ಭೋರ್ಗರೆವ “ಕಡಲ್” ಕಹಾನಿ! ಮತ್ತೆ ಪ್ರಯೋಗಕ್ಕೆ ಒಡ್ಡಿಕೊಂಡ ಬಸ್ರೂರು!!

Bhorgareva "Kadal" Kahani! Basrur exposed to the experiment again

ಕರಾವಳಿಯಲ್ಲಿ ಸಿನಿಮಾಗಳು ಸದ್ದು ಮಾಡೋದು ಕಡಿಮೆ; ಆದರೆ, ಸಿನಿಮಾದಲ್ಲಿ ‘ಕರಾವಳಿಗರ ಸದ್ದು’ ದೊಡ್ಡ ಮಟ್ಟಕ್ಕಿದೆ.! ಇದೇ ಹಾದಿಯಲ್ಲಿ ನಡೆದು-ದುಡಿದು ಸದ್ದು ಮಾಡಿ ಗೆದ್ದು ಬಂದವರಲ್ಲಿ ಸಂಗೀತ ನಿರ್ದೇಶಕ ರವಿ ಬಸ್ರೂರು ಪ್ರಮುಖರು. ಗಡಿಯಾಚೆಗೂ ಖ್ಯಾತಿ ವಿಸ್ತರಿಸಿ ಬಾಲಿವುಡ್ಡಿನವರೆಗೂ ದಾಂಗುಡಿ ಇಟ್ಟು, ಸದ್ದಿನ ಸಂಗೀತ ಕೊಟ್ಟು ಸೈ ಎನಿಸಿಕೊಂಡಿರೋ ಬಸ್ರೂರು, ಸದಾ ಪ್ರಯೋಗಶೀಲ ವ್ಯೆಕ್ತಿ. ಅದೇ ತೆರನಲ್ಲಿ ಸದ್ಯ “ಕಡಲ್” ಎಂಬ ಚಿತ್ರವನ್ನ ಸದ್ದಿಲ್ಲದೇ ಮುಗಿಸಿ ತೆರೆಯತ್ತ ತರುತ್ತಿದ್ದಾರೆ. ಈ ಚಿತ್ರದ “ಟ್ರೈಲರ್” ಬಿಡುಗಡೆ ಕಂಡು ಸಖತ್ ಸದ್ದು ಮಾಡುತ್ತಿದೆ.Bhorgareva "Kadal" Kahani! Basrur exposed to the experiment again ಎನ್ ಎಸ್ ರಾಜ್ ಕುಮಾರ್ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರದ ತಾರಾಗಣದಲ್ಲಿ ಸೌರಭ್ ಭಂಡಾರಿ, ಸೂಚನ್ ಶೆಟ್ಟಿ, ಚಿರಶ್ರೀ ಅಂಚನ್, ಭಾಸ್ಕರ್ ಬಸ್ರೂರು, ವಿಜಯ್ ಬಸ್ರೂರು, ಪ್ರಭಾಕರ ಕುಂದರ್, ಸುಜಾತ ಆಂದ್ರಾದೆ ಸೇರಿದಂತೆ ಹಿರಿ-ಕಿರಿಯ ಸಮಾಗಮವಿದ್ದಂತೆ ಕಾಣುತ್ತಿದೆ. ಮೇಲ್ನೋಟಕ್ಕೆ ಈ ಚಿತ್ರದಲ್ಲಿ ಕರಾವಳಿಯ ದೃಶ್ಯ ವೈಭವವನ್ನ ಕಣ್ಣಿಗೆ ಹಬ್ಬದಂತೆ ಕಟ್ಟಿಕೊಟ್ಟಂತೆ ಕಾಣುತ್ತಿದ್ದು, ಪಕ್ಕಾ ದೇಸೀ ಶೈಲಿಯ ಹೊಸ ನಿರೂಪಣೆಯೊಂದಿಗೆ ಹೊಸ ಭರವಸೆಯ ಹೊಸ ಮುಖಗಳು ವಿಜೃಂಭಿಸಿವೆ.Bhorgareva "Kadal" Kahani! Basrur exposed to the experiment again

