ಹಳ್ಳಿ ಹುಡುಗನೊಬ್ಬ ಮನಸ್ಸು ಮಾಡಿ ‘ಚಾಂಪಿಯನ್’ ಆಗುವ ಕಥೆ

champion kannada movie Sachin Danpal

ಸಚಿನ್ ಧನಪಾಲ್ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸುತ್ತಿರುವ ‘ಚಾಂಪಿಯನ್’ ಚಿತ್ರವು ನಾಳೆ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಇದೇ ಮೊದಲ ಬಾರಿಗೆ ಬಣ್ಣ ಹಚ್ಚಿರುವ ಸಚಿನ್ ಸಹ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.Meghana Raj Came To Jewels Of India Inauguration

‘ಚಾಂಪಿಯನ್’ ಕುರಿತು ಮಾತನಾಡುವ ಸಚಿನ್, ‘ಇದೊಂದು ಕ್ರೀಡೆ ಆಧಾರಿತ ಸಿನಿಮಾ. ನಾನು ಸಿನಿಮಾ ಮಾಡಬೇಕೆಂದು ನಿರ್ಧರಿಸಿದಾಗ, ಎರಡ್ಮೂರು ಕಥೆಗಳನ್ನು ಕೇಳಿದೆ. ಆ ಪೈಕಿ ಈ ಚಿತ್ರ ನನಗೆ ಬಹಳ ಇಷ್ಟವಾಯಿತು. ಕ್ರೀಡೆ ಚಿತ್ರಗಳಲ್ಲಿ ಹಲವು ಅಂಶಗಳಿರುತ್ತವೆ. ಪ್ರಮುಖವಾಗಿ ಒಂದು ಜರ್ನಿ ಇರುತ್ತದೆ. ಸಂದೇಶ ಇರುತ್ತದೆ. ಹಾಗಾಗಿ, ಈ ಚಿತ್ರವನ್ನು ಒಪ್ಪಿಕೊಂಡೆ. ಅವೆಲ್ಲವೂ ಈ ಚಿತ್ರದಲ್ಲಿ ಇದ್ದುದರಿಂದ ಇದನ್ನು ಒಪ್ಪಿಕೊಂಡೆ’ ಎನ್ನುತ್ತಾರೆ ಸಚಿನ್.Meghana Raj Came To Jewels Of India Inauguration

ಈ ಸಿನಿಮಾ ಮೂಲಕ ಹಳ್ಳಿ ಹುಡುಗನೊಬ್ಬ ಮನಸ್ಸು ಮಾಡಿದರೆ ಜೀವನದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದನ್ನು ತೋರಿಸಲಾಗಿದೆಯಂತೆ. ‘ಸಿಟಿ ಹುಡುಗರಷ್ಟೇ ಅಲ್ಲ, ಅವರಿಗೆ ಎಲ್ಲ ಸೌಲಭ್ಯಗಳು ಇರುತ್ತವೆ. ಆದರೆ, ಹಳ್ಳಿ ಹುಡುಗರಿಗೆ ಹಲವು ಸೌಲಭ್ಯಗಳು ಇರುವುದಿಲ್ಲ. ಆದರೆ, ಮನಸ್ಸು ಮಾಡಿದರೆ, ಕಷ್ಟಪಟ್ಟರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂಬ ಮೆಸೇಜ್ ಇದೆ. ಡೆಡಿಕೇಷನ್ ಇದ್ದರೆ ಜೀವನದಲ್ಲಿ ಏನೆಲ್ಲಾ ಮಾಡಬಹುದು ಎಂದು ತೋರಿಸಲಾಗಿದೆ. ತಂದೆ-ತಾಯಿ ಮಕ್ಕಳ ಮೇಲೆ ಪ್ರೀತಿ, ಕನಸು ಇರುತ್ತದೆ. ಆ ಬಾಂಡಿಂಗ್ ಬಹಳ ಚೆನ್ನಾಗಿ ತೋರಿಸಲಾಗಿದೆ. ತಂದೆ, ಮಗ ಇಬ್ಬರೂ ಕನಸು ನನಸಾಗುವುದಕ್ಕೆ ಶ್ರಮಪಡುತ್ತಾರೆ. ಜೊತೆಗೆ ಕಾಮಿಡಿ, ಕ್ಯೂಟ್ ಲವ್ಸ್ಟೋರಿ ಇದೆ’ ಎನ್ನುತ್ತಾರೆ ಸಚಿನ್.champion kannada movie

