ಬೆಂಕಿ : ಖಡಕ್ ಫೈಟು, ಮನಮಿಡಿಯುವ ಸೆಂಟಿಮೆಂಟು!

benki kannada movie review

Benki 3.5/5

ಒಂದು ಹಳ್ಳಿ, ಅಲ್ಲಿ ತಂಗಿಯನ್ನೇ ಜೀವದಂತೆ ಪೊರೆಯುವ ಅಣ್ಣ. ಅವಳಿಗೂ ಅಣ್ಣನೆಂದರೆ ಪ್ರಾಣ. ಆರಿಹೋದ ಬೆಂಕಿಯಂತೆ ಕಂಡರೂ, ಒಳಗೊಳಗೇ ಧಗಧಗಿಸುವ ಕೆಂಡ ಅವನು. ತಂಗಿಯ ತಂಟೆಗೆ ಬಂದವರ ಮೇಲೆ ಬಗ್ಗನೆ ಹತ್ತಿ ಉರಿಯುತ್ತಾನೆ. ಇಂಥ ಅಣ್ಣ ಬಯಸಿದ್ದಕ್ಕೆಲ್ಲಾ ವಿರುದ್ಧವಾದ ಘಟನೆಗಳು ಜರುಗುತ್ತವೆ. ಇಂಥದ್ದೊಂದು ಕಥೆ ಕನ್ನಡ ಸಿನಿಮಾದಿಂದ ದೂರ ನಿಂತು ತುಂಬಾನೇ ವರ್ಷಗಳಾಗಿದ್ದವು. ಜನ ಎತ್ತೆತ್ತಲೋ ಓಡುತ್ತಿರುವಾಗ ಮತ್ತೆ ಹಳ್ಳಿ ಸೊಗಡನ್ನು ಮನಸಿಗೆ ತಾಕಿಸುವ ಸಿನಿಮಾ ʻಬೆಂಕಿʼ.maxresdefault 6

