‘ಬಿಗ್ ಬಾಸ್’ಗಾಗಿ ಸುದೀಪ್ ಅದೆಷ್ಟೆಲ್ಲಾ ಕಷ್ಟಪಟ್ಟಿದ್ದಾರೆ ಗೊತ್ತಾ?

bigg-boss-kannada-ott

‘ಬಿಗ್ ಬಾಸ್ ಓಟಿಟಿ ಕನ್ನಡ – ಸೀಸನ್ 1’ ನಾಳೆ (ಆಗಸ್ಟ್ 06) ಪ್ರಾರಂಭವಾಗಲಿದೆ. ಈ ಕಾಯರ್ಕ್ರಮಕ್ಕೆ ಈಗಾಗಲೇ ತಯಾರಿ ಜೋರಾಗಿ ನಡೆದಿದ್ದು, ಈಗಾಗಲೇ ಸ್ಪರ್ಧಿಗಳು ಗಂಟುಮೂಟೆ ಕಟ್ಟಿ, ಮನೆಯೊಳಗೆ ಹೋಗುವುದಕ್ಕೆ ಪ್ರಾರಂಭಿಸಿದ್ದಾರೆ. ಶನಿವಾರ ಬೆಳಿಗ್ಗೆ ಇನ್ನೋವೇಟೀವ್ ಫಿಲಂಸಿಟಿಯಲ್ಲಿ ನಡೆಯಲಿರುವ ಆರಂಭಿಕ ಕಾರ್ಯಕ್ರಮದಲ್ಲಿ ಸುದೀಪ್, ಎಲ್ಲ ಸ್ಪರ್ಧಿಗಳನ್ನು ಮನೆಗೆ ಬರ ಮಾಡಿಕೊಳ್ಳಲಿದ್ದಾರೆ. ಅವರನ್ನೆಲ್ಲ ಮನೆಗೆ ಬಿಟ್ಟು, ಮುಂದಿನ ವಾರಾಂತ್ಯ ಎಂದಿನಂತೆ ಬಂದು ಅವರ ಕಷ್ಟ-ಸುಖಗಳನ್ನು ವಿಚಾರಿಸಲಿದ್ದಾರೆ.bigg boss kannada ott 1657795138

ಈ ರೀತಿ ಕಳೆದ ಒಂಬತ್ತು ವರ್ಷಗಳಿಂದ ನಡೆಯುತ್ತಲೇ ಇದೆ. ಈಗಾಗಲೇ ಅವರು ಎಂಟು ‘ಬಿಗ್ ಬಾಸ್’ ಸೀಸನ್ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಓಟಿಟಿಯಲ್ಲಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವ ಬಗ್ಗೆ ಮಾತನಾಡುವ ಸುದೀಪ್, ‘’ಬಿಗ್ ಬಾಸ್’ ಕಾರ್ಯಕ್ರಮ ವೂಟ್ನಲ್ಲಿ ಬರಲಿ, ಟಿವಿಯಲ್ಲಿ ಬರಲಿ ಅದರಿಂದ ನನಗೇನೂ ವ್ಯತ್ಯಾಸವಿಲ್ಲ. ಅದರಿಂದ ನನಗೆ ಏನೂ ಅನಿಸುವುದಿಲ್ಲ. ನನ್ನ ಕೆಲಸ ವೇದಿಕೆ ಮೇಲೆ ನಿಂತು ಕಾರ್ಯಕ್ರಮ ನಡೆಸಿಕೊಡುವುದು. ಆ ಕೆಲಸವನ್ನು ಶ್ರದ್ಧೆಯಿಂದ ಮಾಡುವುದಕ್ಕೆ ಪ್ರಯತ್ನಿಸುತ್ತೇನೆ ಎನ್ನುತ್ತಾರೆ.bigg boss kannada 9 starting date kichcha sudeep 1636321737

