ಚೌ ಚೌ ಬಾತ್ ನಲ್ಲಿ ಪ್ರೀತಿಯ ಸಮಾಗಮ!

chow chow bath movie review

Chow Chow Bath 4\5

ಮೂವರು ಹುಡುಗರು, ಮೂವರು ಹುಡುಗಿಯರು, ಮೂರು ಲವ್ ಸ್ಟೋರಿ… ಮೂರೂ ಕತೆ ಒಂದಕ್ಕೊಂದು ಸಂಬಂಧವಿಲ್ಲದಂತೆ ಪ್ರ್ಯೇಕವಾಗಿ ಸಾಗುತ್ತಿರುತ್ತದೆ. ಕಟ್ಟಕಡೆಯದಾಗಿ ಈ ಮೂರು ಕತೆಗಳು ಹೇಗೆ ಒಂದು ಕಡೆ ಕೂಡುತ್ತವೆ ಅನ್ನೋದು ಬಹುಮುಖ್ಯ ಅಂಶ. ʻಚೌಚೌ ಬಾತ್ʼ chow chow bath movie review ಹೈಪರ್ ಲಿಂಕ್ ಸಿನಿಮಾ. ಕೆಂಜ ಚೇತನ್ ಕುಮಾರ್ ನಿರ್ದೇಶನದ ಮೂರನೇ ಚಿತ್ರವಿದು. ಪ್ರೇಮಗೀಮ ಜಾನೆದೋ ಮತ್ತು ದೇವರು ಬೇಕಾಗಿದ್ದಾರೆ ಎಂಬೆರಡು ಚಿತ್ರಗಳನ್ನು ನೀಡಿದ್ದ ಚೇತನ್ ಕುಮಾರ್ ಬಲು ಶ್ರದ್ಧೆ ವಹಿಸಿ ರೂಪಿಸಿರುವ ಚಿತ್ರ ಚೌಚೌ ಬಾತ್.Chow Chow Bath Movie Review: This film offers a new flavour to romantic  tales

ಮೆಡಿಕಲ್ ಕ್ಯಾಂಪ್ಗೆ ಹೋದವಳ ಮನಸ್ಸನ್ನು ಕದಿಯುವ ಹುಡುಗ. ಅತಿ ಕಡಿಮೆ ಸಮಯದಲ್ಲೇ ಗಾಢವಾಗಿ ಅರಳುವ ಪ್ರೀತಿ. ಹಿಂಬಾಲಿಸಬೇಕಿದ್ದ ಆ ಪ್ರೀತಿ ಇದ್ದಕ್ಕಿದ್ದಂತೇ ಮರೆಯಾಗುತ್ತದೆ. ಅದರ ನೆನಪಲ್ಲೇ ಇದ್ದವಳ ಜೊತೆಯಾಗುವ ಮತ್ತೊಂದು ಜೀವ. ಇವರಿಬ್ಬರೂ ಒಂದಾಗುತ್ತಾರಾ? ಮರೆಯಾಗಿದ್ದ ಪ್ರೀತಿ ಮತ್ತೆ ಬಂದು ಕಣ್ಮುಂದೆ ನಿಲ್ಲುತ್ತಾ? ಇದರ ನಡುವೆ ಅಲ್ಲಿ ಮತ್ತೊಬ್ಬಳು ಹುಡುಗಿ. ನಕ್ಷತ್ರ, ಜಾತಕ ಸರಿ ಇಲ್ಲ ಅಂತಾ ಜಗದ ದೃಷ್ಟಿಯಲ್ಲಿ ಮೂದಲಿಕೆಗೆ ಒಳಗಾದವಳು. ಆಕೆಗೆ ಗಂಡು ಹುಡುಕಲು ನಿಂತ ಹುಡುಗ. ಅವನಿಗಾಗಿ ಕಾದು ಕುಂತವಳೊಬ್ಬಳು… ಹೀಗೆ ಇರುವ ಆರೇಳು ಪಾತ್ರಗಳು. ಮೇಲ್ನೋಟಕ್ಕೆ ಒಂದಕ್ಕೊಂದು ಸೂತ್ರ ಸಂಬಂಧ ಇಲ್ಲ ಅನ್ನಿಸಿದರೂ, ಎಲ್ಲವೂ ಅಂತ್ಯಕ್ಕೆ ಸಮಾಗಮಗೊಳ್ಳುತ್ತವೆ.BIFFES

