ಜನರ ಪ್ರೀತಿ ಸಿಕ್ಕಿದೆ… ಇನ್ನು ಜಗತ್ತೇ ಗೆಲ್ತೀನಿ ಅಂದರು ಝೈದ್

banaras kannda movie hit

ಝೈದ್ ಖಾನ್ ಅಭಿನಯದ ‘ಬನಾರಸ್’ ಚಿತ್ರದ ಬಿಡುಗಡೆಗೆ ಇನ್ನು ಮೂರು ದಿನಗಳಷ್ಟೇ ಇದೆ. ನವೆಂಬರ್ 4ರಂದು ಚಿತ್ರವು ಬರೀ ಕರ್ನಾಟಕದಲ್ಲಷ್ಟೇ ಅಲ್ಲ, ಪ್ಯಾನ್ ಇಂಡಿಯಾ ಚಿತ್ರವಾಗಿ, ಐದು ಭಾಷೆಗಳಲ್ಲಿ ದೇಶಾದ್ಯಂತ ಬಿಡುಗಡೆಯಾಗಲಿಲ್ಲ.banaras movie zameer ahmed khan

‘ಬನಾರಸ್’ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಝೈದ್. ಈ ಚಿತ್ರ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ. ಒಂದು ಪಕ್ಷ ಚತ್ರ ಗೆಲ್ಲದಿದ್ದರೆ, ಅಂದು ತಮ್ಮೊಳಗಿನ ಕಲೆ ಸಾಯುತ್ತದೆ ಎಂದು ಭಾವುಕರಾಗಿ ನುಡಿಯುತ್ತಾರೆ ಝೈದ್.banaras kannada movie song release

‘ಈ ಚಿತ್ರ ಚೆನ್ನಾಗಿಲ್ಲ ಎಂದರೆ ಅಂದು ಒಬ್ಬ ಮನುಷ್ಯ ಸಾಯುತ್ತಾನೆ. ಅದು ನನ್ನೊಳಗಿರುವ ಕಲೆ. ನನ್ನಲ್ಲಿರುವ ನಟ ಸಾಯುತ್ತಾನೆ. ನಾನು ಸಾಯಬೇಕೋ ಅಥವಾ ಜನರು ಕಾಪಾಡುತ್ತಾರೋ ಎಂಬುದನ್ನು ನೋಡಬೇಕು. ನನಗೆ ಈ ಚಿತ್ರದ ಬಗ್ಗೆ ಖುಷಿ ಮತ್ತು ಭಯ ಎರಡೂ ಇದೆ. ಒಂದು ಮಾತನ್ನಂತೂ ಹೇಳುತ್ತೇನೆ. ಅಪ್ಪ ತಲೆ ಬಗ್ಗಿಸುವಂತಹ ಕೆಲಸವನ್ನು ನಾನು ಯಾವತ್ತೂ ಮಾಡುವುದಿಲ್ಲ. ತಲೆ ಎತ್ತುವ ಕೆಲಸ ಮಾಡುತ್ತೇನೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.banaras kannada movie song release

ಈ ಹಿಂದೆ, ತಮ್ಮ ತಂದೆ ಶಾಸಕ ಜಮೀರ್ ಅಹ್ಮದ್ ಖಾನ್ ತನಗೆ ಸಪೋರ್ಟ್ ಮಾಡಲಿಲ್ಲ ಎಂದು ಝೈದ್ ಬೇಸರಿಸಿಕೊಂಡಿದ್ದರು. ಚಿತ್ರದ ಮೊದಲ ಪತ್ರಿಕಾಗೋಷ್ಠಿಯಲ್ಲಿ, ತಮ್ಮ ಕುಟುಂಬದವರಿಂದ ಯಾವುದೇ ಸಹಕಾರ ಸಿಕ್ಕಿರಲಿಲ್ಲ ಎಂದು ಹೇಳಿಕೊಂಡಿದ್ದರು. ಆದರೆ, ತಮ್ಮ ತಂದೆಯವರಿಂದ ದೈಹಿಕವಾದ ಸಹಕಾರ ಸಿಗದಿದ್ದರೂ, ಮಾನಸಿಕವಾಗಿ ಸಹಕಾರ ಯಾವತ್ತೂ ಇತ್ತು ಎನ್ನುತ್ತಾರೆ ಝೈದ್.WhatsApp Image 2022 07 05 at 6.13.22 PM 1

‘ಅಪ್ಪ ನನಗೆ ಸಪೋರ್ಟ್ ಮಾಡಿಲ್ಲ ಅಂತ ಹೇಳಿದ್ದೆ. ಆದರೆ, ಇವತ್ತು ಹೇಳುತ್ತಿದ್ದೇನೆ, ಅವರ ಸಪೋರ್ಟ್ ನನಗೆ ಯಾವತ್ತೂ ಇತ್ತು. ಫಿಸಿಕಲ್ ಆಗಿ ಇರದಿದ್ದರೂ, ಅವರ ಪ್ರಾರ್ಥನೆ ಯಾವತ್ತೂ ನನ್ನ ಜೊತೆಗೆ ಇತ್ತು. ಇನ್ನು, ದರ್ಶನ್ ಅವರ ಸಹಕಾರವಂತೂ ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಅವರು ನನ್ನ ಅಣ್ಣನ ತರಹ. ಅವರಿಗೆ ಫೋನ್ ಮಾಡಿದರೆ ಬಾ ಚಿನ್ನ ಅಂತಾರೆ. ಹೃದಯದಿಂದ ಮಾತನಾಡಿಸುತ್ತಾರೆ. ಹಾಗೆಯೇ ಜನರ ಪ್ರೀತಿ ಸಹ ಬಹಳ ಮುಖ್ಯ. ಎಲ್ಲರ ಪ್ರೀತಿ ಸಿಕ್ಕರೆ ಬರೀ ಇಂಡಿಯಾ ಅಲ್ಲ, ಇಡೀ ಜಗತ್ತು ಗೆದ್ದು ಬರ್ತೀನಿ’ ಎಂದು ವಿಶ್ವಾಸದಿಂದ ನುಡಿಯುತ್ತಾರೆ ಝೈದ್.Banaras Trumpet rang out under the leadership of Zaid Khan!

ಇನ್ನು, ಚಿತ್ರದ ಬಗ್ಗೆ ಮಾತನಾಡುವ ಅವರು, ‘’ಬನಾರಸ್ನ’ಲ್ಲಿ ತುಂಬಾ ಶೆಡ್ಸ್ ಇದೆ. ಮಿಸ್ಟ್ರಿ ಪ್ರೇಮಕಥೆ ಇದೆ. ಆಕ್ಷನ್, ಥ್ರಿಲ್, ಸಸ್ಪೆನ್ಸ್, ಕಾಮಿಡಿ ಎಲ್ಲವೂ ಇದೆ. ಇದನ್ನೆಲ್ಲ ಪಕ್ಕಕ್ಕೆ ಇಟ್ಟರೂ, ಒಂದು ಹೊಸ ಪ್ರಯೋಗ ಇದೆ. ಅದು ಇಷ್ಟ ಆಗುತ್ತದೆ ಎಂಬ ನಂಬಿಕೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಝೈದ್.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…