ಹಾರರ್ ʼಅಮರಾವತಿʼ 2023ಕ್ಕೆ ಆಗಮಿಸಬಹುದಾ?

Could horror ``Amaravati'' arrive in 2023?

ದೆವ್ವಗಳೇ ಕನ್ನಡದಲ್ಲಿ ಸಕ್ಸಸ್ ಸೂತ್ರದಂತೆ ಬಳಕೆಯಾಗುತ್ತಿವೆ. ಇದರಲ್ಲಿಯೇ ಒಂದಷ್ಟು ನವೀನ ಪ್ರಯೋಗಗಳಾಗುತ್ತಿದ್ದಾವಾದರೂ ಮತ್ತೆ ಕೆಲ ಚಿತ್ರಗಳು ನಿಜಕ್ಕೂ ಭೂತದರ್ಶನ ಮಾಡಿಸುವಂತಿರುತ್ತವೆ. ಸದ್ಯ ಕನ್ನಡದಲ್ಲಿ ಈ ವರೆಗೂ ಬಂದ ಎಲ್ಲ ಹಾರರ್ ಸಿನಿಮಾಗಳನ್ನೂ ಮೀರಿಸುವ ಚಿತ್ರವೊಂದು ಸದ್ದಿಲ್ಲದೆ ತಯಾರಾಗುತ್ತಿದೆ. ಅದು ಅಮರಾವತಿ!Could horror ``Amaravati'' arrive in 2023?

ಬ್ರಾಡ್ ವೇ ಪಿಕ್ಚರ್ಸ್ ನಿರ್ಮಾಣದ, ವಾಸು ನಿರ್ದೇಶನದ ಈ ಚಿತ್ರದಲ್ಲಿ ಪ್ರಿಯಾ, ರಮ್ಯಾ ಮತ್ತು ಕೃಷ್ಣ ಪ್ರಮುಖ ಪಾತ್ರಧಾರಿಗಳಾಗಿದ್ದಾರೆ. ಮೊದಲ ಹಂತದ ಚಿತ್ರೀಕರಣ ಚಾಲನೆಯಲ್ಲಿದೆ. 2023ಕ್ಕೆ ಈ ಚಿತ್ರದ ಮೊದಲ ಪ್ರತಿ ಸಿದ್ದವಾಗಲಿದೆ…

ಮೊದಲೆಲ್ಲಾ ಹಾರರ್ ಸಿನಿಮಾ ಅಂದರೆ, ಧೈರ್ಯವಂತರು ನೋಡುತ್ತಾರೆ, ಮೂಢನಂಬಿಕೆಗಳನ್ನು ನಂಬದವರು ಅಲ್ಲಿನ ಭಯದ ದೃಶ್ಯಗಳನ್ನು ಲೇವಡಿ ಮಾಡಲು ನೋಡುತ್ತಾರೆ ಎನ್ನುವಂತಿತ್ತು. ಆದರೆ ಇದು ಕಂಪ್ಯೂಟರ್ ಯುಗ. ದಿನಗಟ್ಟಲೆ ಕಂಪ್ಯೂಟರಿನ ಮುಂದೆ ಕೂತು ಕೆಲಸ ಮಾಡುವ, ಅದರಲ್ಲೂ ಟೆಕ್ಕಿಗಳ ತಲೆ ಗೊಬ್ಬರದ ಗುಂಡಿಯಾಗಿರುತ್ತದೆ. ಈ ಕಾರಣಕ್ಕೇ ವೀಕೆಂಟ್ ಪಾರ್ಟಿ, ವೀಕೆಂಡ್ ಟೂರ್ ಹೆಸರಲ್ಲಿ ಮೈಮರೆಯುತ್ತಿದ್ದರು. ಆದರೆ ಈಗ ತಮ್ಮ ಒತ್ತಡದ ನಿವಾರಣೆಗೆ ಟೆಕ್ಕಿಗಳು ಕಂಡುಕೊAಡಿರುವ ದಾರಿ ಯಾವುದು ಗೊತ್ತಾ?Could horror ``Amaravati'' arrive in 2023?

ಹಾರರ್ ಸಿನಿಮಾಗಳನ್ನು ಯಥೇಚ್ಚವಾಗಿ ನೋಡುವುದು!