ಒಂಥರಾ ಮಜವಾದ ಕಥೆ ಹೊಂದಿರುವ, ಅಷ್ಟೇ ಮಜಬೂತಾಗಿ ರೂಪುಗೊಂಡಿರುವ ಚಿತ್ರ ಚೌಚೌ ಬಾತ್. ಅರುಣಾ ಬಾಲರಾಜ್ ಎನ್ನುವ ʻಹಿರಿಯʼ ನಟಿಯನ್ನು ಹೊರತುಪಡಿಸಿ, ಮಿಕ್ಕಂತೆ ಪ್ರಖ್ಯಾತ ನಟರು, ಅದ್ದೂರಿ, ಆಡಂಬರಗಳೇನೂ ಇಲ್ಲಿಲ್ಲ. ಎಲ್ಲವೂ ಸರಳ, ಸುಂದರ ಮತ್ತು ಸಹಜ. ಸುಶ್ಮಿತಾ ಶರ್ಮಾ ಎನ್ನುವ ಅಪ್ಪಟ ಕಲಾವಿದೆ ಚೌಚೌ ಬಾತ್ ಮೂಲಕ ಭಾರತೀಯ ಚಿತ್ರರಂಗಕ್ಕೆ ದಕ್ಕಿದ್ದಾರೆ. ಇನ್ನು ಸಾಗರ್ ಗೌಡ ಸಹಜಾಭಿನಯ ಇಷ್ಟವಾಗುತ್ತದೆ. ಧನುಶ್ ಬೈಕಂಪಾಡಿ ಕೂಡಾ ಅಷ್ಟೇ ಸರಳವಾಗಿ ಅಭಿನಯಿಸಿದ್ದಾರೆ. ಸಂಕಲ್ಪ್ ಶರ್ಮಾ ತುಂಬಾನೇ ಪಳಗಬೇಕು. ಹೇಮಂತ್ ಜೋಯಿಸ್ ಸಂಗೀತ ನಿರ್ದೇಶನ, ರುದ್ರಮೂರ್ತಿ ಬೆಳಗೆರೆ ಛಾಯಾಗ್ರಹಣ ಕೂಡಾ ಕತೆಗೆ ಪೂರಕವಾಗಿದೆ. ಪ್ರಮೋದ್ ಮರವಂತೆ ಸಾಹಿತ್ಯ ಎಂದಿನಂತೆ ಚೆಂದ ಚೆಂದ…chow chow bath movie review

ವಿಪರೀತ ಪಾತ್ರಗಳನ್ನು ಸೃಷ್ಟಿಸಿ, ಗೊಂದಲ ಮೂಡಿಸುವವ ಸಿನಿಮಾಗಳ ನಡುವೆ ಚೌಚೌ ಬಾತ್ ಸಾಕಷ್ಟು ವಿಚಾರಗಳಿಗೆ ಇಷ್ಟವಾಗುತ್ತದೆ. ಮೊನ್ನೆ ನಡೆದ ಬೆಂಗಳೂರು ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ನಲ್ಲೂ ಚಿತ್ರ ಪ್ರದರ್ಶನಗೊಂಡಿತ್ತು. ನಿರ್ದೇಶಕ ಕೆಂಜ ಚೇತನ್ ಕುಮಾರ್ ಇದೇ ರೀತಿ ಹೊಸ ಪ್ರಯೋಗಗಳನ್ನು ನಿರಂತರವಾಗಿ ಮಾಡುತ್ತಲಿರಲಿchow chow bath movie review

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…