ಜೊತೆ-ಜೊತೆಗೆ ರವಿ ಬಸ್ರೂರು ಹಿನ್ನೆಲೆ ಸಂಗೀತದೊಂದಿಗೆ, ಸಚಿನ್ ಬಸ್ರೂರು ಕ್ಯಾಮೆರಾ ಕುಸುರಿಯಲ್ಲಿ ‘ಕಡಲ ವೈಭವ’ ಕಾಣಲು ಆಕರ್ಷಿಸುತ್ತಿದೆ. ಹಾಗೆಯೆ, ಚಿತ್ರದ ಟೀಸರ್, ಟ್ರೈಲರ್ ತುಣುಕುಗಳನ್ನು ನೋಡುವಾಗ ಇದೊಂದು, ಕಡಲ ಆರ್ತನಾದದಲ್ಲಿ ತಂದೆ-ಮಗನ ಬಾಂಧವ್ಯದ ಕಥೆ ಹೇಳುವ ಸಿನಿಮಾ ಅನಿಸಿದರೂ, ಇಲ್ಲೊಂದು ಬಗೆಯ ಮಧುರ ಪ್ರೇಮಕಥೆಯ ಜೊತೆ ದ್ವೇಷದ ಹೂರಣವೂ ಚಿತ್ರದಲ್ಲಿದ್ದಂತೆ ಕಾಣುತ್ತಿದ್ದು, ಚಿತ್ರದ ಮೇಲೊಂದು ನಿರೀಕ್ಷೆ ಇಡುವಂತಾಗಿದೆ.Bhorgareva "Kadal" Kahani! Basrur exposed to the experiment again ಅದೇನೇ ಇರಲಿ, ಗರಗರ ಮಂಡಲ,ಕಟಕ, ಬಿಲಿಂಡರ್, ಗಿರ್ಮಿಟ್ ಸಿನಿಮಾಗಳು ಸೇರಿದಂತೆ ಪ್ರತಿ ಬಾರಿಯೂ ಒಂದಿಲ್ಲ ಒಂದು ಬಗೆಯಲ್ಲಿ ವಿಶೇಷ ಹೊತ್ತು ತಂದು, ಸದಾ ಪ್ರಯೋಗಕ್ಕೆ ಒಡ್ಡಿಕೊಳ್ಳುವ ರವಿ ಬಸ್ರೂರು ಮತ್ತವರ ತಂಡದ “ಕಡಲ್” ಕೂಡ ಒಂದು ಪ್ರಯೋಗವೆ ಆಗಿದೆ.Bhorgareva "Kadal" Kahani! Basrur exposed to the experiment again

ಇಲ್ಲಿ ಖಾಸಗಿ ಪ್ರದರ್ಶನದ ಮೂಲಕ ಸಮಾನ ಮನಸ್ಕರ ನೆರಳು ನೆಚ್ಚಿಕೊಂಡು ಚಿತ್ರ ತೆರೆಗೆ ತರಲಾಗುತ್ತಿದೆ. ಇದೇ ಮೇ ಹತ್ತಂಬತ್ತರ ಶುಕ್ರವಾರ ಕೋಟೇಶ್ವರದ ‘ಭಾರತ್ ಸಿನಿಮಾ’ಸ್ ‘ ನಲ್ಲಿ ಚಿತ್ರ ಪ್ರದರ್ಶನ ಕಾಣಲು ಅಣಿಯಾಗಿದೆ. ಸಾಕಷ್ಟು ನಿರೀಕ್ಷೆಯೊಂದಿಗೆ ತೆರೆಯತ್ತ ಬರುತ್ತಿರುವ ‘ಕಡಲ್’ ಚಿತರರಸಿಕರ ಮನಗೆದ್ದು, ಬಸ್ರೂರ್ ತಂಡದ ಕೈಹಿಡಿಯಲಿದೆಯಾ? ಕಾದು ನೋಡೋಣ.

-ನಾಗರಾಜ್ ಅರೆಹೊಳೆ.Bhorgareva "Kadal" Kahani! Basrur exposed to the experiment again

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…