ಇಲ್ಲಿ ಪ್ರೇಮಕಥೆ ಇದ್ದರೂ, ಮಾಮೂಲಿಯಲ್ಲ, ಡಿಸ್ಟನ್ಸ್ ಲವ್ಸ್ಟೋರಿ ಇದೆ ಎಂಬುದು ಅವರ ಅಭಿಪ್ರಾಯ. ‘ಈಗ ಸೋಷಿಯಲ್ ಮೀಡಿಯಾ ಯುಗ. ಕ್ಷಣದಲ್ಲಿ ಡೇಟಿಂಗ್ ಶುರುವಾಗುತ್ತದೆ. ಮುಂಚೆ ಹಾಗಾಗುತ್ತಿರಲಿಲ್ಲ. ಪ್ರೇಮಿಗಳ ನಡುವೆ ಒಂದು ಅಂತರ ಇತ್ತು. ಅಷ್ಟು ಸುಲಭಕ್ಕೆ ಮೀಟ್ ಆಗುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. 90ರ ದಶಕದವರೆಗೂ ಅದು ಸಾಧ್ಯವಾಗಿತ್ತು. ಈ ಕಾಲದಲ್ಲಿ ಅದು ಬಹಳ ಕಡಿಮೆಯಾಗಿದೆ. ಆ ತರಹದ್ದೊಂದು ಪ್ರೇಮಕಥೆ ಈ ಚಿತ್ರದಲ್ಲೂ ಇದೆ’ ಎನ್ನುತ್ತಾರೆ ಸಚಿನ್.champion kannada movie

ಇನ್ನು, ಚಿತ್ರದ ಕುರಿತು ಮತನಾಡುವ ಅವರು, ‘ತುಂಬಾ ಜಾಲಿಯಾಗಿ ಚಿತ್ರೀಕರಣ ಮುಗಿಸಿದೆವು. ಚಿತ್ರೀಕರಣ ಮುಗಿದಿದ್ದೇ ಗೊತ್ತಾಗಲಿಲ್ಲ ದುಃಖದ ವಿಷಯ ಏನೆಂದರೆ, ನಿರ್ದೇಶಕರು ನಿಧನರಾದರು. ಮುಂದೇನು ಎಂಬ ಸ್ಟ್ರೆಸ್ ಇತ್ತು. ಅಷ್ಟರಲ್ಲಿ ಮಾತಿನ ಭಾಗದ ಬಹುತೇಕ ಮುಗಿದಿತ್ತು. ಹಾಡುಗಳ ಚಿತ್ರೀಕರಣ ಮಾತ್ರ ಇತ್ತು. ನಮಗೆ ಒಳ್ಳೆಯ ನೃತ್ಯ ನಿರ್ದೇಶಕರು ಸಿಕ್ಕರು. ಹಾಡುಗಳನ್ನು ಬಹಳ ಚೆನ್ನಾಗಿ ಶೂಟ್ ಮಾಡಿಕೊಟ್ಟರು. ಅಜನೀಶ್ ಸಾರ್ ಬಹಳ ಚೆನ್ನಾಗಿ ಸಂಗೀತ ಸಂಯೋಜಿಸಿಕೊಟ್ಟರು. ಜನ ಹಾಡುಗಳನ್ನು ಇಷ್ಟಪಡುತ್ತಿದ್ದಾರೆ. ಒಂದು ಹಾಡಿಗೆ ಸನ್ನಿ ಲಿಯೋನ್ ಕುಣಿದಿದ್ದಾರೆ. ಉತ್ತರ ಕರ್ನಾಟಕದ ಶೈಲಿಯ ಹಾಡು. ಸನ್ನಿ ಇತ್ತೀಚೆಗೆ ಯಾವೊಂದು ಕನ್ನಡ ಚಿತ್ರದಲ್ಲೂ ನಟಿಸಿರಲಿಲ್ಲ. ತುಂಬಾ ಗ್ಯಾಪ್ ಇತ್ತು. ಹಾಗಾಗಿ, ಅವರನ್ನು ಡಿಂಗರ್ ಬಿಲ್ಲಿ ಎಂಬ ಹಾಡಿಗೆ ಕರೆಸಲಗಿದೆ. ಅವರು ಇಷ್ಟಪಟ್ಟು ಬಂದು ಚಿತ್ರದಲ್ಲಿ ನಟಿಸಿ ಹೋದರು’ ಎನ್ನುತ್ತಾರೆ ಸಚಿನ್.champion kannada movie

ಸಚಿನ್ಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಿದ್ದಾರೆ. ದೇವರಾಜ್, ಸುಮನ್, ಅವಿನಾಶ್, ರಂಗಾಯಣ ರು, ಚಿಕ್ಕಣ್ಣ ಮುಂತಾದವರು ನಟಿಸಿದ್ದಾರೆ. ದಿವಂಗತ ಶಾಹುರಾಜ್ ಶಿಂಧೆ ನಿರ್ದೇಶಿಸಿರುವ ಈ ಚಿತ್ರವನ್ನು ಶಿವಾನಂದ ನೀಲಣ್ಣನವರ್ ನಿರ್ಮಿಸಿದ್ದಾರೆ.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…