ಡ್ಯಾಡ್ ಟೀಸರ್ ಗೆ ಬಾಲಿವುಡ್ ನಿರ್ದೇಶಕ ಸುಭಾಶ್ ಘಾಯ್ ಫಿದಾ!

Dad Teaser

ಒಮ್ಮೊಮ್ಮೆ ಸುಳಿವೇ ಇರದಂತೆ ಕೆಲ ಸಿನಿಮಾಗಳು ಪ್ರೇಕ್ಷಕರನ್ನು ಸಂಪೂರ್ಣವಾಗಿ ಸೆಳೆದು ಬಿಡುವುದಿದೆ. ಇದೀಗ ಬಿಡುಗಡೆಗೊಂಡಿರುವ ಡ್ಯಾಡ್ ಎಂಬ ಚಿತ್ರದ ಟೀಸರ್ ಕೂಡಾ ನೋಡುಗರನ್ನು ಅದೇ ತೆರನಾಗಿ ಚಕಿತಗೊಳಿಸಿದೆ. ಇಂದು ಲಾಂಚ್ ಆಗಿರೋ ಡ್ಯಾಡ್ ಟೀಸರ್ Dad Teaser ನೋಡಿದರವೆಲ್ಲರನ್ನೂ ಕೂಡಾ ಚಕಿತಗೊಳಿಸಿ ಬಿಟ್ಟಿದೆ. ಈ ಸಿನಿಮಾದಲ್ಲಿ ಗಹನವಾದುದೇನೋ ಕಥೆಯಿದೆ ಎಂಬ ಭಾವನೆ ಸರ್ವರನ್ನೂ ಆವರಿಸಿಕೊಂಡಿದೆ.Dad Teaser ಇಂಥಾದ್ದೊಂದು ಟೀಸರ್ ಅನ್ನು ಸದ್ದಿಲ್ಲದೆ ಪ್ರೇಕ್ಷಕರ ಮುಂದಿಟ್ಟಿರೋದು ಹೊಸಬರ ತಂಡ ಎಂಬುದು ನಿಜಕ್ಕೂ ವಿಶೇಷ. ಗಮನೀಯ ಅಂಶವೆಂದರೆ, ಈ ಟೀಸರ್ ಈಗ ರಾಜ್ಯ ಗಡಿ ದಾಟಿ, ಎಲ್ಲೆಡೆ ಪಸರಿಸಿಕೊಂಡಿದೆ. ಬಾಲಿವುಡ್ ನಿರ್ದೇಶಕ, ನಿರ್ಮಾಪಕ, ನಟ ಸುಭಾಶ್ ಘಾಯ್ ಫಿದಾ ಆಗಿದ್ದಾರೆ. ಡ್ಯಾಡ್ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.Dad Teaser

ಅಂದಹಾಗೆ, ದೇವರಾಜ್ ಅಲಿಯಾಸ್ ದೇವಿಡ್ ಎಂಬುದು ಡ್ಯಾಡ್ ಎಂಬುದರ ವಿಸ್ತೃತ ರೂಪವಂತೆ. ಕೇವಲ ಡ್ಯಾಡ್ ಎಂಬ ಪದವೂ ಕೂಡಾ ಸಿನಿಮಾ ಕಂಟೆಂಟಿಗೆ ಅನ್ವರ್ಥವಾಗಿದೆಯಂತೆ. ಈ ಬಗ್ಗೆ ಸದರಿ ಚಿತ್ರದ ನಿರ್ದೇಶಕ ಕಂ ನಿರ್ಮಾಪಕ ಅರ್ಜುನ್ ಕೃಷ್ಣ ಒಂದಷ್ಟು ಇಂಟರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಸಾಮಾನ್ಯವಾಗಿ ಪ್ರತೀ ಮನುಷ್ಯರಿಗೂ ಎರಡು ಮುಖಗಳಿರುತ್ತವೆ.