ಈ ಹಿಂದಿನ ಸೀಸನ್ಗಳಲ್ಲಿಕೆಲವೊಮ್ಮೆ ಸಮಸ್ಯೆಗಳಾದರೂ ತಮ್ಮಿಂದ ಬಿಗ್ ಬಾಸ್ಗೆ ಯಾವುದೇ ಸಮಸ್ಯೆ ಆಗಿಲ್ಲವಂತೆ. ಈ ಕುರಿತು ಮಾತನಾಡಿರುವ ಅವರು, ‘ನನಗೆ ಜ್ವರ ಇರಲಿ, ಏನೇ ಸಮಸ್ಯೆ ಇರಲಿ, ‘ಬಿಗ್ ಬಾಸ್’ ಶೋಗೆ ಸಮಸ್ಯೆ ಮಾಡಿಲ್ಲ. ಒಮ್ಮೆ ಹೇರ್ಲೈನ್ ಫ್ರಾಕ್ಚರ್ ಆಗಿತ್ತು. ಆಗಲೂ ಬ್ಯಾಂಡೇಜ್ ಮೇಲೆ ಶೂ ಹಾಕಿಕೊಂಡು ಶೋ ನಡೆಸಿಕೊಟ್ಟಿದ್ದೆ. ಒಮ್ಮೆ ಬೆನ್ನಿನ ಸಮಸ್ಯೆಯಾಗಿ ಕೋಟ್ ಒಳಗೆ ಐಸ್ಬ್ಯಾಗ್ ಇಟ್ಟುಕೊಂಡು ನಡೆಸಿಕೊಟ್ಟಿದ್ದೆ. ಆದರೆ, ಕಳೆದ ಸೀಸನ್ ಸಮಯದಲ್ಲಿ ಮಾತ್ರ ಕರೊನಾದಿಂದಾಗಿ ಭಾಗವಹಿಸುವುದಕ್ಕೆ ಸಾಧ್ಯವಾಗಲಿಲ್ಲ ಎನ್ನುತ್ತಾರೆ ಸುದೀಪ್.bigg-boss-kannada-ott

ಇನ್ನು, ಅವರು ಈ ಕಾರ್ಯಕ್ರಮದ ಬಗ್ಗೆ ಯಾವಾಗಲೂ ಯೋಚಿಸುತ್ತಿರುತ್ತಾರಂತೆ. ‘ಮಳೆ ನೀರಲ್ಲಿ ನೆನೆಯುವ ಸೀನ್ ಇದ್ದರೆ ಬಿಸಿನೀರಲ್ಲಿ ಶೂಟ್ ಮಾಡೋಕೆ ಸಾಧ್ಯವಾ ಅಂತ ಚಿತ್ರತಂಡವನ್ನು ಕೇಳಿದ್ದೇನೆ. ಹೊರದೇಶಗಳಲ್ಲಿ ಚಿತ್ರೀಕರಣ ಮಾಡುವಾಗ ಸರಿಯಾದ ಸಮಯಕ್ಕೆ “ಬಿಗ್ ಬಾಸ್’ ಕಾರ್ಯಕ್ರಮಕ್ಕೆ ಬರಬೇಕು ಅಂತ ಎರಡು, ಮೂರು ಫ್ಲೈಟ್ ಟಿಕೆಟ್ ಬುಕ್ ಮಾಡಿಕೊಂಡು ಬಂದಿದ್ದೂ ಇದೆ. ಒಂದು ವಾರದ ಎಲ್ಲ ಎಪಿಸೋಡ್ಗಳನ್ನು ನೋಡಿಯೇ ನಾನು ಕಾರ್ಯಕ್ರಮ ನಡೆಸಿಕೊಡುತ್ತೇನೆ. ನಾನು ಹಣಕ್ಕಾಗಿ ಅಥವಾ ಯಾರದೋ ಒತ್ತಡಕ್ಕೆ ಮಣಿದು ಏನನ್ನೂ ಮಾಡುವುದಿಲ್ಲ. ‘ಬಿಗ್ ಬಾಸ್’ ಮೇಲಿನ ಪ್ರೀತಿ ಇರುವುದರಿಂದಲೇ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತೇನೆ ಎನ್ನುತ್ತಾರೆ.bigg-boss-kannada-ott

ಬೇರೆ ಭಾಷೆಗಳಲ್ಲಿ ‘ಬಿಗ್ ಬಾಸ್’ ಕಾರ್ಯಕ್ರಮವನ್ನು ಹಲವರು ನಡೆಸಿಕೊಟ್ಟ ಉದಾಹರಣೆಗಳಿವೆ. ಆದರೆ, ಕನ್ನಡದಲ್ಲಿ ಮಾತ್ರ ಸುದೀಪ್ ಒಬ್ಬರೇ ಎಲ್ಲ ಸೀಸನ್ಗಳನ್ನು ನಡೆಸಿಕೊಟ್ಟಿರುವುದು ವಿಶೇಷ.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…