ಬಾಸ್ ಮೆಚ್ಚಿದ ಬನಾರಸ್!‌

D boss Darshan Review about Banaras

ದರ್ಶನ್ ಸಾಮಾನ್ಯವಾಗಿ ಬೇರೆಯವರ ಚಿತ್ರಗಳ ಬಗ್ಗೆ ಮಾತನಾಡುವುದಿಲ್ಲ. ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ಈಗ ಅವರು ‘ಬನಾರಸ್’ ಚಿತ್ರವನ್ನು ಪ್ರಶಂಸಿಸದ್ದಾರೆ. ಕಾರಣ, ಚಿತ್ರವನ್ನು ಅವರು ನೋಡಿದ್ದು, ಬಹಳವಾಗಿ ಮೆಚ್ಚಿಕೊಂಡಿದ್ದಾರೆ.

Zaid Khan Darshan Banaras Pre release Event in Hubli
ಈ ಕುರಿತು ಮಾತನಾಡಿರುವ ಅವರು, ‘ನಾನು ಸಿನಿಮಾ ನೋಡಿದ್ದೇನೆ. ಈ ಹಿಂದೆ ಜೈದ್ಗೆ ಚಿತ್ರ ನೋಡುತ್ತೇನೆ ಎಂದು ಪ್ರಾಮಿಸ್ ಮಾಡಿದ್ದೆ. ಅವನೊಂಥರಾ ಬೆನ್ನಿಗೆ ಬಿದ್ದ ಬೇತಾಳದ ತರಹ. ಅದೊಂದು ದಿನ ರಾತ್ರಿಯಲ್ಲ ಕ್ರಾಂತಿ ಚಿತ್ರದ ಫೈಟಿಂಗ್ ಚಿತ್ರೀಕರಣ ಮುಗಿಸಿ ಬೆಳಿಗ್ಗೆ ಮನೆಗೆ ಬಂದೆ. ವರ್ಕೌಟ್ ಮಾಡಿ, ಸ್ನಾನ ಮಾಡಿ, ತಿಂಡಿ ತಿಂದು ಮಲಗೋಣ ಎಂದು ಪ್ಲಾನ್ ಮಾಡಿದ್ದೆ. ಅಷ್ಟರಲ್ಲಿ ಜೈದ್ ಬಂದ. ಚಿತ್ರ ನೋಡುತ್ತೀನಿ ಎಂಬ ನನ್ನ ಪ್ರಾಮಿಸ್ ನೆನಪಿಸಿದ. ಇನ್ನೊಂದು ದಿನ ನೋಡೋಣ, ಸುಸ್ತಾಗುತ್ತಿದೆ ಎಂದೆ. ಅವನು ಬಿಡಲಿಲ್ಲ. ಕೊನೆಗೆ ಅಡುಗೆ ಏನು ಮಾಡಿಸಿದ್ದ ಎಂದು ಕೇಳಿದೆ. ಅವನು ಲಿಸ್ಟ್ ಹೇಳಿದ. ಹೋಗಿ ಚೆನ್ನಾಗಿ ತಿಂದು ಮಲಗಿದರಾಯಿತು ಅಂತಂದುಕೊಂಡು ಹೋದೆ’ ಎನ್ನುತ್ತಾರೆ ದರ್ಶನ್.

banaras movie zameer ahmed khan

ಝೈದ್ ದೊಡ್ಮನೆ ಹುಡುಗ, ಶೋಕಿಗಾಗಿ ಸಿನಿಮಾ ಮಾಡಿರಬಹುದು ಅಂತಂದುಕೊಂಡಿದ್ದರಂತೆ ದರ್ಶನ್. ಆದರೆ, ಅವರ ನಂಬಿಕೆ ಸುಳ್ಳಾಯಿತಂತೆ. ‘ಏನೇ ಆದರೂ ಅವನು ದೊಡ್ಡ ಮನೆಯಿಂದ ಬಂದವನು. ಶೋಕಿಗಾಗಿ ಸಿನಿಮಾ ಮಾಡಿರಬಹುದು. ಇವನಿಗೆ ಏನೂ ಗೊತ್ತಿಲ್ಲ, ಏನೂ ಬರುವುದಿಲ್ಲ ಅಂತಂದುಕೊಂಡಿದ್ದೆ. ಊಟ ಮಾಡಿ ಸೀಟಿಗೆ ಒರಗಿಕೊಂಡೆ. ಹತ್ತೇ ನಿಮಿಷ. ಆಮೇಲೆ ಸರಿಯಾಗಿ ಕೂತವನು ಸಿನಿಮಾ ಮುಗಿಯುವವರೆಗೂ ಅಲ್ಲಾಡಲಿಲ್ಲ. ಎರಡೂವರೆ ಗಂಟೆ ಪೂರ್ತಿ ಸಿನಿಮಾ ನೋಡಿದೆ. ಸಿನಿಮಾ ನೋಡಿದ ಮೇಲೆ ನನಗನಿಸಿದ್ದು ಏನೆಂದರೆ, ಝೈದ್ ಹೊಸಬ ಅಲ್ಲ, ನಾಲ್ಕು ಸಿನಿಮಾ ಮಾಡಿದ ಅನುಭ ಅವನಿಗಿದೆ. ಕಂಟೆಂಟ್ ಸಿನಿಮಾ ಎನ್ನುತ್ತರಲ್ಲ, ಆ ತರಹದ ಸಿನಿಮಾ ಇದು. ಈ ಚಿತ್ರದಲ್ಲಿ ಝೈದ್ ತನಗೇನು ಬರತ್ತೆ ಅಂತ ತೋರಿಸಿದ್ದಾನೆ. ಬಹಳ ಸರಳವಾಗಿ ಈ ಚಿತ್ರವನ್ನು ಹ್ಯಾಂಡಲ್ ಮಾಡಿದ್ದಾರೆ. ಈ ಚಿತ್ರವು ಎಲ್ಲರಿಗೂ ಇಷ್ಟ ಆಗುತ್ತೆ ಎಂಬ ನಂಬಿಕೆ ಇದೆ. ನಿಜಕ್ಕೂ ಒಳ್ಳೆಯ ಸಿನಿಮಾ ಮಾಡಿದ್ದಾರೆ’ ಎಂದು ಸರ್ಟಿಫಿಕೇಟ್ ಕೊಡುತ್ತಾರೆ ದರ್ಶನ್.banaras movie zameer ahmed khan

‘ಬನಾರಸ್’ ಚಿತ್ರವನ್ನು ಜಯತೀರ್ಥ ಬರೆದು ನಿರ್ದೇಶನ ಮಾಡಿದ್ದು, ತಿಲಕ್ರಾಜ್ ಭಲ್ಲಾಳ್ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಝೈದ್ ಖಾನ್, ಸೋನಲ್, ಅಚ್ಯುತ್ ಕುಮಾರ್ ಮುಂತಾದವರು ನಟಿಸಿದ್ದು ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…