ಮತ್ತೆ ಹಳ್ಳಿ ಸೊಗಡಿನ ಟ್ರೆಂಡ್‌ ಕ್ರಿಯೇಟ್‌ ಮಾಡತ್ತಾ ಬೆಂಕಿ?

ಅನೀಶ್ ತೇಜೇಶ್ವರ್ ಅಭಿನಯದ ‘ಬೆಂಕಿ’, ಜುಲೈ 15ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗುವುದಕ್ಕೆ ಸಜ್ಜಾಗಿದೆ. ಇದು ಅವರ ಅಭಿನಯದ 10ನೇ ಚಿತ್ರವಾದರೆ, ನಿರ್ಮಾಣದ ಮೂರನೆಯ ಚಿತ್ರವಾಗಿದೆ. ಈ ಚಿತ್ರದ ಮೂಲಕ ಅವರು ಹೊಸ ಟ್ರೆಂಡ್ ಸೃಷ್ಟಿ ಮಾಡುವುದಕ್ಕೆ ಮುಂದಾಗಿದ್ದಾರೆ.maxresdefault 6

ಹೊಸ ಟ್ರೆಂಡ್ ಎಂದರೆ, ಅದೇನು ಎಂಬ ಪ್ರಶ್ನೆ ಬರುವುದು ಸಹಜ. ಸಾಮಾನ್ಯವಾಗಿ, ಎಲ್ಲ ಚಿತ್ರತಂಡಗಳು ಜನರಿಗೆ ತಮ್ಮ ಚಿತ್ರವನ್ನು ತೋರಿಸುವುದಕ್ಕೆ ಮೊದಲು ಟೀಸರ್ ಮತ್ತು ಟ್ರೇಲರ್ ಬಿಡುಗಡೆ ಮಾಡುತ್ತಾರೆ. ಆದರೆ, ಅನೀಶ್ ಇವೆರಡರ ಜೊತೆಗೆ ತಮ್ಮ ಚಿತ್ರದ ಕೆಲವು ಪ್ರಮುಖ ಇಡೀ ದೃಶ್ಯಗಳನ್ನೇ ಸ್ನೀಕ್ ಪೀಕ್ ಎಂಬ ಹೆಸರಿನಲ್ಲಿ ಸೋಷಿಯಲ್ ಬಿಡುಗಡೆ ಮಾಡಿದ್ದಾರೆ. ಆ ದೃಶ್ಯಗಳಿಗೆ ಚಿತ್ರ ನೋಡುವುದಕ್ಕೆ ಬನ್ನಿ ಎಂದು ಪ್ರೇಕ್ಷಕರಿಗೆ ಆಹ್ವಾನ ಮಾಡುತ್ತಾರೆ.

ಈ ಕುರಿತು ಮಾತನಾಡುವ ಅವರು, ‘ಎಲ್ಲ ಚಿತ್ರತಂಡದವರು ಸಹ ತಮ್ಮ ಚಿತ್ರ ಬಹಳ ಚೆನ್ನಾಗಿ ಮೂಡಿಬಂದಿದೆ ಎಂದು ಹೇಳುತ್ತಾರೆ. ಎಲ್ಲವನ್ನೂ ಕೇಳಿ ಜನರಿಗೆ ಯಾವುದು ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎಂಬ ಗೊಂದಲ ಕಾಡುವುದು ಸಹಜ. ಹಾಗಾಗಿ, ನಾನು ಚಿತ್ರದ ಟ್ರೇಲರ್ ತೋರಿಸುವುದರ ಜೊತೆಗೆ, ಕೆಲವು ದೃಶ್ಯಗಳನ್ನು ಸಹ ತೋರಿಸುತ್ತೇನೆ. ಒಂದು ಕಾಮಿಡಿ ದೃಶ್ಯದ ಜೊತೆಗೆ ಹಾರರ್ ಮತ್ತು ಸೆಂಟಿಮೆಂಟ್ ದೃಶ್ಯಗಳನ್ನು ಸಹ ತೋರಿಸುತ್ತೇನೆ. ಅದನ್ನು ನೋಡಿ ಇಷ್ಟವಾದರೆ ಚಿತ್ರಮಂದಿರಕ್ಕೆ ಬನ್ನಿ. ಇಲ್ಲವಾದರೆ ಬೇಡ. ಇಷ್ಟವಾದರೆ, ಸಂತೋಷ. ಇಲ್ಲವಾದರೆ, ಏನೂ ಮಾಡುವುದಕ್ಕೆ ಆಗುವುದಿಲ್ಲ. ಮೊದಲಿಗೆ ಜನ ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡುವುದು ಬಹಳ ಕಡಿಮೆಯಾಗುತ್ತಿದೆ. ಕೊನೆಯ ಪಕ್ಷ ಚಿತ್ರದಲ್ಲಿ ಏನಿದೆ ಎಂದು ಗೊತ್ತಾದರಾದರೂ, ಜನ ಚಿತ್ರಮಂದಿರಕ್ಕೆ ಬರಬಹುದು’ ಎಂಬ ನಿರೀಕ್ಷೆಯಲ್ಲಿದ್ದಾರೆ ಅನೀಶ್.maxresdefault 5