ಹೌದು, ಇದು ನಂಬಲೇಬೇಕಾದ ಸತ್ಯ. ಕರ್ನಾಟಕದಲ್ಲೇ ಇತ್ತೀಚೆಗೆ ಮಣಗಟ್ಟಲೆ ಹಾರರ್ ಸಿನಿಮಾಗಳು ರಿಲೀಸಾಗುತ್ತಿವೆ. ಹಾಗೆ ಬಂದ ಸಿನಿಮಾಗಳು ಒಳ್ಳೇ ಕಲೆಕ್ಷನ್ ಕೂಡಾ ಮಾಡುತ್ತಿವೆ. ಅದರಲ್ಲೂ ಶನಿವಾರ ಮತ್ತು ಭಾನುವಾರದ ವೀಕೆಂಡ್‌ಗಳಲ್ಲಿ ಜನ ಬ್ಲಾಕ್ ಟಿಕೇಟು ಪಡೆದು ಸಿನಿಮಾ ನೋಡುತ್ತಿದ್ದಾರೆ. ಹಾಗೆ ಥಿಯೇಟರು ಹೊಕ್ಕುತ್ತಿರುವವರಲ್ಲಿ ಬಹುತೇಕರು ಟೆಕ್ಕಿಗಳೇ ಆಗಿದ್ದಾರೆ. ಸಿನಿಮಾದಲ್ಲಿ ಭೀತಿಗೊಳಿಸುವ ಭಯಂಕರ ದೃಶ್ಯವೊಂದು ಪರದೆ ಮೇಲೆ ತೆರೆದುಕೊಳ್ಳುತ್ತಿದ್ದತೇ ಈ ಪ್ರೇಕ್ಷಕರು ಥಿಯೇಟರಿನ ತಾರಸಿ ಕಿತ್ತುಹೋಗುವ ಹಾಗೆ ವಿಚಿತ್ರವಾಗಿ ಕೂಗಾಡುತ್ತಾರೆ. ಯಾಕೆ ಹೀಗೆ? ಇಷ್ಟೊಂದು ಕೂಗಾಡಿ ಭಯಬೀಳುವ ಸಿನಿಮಾಗೆ ಯಾಕೆ ದುಪ್ಪಟ್ಟು ದುಡ್ಡು ಕೊಟ್ಟು ಬರುತ್ತಾರೆ.

ಹಾರರ್ ಸೀನ್‌ಗಳು ನೋಡುತ್ತಿರುವ ವ್ಯಕ್ತಿಯ ಮಿದುಳು `ಅಡ್ರಿನಲೈನ್’ ಎನ್ನುವ ಹಾರ್ಮೋನ್ ಅನ್ನು ರಿಲೀಸ್ ಮಾಡುತ್ತದೆ. ಇದು ಭಯವನ್ನು, ಉದ್ವೇಗವನ್ನು ಉದ್ದೀಪಿಸುವ ಹಾರ್ಮೋನ್. ಇದು ಥೇಟು ನಶೆಯಂತೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಹಾರರ್ ಫಿಲ್ಮ್ಗಳನ್ನು ಗಂಡಸರೇ ಹೆಚ್ಚು ಇಷ್ಟ ಪಡೋದು. ೧೫ ರಿಂದ ೪೫ ವಯಸ್ಸಿನವರೆಗಿನ ಗಂಡಸರು ಹೆಚ್ಚಿನ ಸಂಖ್ಯೆಯಲ್ಲಿ ಹಾರರ್ ಫಿಲ್ಮ್ ನೋಡುತ್ತಾರೆ. ಹಾನಿ ಉಂಟುಮಾಡುವAಥ, ಚಾಲೆಂಜ್ ಮಾಡುವಂಥ ಸಂಗತಿಗಳನ್ನೇ ಬಯಸುವವರು ತಮ್ಮ ಆಟಿಟ್ಯೂಡ್‌ಗೆ ಸವಾಲು ಅಂತ ಭಾವಿಸುವವರು ಹಾರರ್ ಕತೆಗಳನ್ನ ಆರಾಧಿಸುತ್ತಾರೆ. ನ್ಯೂಯಾರ್ಕ್ ಯುನಿವರ್ಸಿಟಿಯ ಜೋಸೆಫ್ ಲಿಡಾಕ್ಸ್ ಈ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾನೆ. ನ್ಯೂರಾನ್‌ಗಳು ಭಯವನ್ನು ಹೇಗೆ ಹುಟ್ಟಿಸಿಕೊಳ್ಳುತ್ತವೆ ಮತ್ತು ನಿಯಂತ್ರಿಸುತ್ತವೆ; ಈ ಉದ್ದೀಪನೆ ಮತ್ತು ನಿಯಂತ್ರಣದ ಸಂದರ್ಭದಲ್ಲಿ ಉಂಟಾಗುವ ಭಾವವನ್ನು ಹೇಗೆ ಸುಖಿಸುತ್ತವೆ ಎಂದು ವಿವರಿಸಿದ್ದಾನೆ.Could horror ``Amaravati'' arrive in 2023?

ಈಗ ತಯಾರಾಗುತ್ತಿರುವ ಅಮರಾವತಿ ಚಿತ್ರ ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತದಲ್ಲಿ ಸಂಚಲನ ಸೃಷ್ಟಿಸುವಂತಾ ಕಥಾವಸ್ತು ಮತ್ತು ಮೇಕಿಂಗ್‌ ನಿಂದ ಕೂಡಿದೆಯಂತೆ. ಆದಷ್ಟು ಬೇಗ ಚಿತ್ರ ತೆರೆಗೆ ಬರಲಿ ಅಂತಾ ಹಾರರ್‌ ಸಿನಿಮಾ ಪ್ರಿಯರು ಬೇಡಿಕೊಳ್ಳಲಿ!

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…