ನೀವು ನಿಮ್ಮ ಜೀವನವನ್ನು ಬದಲಾಯಿಸಲು ಶ್ರೀ ಕೃಷ್ಣನ ನುಡಿಮುತ್ತು

Dad Teaser

ಹೆಚ್ಚಾಗಿ ಈ ಸಮಾಜದೆದುರು ಒಂದು ಮುಖ ಮಾತ್ರವೇ ಕಾಣಿಸಿಕೊಳ್ಳುತ್ತದೆ. ಆದರೆ ಓರ್ವ ಸಾಮಾನ್ಯ ಮನುಷ್ಯನನ್ನು ಪದೇ ಪದೆ ಕಷ್ಟಗಳು ಮುತ್ತಿಕೊಂಡರೆ, ದುಷ್ಟ ಶಕ್ತಿಗಳು ಕಾಡಿದರೆ, ನ್ಯಾಯವೆಂಬುದು ಮರೀಚಿಕೆಯಾದರೆ, ತಂತಾನೇ ಎರಡನೇ ಮುಖದ ಅನಾವರಣಗೊಳ್ಳುತ್ತದೆ. ಇಂಥಾ ಧಾಟಿಯ ಕಥೆ ಹೊಂದಿರೋ ಡ್ಯಾಡ್ ಸಂಪೂರ್ಣ ಭಿನ್ನವಾಗಿದೆ ಎಂಬುದಕ್ಕೆ ಈ ಟೀಸರ್ ಗಿಂತಲೂ ಬೇರೆ ಸಾಕ್ಷಿ ಬೇಕಿಲ್ಲ.ಇದು ಪಕ್ಕಾ ಕಮರ್ಶಿಯಲ್ ಬಗೆಯ ಚಿತ್ರ. ಆದರೆ ರಿಯಲಿಸ್ಟಿಕ್ ಮೇಕಿಂಗಿನತ್ತ ಹೆಚ್ಚು ಒತ್ತು ಕೊಡಲಾಗಿದೆಯಂತೆ.Dad Teaser

ಎಂಬಿಎ ಮುಗಿಸಿಕೊಂಡು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ್ದ ಅರ್ಜುನ್ ಕೃಷ್ಣ ಈ ಚಿತ್ರವನ್ನು ನಿರ್ಮಾಣ ಮಾಡಿ ನಿರ್ದೇಶನದ ಜವಾಬನ್ದಾರಿಯನ್ನೂ ನಿಭಾಯಿಸಿದ್ದಾರೆ. ಕುಂದಾಪುರ ಮೂಲದ ವಿಶಾಲ್ ರಾಘವ್ ನಾಯಕನಾಗಿ ನಟಿಸಿದ್ದರೆ, ನೃತ್ಯ ಬೋಪಣ್ಣ ಮತ್ತು ಮಾಹಿಕಾ ಮಹಿ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ.Dad Teaser

ಈಗಾಗಲೇ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿರುವ ಡ್ಯಾಡ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಕೂಡಾ ಅಂತಿಮ ಹಂತದಲ್ಲಿದೆ. ಈಗಾಗಲೇ ಬಿಡುಗಡೆಗೊಂಡಿರುವ ಮೂರು ಹಾಡುಗಳೂ ಕೂಡಾ ಕೇಳುಗರನ್ನು ಸೆಳೆದಿವೆ. ನಟನಾ ಮಂಜು ಕೂಡಾ ಮುಖ್ಯ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ಹೆಚ್ಚೂ ಕಮ್ಮಿ ಹೊಸಬರಿಗೇ ತಾರಾಗಳದಲ್ಲಿ ಪ್ರಧಾನ್ಯತೆ ಕೊಡಲಾಗಿದೆ. ಸುಚೇಂದ್ರ ಪ್ರಸಾದ್, ಸಿದ್ಲಿಂಗು ಶ್ರೀಧರ್, ಅರುಣಾ ಬಾಲರಾಜ್ ಮುಂತಾದವರೂ ಡ್ಯಾಡ್ ಚಿತ್ರದ ಬಹುಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದಾರೆ.Dad Teaser

ಇನ್ನುಳಿದಂತೆ ಒಂದಷ್ಟು ಹೊಸಾ ವಿಲನ್ನುಗಳು ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಶಿವಹರಿ ವರ್ಮಾ ಹಿನ್ನೆಲೆ ಸಂಗೀತ, ಮುಂಬೈ ಮೂಲದ ಆಕಾಶ್ ಸೇಠ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಇನ್ನುಳಿದಂತೆ ಸಂಕಲನ ಮತ್ತು ಛಾಯಾಗ್ರಹಣದ ಜವಾಬ್ದಾರಿಯನ್ನು ಅನಿಲ್ ಕುಮಾರ್ ಕೆ ನಿಭಾಯಿಸಿದ್ದಾರೆ. ಬಹುಮುಖ ಪ್ರತಿಭೆಯಾಗಿರುವ ಅನಿಲ್ ವಿಎಫ್ ಎಕ್ಸ್, ಪೋಸ್ಟರ್ ಡಿಸೈನ್ ಅನ್ನೂ ಮಾಡುವ ಮೂಲಕ ಈ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಈ ತಂಡದ ಪ್ರಯತ್ನದ ಫಲವಾಗಿ ರೂಪುಗೊಂಡಿರುವ ಟೀಸರ್ ಭರವಸೆ ಮೂಡಿಸುವಂತಿದೆ.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…