ಇದುವರೆಗೂ ಹೆಚ್ಚಾಗಿ ಆಕ್ಷನ್ ಹೀರೋ ಇಮೇಜ್ನಲ್ಲೇ ಕಾಣಿಸಿಕೊಂಡಿದ್ದ ಅನೀಶ್, ಇದೇ ಮೊದಲ ಬಾರಿಗೆ ಕಾಮಿಡಿ ಮಾಡಿದ್ದಾರಂತೆ. ಈ ಕುರಿತು ಮಾತನಾಡುವ ಅವರು, ‘ನನಗೆ ಕಾಮಿಡಿ ಎಂದರೆ ಬಹಳ ಇಷ್ಟ. ಕಾಮಿಡಿಗಾಗಿಯೇ ಇನ್ನೊಂದು ಟ್ರಾಕ್ ಮಾಡುವುದು ನನಗೆ ಇಷ್ಟವಿಲ್ಲ. ನಾಯಕನ ಜತೆಗೆ ಕಾಮಿಡಿ ಇದ್ದರೆ ಚೆನ್ನ ಎಂಬುದು ನನ್ನ ನಂಬಿಕೆ. ಏಕೆಂದರೆ, ನಿಜಜೀವನದಲ್ಲಿ ಯಾವಾಗಲೋ ಒಮ್ಮೆ ಸಿಟ್ಟು ಬರುತ್ತದೆ. ಅದು ಬಿಟ್ಟು ಯಾವಾಗಲೂ ಸಿಡಿಯುತ್ತಲೇ ಇರುವುದಿಲ್ಲ. ನಾನು ನನ್ನ ಸ್ನೇಹಿತರ ಜತೆಗೆ ಜಾಲಿಯಾಗರುತ್ತೇನೆ. ಅದೇ ತರಹ ಈ ಚಿತ್ರದಲ್ಲೂ ನಾಯಕ ಯಾವಾಗಲೂ ಸಿಟ್ಟಾಗಿರುವುದಿಲ್ಲ. ಅಗತ್ಯ ಬಿದ್ದಾಗ ಮಾತ್ರ ಸಿಟ್ಟಾಗುತ್ತಾನೆ. ಮಿಕ್ಕಂತೆ ನಗುತ್ತಾ, ನಗಿಸುತ್ತಾ ಇರುತ್ತಾನೆ. ಚಿತ್ರದಲ್ಲಿ ಬರೀ ಆಕ್ಷನ್ ಅಥವಾ ಸೆಂಟಿಮೆಂಟ್ ಮಾತ್ರವಲ್ಲ, ಸಾಕಷ್ಟು ಕಾಮಿಡಿ ಸಹ ಇದೆ’ ಎನ್ನುತ್ತಾರೆ ಅನೀಶ್.

ಶಾನ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ‘ಬೆಂಕಿ’ ಚಿತ್ರದಲ್ಲಿ ಈ ಚಿತ್ರದಲ್ಲಿ ಅನೀಶ್ಗೆ ನಾಯಕಿಯಾಗಿ ಸಂಪದ ಹುಲಿವಾನ ನಟಿಸಿದ್ದು, ಮಿಕ್ಕಂತೆ ಶ್ರುತಿ ಪಾಟೀಲ್, ಅಚ್ಯುತ್ ಕುಮಾರ್, ಹರಿಣಿ, ‘ಉಗ್ರಂ’ ಮಂಜು ಮುಂತಾದವರು ನಟಿಸಿದ್ದಾರೆ.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…