailer

ಬೆಂಗಳೂರು, ಸಕಲೇಶಪುರ, ಹುಲಿಯೂರು ದುರ್ಗ ಹಾಗೂ ದಾಂಡೇಲಿ ಫಾರೆಸ್ಟ್ ಸುತ್ತಮುತ್ತ ಸುಮಾರು ೬೦ ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
ರಘು ಎಸ್. ಅವರ ನಿರ್ಮಾಣದ ಈ ಚಿತ್ರಕ್ಕೆ ಮಂಜು ಡಿ.ಟಿ., ಸಿದ್ದಮ್ಮ ಕಂಬಾರ್, ಮಹಂತೇಶ್ ನೀಲಪ್ಪ ಚೌಹಾಣ್ ಹಾಗೂ ವಿ.ಬೆಟ್ಟೇಗೌಡ ಅವರ ಸಹ ನಿರ್ಮಾಣವಿದೆ.
ಈ ಚಿತ್ರದಲ್ಲಿ ಒಟ್ಟು ೪ ಹಾಡುಗಳಿದ್ದು ಪ್ರವೀಣ್ ನಿಕೇತನ್ ಹಾಗೂ ವಿಶಾಲ್ ಆಲಾಪ್ ಸಂಗೀತ ನಿರ್ದೇಶನ ಮಾಡಿದ್ದಾರೆ. ವೆಂಕಿ ಯು ಡಿ ವಿ ಅವರ ಸಂಕಲನವಿದೆ, ಡಾ. ವಿ.ನಾಗೇಂದ್ರಪ್ರಸಾದ್, ವಿಶಾಲ್ ಆಲಾಪ್ ಹಾಗೂ ಗೀತಾ ಆನಂದ್ ಪಟೇಲ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.december 24 kannada movie trailer

ಈ ಚಿತ್ರದಲ್ಲಿ ಅಪ್ಪು ಬಡಿಗೇರ, ರವಿ ಕೆ.ಆರ್.ಪೇಟೆ, ರಘು ಶೆಟ್ಟಿ, ಜಗದೀಶ್ ಹೆಚ್. ದೊಡ್ಡಿ, ಸಾಗರ್ ಐವರು ಸ್ನೇಹಿತರಾಗಿ ನಟಿಸಿದ್ದಾರೆ.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…