ಎಲ್ಲವೂ ತನ್ನಿಚ್ಚೆಯಂತೆ ನಡೆಯುತ್ತಿದೆ. ಒಳ್ಳೇ ಸಂಬಂಧವೂ ಕೂಡಿಬಂದಿದೆ. ತಂಗಿ ಬದುಕು ಬಂಗಾರವಾಯ್ತು… ಅಂತಾ ಸಮಾಧಾನ ಪಡುವಷ್ಟರಲ್ಲಿ ಅರಗಿಸಿಕೊಳ್ಳಲಾರದ ಸಂಗತಿ ಎದುರಾಗುತ್ತದೆ. ಏನದು? ಆ ನಂತರ ಏನೆಲ್ಲಾ ತಿರುವುಗಳು ಎದುರಾಗಬಹುದು? ಅನ್ನೋದು ʻಬೆಂಕಿʼಯ ತೀವ್ರತೆಯನ್ನು ಹೆಚ್ಚಿಸುತ್ತದೆ.
maxresdefault 5ಮೊದಲ ಭಾಗ ಬಹುತೇಕ ಕಾಮಿಡಿ ದೃಶ್ಯಗಳ ಮೂಲಕವೇ ಕತೆ ಸಾಗುತ್ತದೆ. ನಗಿಸುತ್ತಲೇ ಭಾವುಕ ಕ್ಷಣಗಳಿಗೆ ಕರೆದೊಯ್ಯುವುದು ಬಹುಶಃ ಉದ್ದೇಶವಾಗಿರಬಹುದು. ಆದರೆ ಹಾಸ್ಯ ಪ್ರಸಂಗಗಳು ಯಾಕೋ ಹೇಳಿಕೊಳ್ಳುವ ಮಟ್ಟಕ್ಕೆ ವರ್ಕೌಟ್ ಆಗಿಲ್ಲ. ಆದರೆ ದ್ವಿತೀಯಾರ್ಧ ಎಂಥವರ ಕಣ್ಣುಗಳನ್ನೂ ತೇವ ಮಾಡಿಸುತ್ತವೆ. ಕೆಲವೊಂದು ದೃಶ್ಯಗಳು ನಿಜಕ್ಕೂ ಪ್ರೇಕ್ಷಕರನ್ನು ಬಿಕ್ಕಿ ಬಿಕ್ಕಿ ಅಳುವಂತೆ ಮಾಡುತ್ತವೆ. ಏಕಾಏಕಿ ಚಿತ್ರಕತೆಯೂ ಬಿಗಿಯಾಗುತ್ತದೆ.
ಅನೀಶ್ ಯಾವ ಕೊರತೆಯೂ ಇಲ್ಲದ ಕನ್ನಡ ಚಿತ್ರರಂಗದ ಪರ್ಫೆಕ್ಟ್ ಹೀರೋ. ನಟನೆ, ಡ್ಯಾನ್ಸು, ಫೈಟು ಎಲ್ಲವನ್ನೂ ಅದ್ಭುತವಾಗಿ ನಿರ್ವಹಿಸುವವರು. ಇಲ್ಲಿ ಅಕ್ಕರೆಯ ಅಣ್ಣನಾಗಿ, ಸುಡುಸುಡುವ ʻಬೆಂಕಿʼಯ ಜ್ವಾಲೆಯಾಗಿದ್ದಾರೆ. ಶೃತಿ ಪಾಟೀಲ್ ತಂಗಿ ಪಾತ್ರಕ್ಕೆ ಹೇಳಿಮಾಡಿಸಿದಂತಿದ್ದಾರೆ. ನಾಯಕಿ ಸಂಪದಾ ಹುಲಿವಾನ ಪಾತ್ರ ಪರವಾಗಿಲ್ಲ. ಉಗ್ರಂ ಮಂಜು ಪಾತ್ರದ ಕಲ್ಪನೆ ಮತ್ತು ಅವರ ಅಭಿನಯ ಎರಡೂ ಚೆಂದ. ತೂತುಮಡಿಕೆ ಚಂದ್ರಕೀರ್ತಿ ಕೂಡಾ ಊಹೆ ಮಾಡಲಾರದಂಥಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಪತ್ ಮೈತ್ರೇಯ ಬಗ್ಗೆ ಹೊಸದಾಗಿ ಹೇಳಲೇನೂ ಇಲ್ಲ. ಈ ನಟ ಕನ್ನಡ ಚಿತ್ರರಂಗಕ್ಕೆ ಸಿಕ್ಕಿರುವ ಅಮೂಲ್ಯ ಸಂಪತ್ತಷ್ಟೇ. ʻಬೆಂಕಿʼಯಲ್ಲಿ ಕಡಿಮೆ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಹೆಚ್ಚು ಸ್ಕೋರು ಮಾಡಿದ್ದಾರೆ. ಏನದು ಅನ್ನೋದು ತೆರೆ ಮೇಲೆ ನೋಡಿದರಷ್ಟೇ ಸರಿ.maxresdefault 7
ಹಿರಿಯ ನಿರ್ದೇಶಕ ಎ.ಆರ್ ಬಾಬು ಪುತ್ರ ಎ.ಆರ್. ಶಾನ್ ನಿರ್ದೇಶಿಸಿರುವ ಚಿತ್ರ ಇದು. ಇನ್ನೊಂದಿಷ್ಟು ಶ್ರಮಿಸಿದ್ದಿದ್ದರೆ ಬೇರೆ ಲೆವೆಲ್ಲಿಗೆ ತೆಗೆದುಕೊಂಡು ಹೋಗಬಹುದಿತ್ತು ಅನ್ನೋದನ್ನು ಬಿಟ್ಟರೆ ʻಬೆಂಕಿʼ ಎಲ್ಲೂ ಬೇಸರ ಮೂಡಿಸದೆ ನೋಡಿಸಿಕೊಂಡು ಹೋಗುವ ಗುಣ ಹೊಂದಿದೆ. ಸೆಂಟಿಮೆಂಟ್ ಸಿನಿಮಾಗಳನ್ನು ಇಷ್ಟ ಪಡುವವರು ಮಾತ್ರವಲ್ಲ, ಆಕ್ಷನ್ ಪ್ರಿಯರೂ ನೋಡಬಹುದಾದ ಪಕ್ಕಾ ಕಮರ್ಷಿಯಲ್ ಸಿನಿಮಾ ಇದು.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…