ಮತ್ತೆ ಒಂದಾದ ಶಿವಣ್ಣ-ಡಾಲಿ-ಚಿಟ್ಟೆ..!

ಪವರ್ ಫುಲ್ ಅನ್ನೋ ಮಾತಿಗೆ ಹೇಳಿಮಾಡಿಸಿದಂತೆ ರೂಪುಗೊಂಡಿದ್ದ ಸಿನಿಮಾ ಟಗರು. ಶಿವಣ್ಣ ಎಂಬ ಸೂಪರ್ ಎನರ್ಜಿ ಜೊತೆಗೆ ಧನಂಜಯ ಮತ್ತು ವಸಿಷ್ಠ ಎನ್ನುವ ಶಕ್ತಿಶಾಲಿ ನಟರನ್ನು ಒಂದು ಸೇರಿಸಿದ್ದ ಚಿತ್ರವದು. ಆ ತನಕ ಧನಂಜಯ ಮತ್ತು ವಸಿಷ್ಠ ಇಬ್ಬರಿಗೂ ಇದ್ದ ಇಮೇಜನ್ನೇ ಬದಲಿಸಿತ್ತು ಟಗರು. ಹೀರೋ ಆಗಿ ನೆಲೆ ನಿಲ್ಲುತ್ತಿದ್ದ ಧನಂಜಯ ಅವರಿಗೆ ಡಾಲಿ ಎನ್ನುವ ಅಡ್ಡ ಹೆಸರನ್ನೂ ಕೊಟ್ಟಿದ್ದರೊಂದಿಗೆ ವಿಲನ್ ಪಾತ್ರದಲ್ಲಿ ಅಬ್ಬರಿಸುವಂತೆ ಮಾಡಿತ್ತು.E7IXIBDUYAEOKBK

ಅದ್ಭುತ ಪ್ರತಿಭೆಯಿದ್ದರೂ ಆ ತನಕ ದೊಡ್ಡ ಮಟ್ಟದ ಗೆಲುವಿಗಾಗಿ ಹಂಬಲಿಸುತ್ತಿದ್ದವರು ವಸಿಷ್ಠ. ಇವರ ಪಾಲಿಗೆ ಚಿಟ್ಟೆ ಅಂತಾ ಹೆಸರನ್ನು ಕರುಣಿಸಿದ್ದು ಮಾತ್ರವಲ್ಲ, ಬಯಸಿದ್ದನ್ನೆಲ್ಲಾ ಕೊಡುವ ಕಾಮಧೇನುವಾಯಿತು ಟಗರು. ಅಪ್ಪಟ ಕನ್ನಡದ ಈ ಎರಡು ಪ್ರತಿಭೆಗಳನ್ನು ಕರ್ನಾಟಕದ ಗಡಿ ದಾಟಿಸಿ ಇಂಡಿಯಾದ ಇತರೆ ಭಾಷೆಗಳಿಗೂ ಕಳಿಸಿಕೊಟ್ಟಿದ್ದು ಕೂಡಾ ಟಗರು ಅಂತಾ ಕರೆಸಿಕೊಂಡ ಅದೊಂದು ಸಿನಿಮಾ. ಖಳನಟರಾಗಿ ಕಾಣಿಸಿಕೊಂಡರೂ ಸ್ಟಾರ್ ವರ್ಚಸ್ಸು ಪಡೆದ ಈ ಇಬ್ಬರೂ ಈಗ ಮತ್ತೆ ಶಿವಣ್ಣನ ಜೊತೆ ಸೇರಿದ್ದಾರೆ.Bairagee1 2f81ccb0 8c2f 11ec 891d 751fcf51b961

ಎಲ್ಲರಿಗೂ ಗೊತ್ತಿರುವಂತೆ ಡಾಲಿ ಶಿವಣ್ಣನ ಬೈರಾಗಿ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಟ್ ಕಾಂಬಿನೇಷನ್ ಜೊತೆ ಚಿಟ್ಟೆ ಕೂಡಾ ಸೇರಿಕೊಳ್ಳಲಿ ಅನ್ನೋದು ಬಹುಶಃ ಚಿತ್ರತಂಡದ ನಿರ್ಧಾರವಾಗಿತ್ತೇನೋ. ಹೀಗಾಗಿ ತೆರೆ ಮೇಲೆ ಕಾಣಿಸಿಕೊಳ್ಳದಿದ್ದರೂ ಪರವಾಗಿಲ್ಲ ಅದ್ಭುತ ಕಂಠದ ಚಿಟ್ಟೆಗೆ ಬೈರಾಗಿಯ ಒಂದು ಹಾಡಿಗೆ ದನಿಯಾಗವ ಅವಕಾಶ ಮಾಡಿಕೊಟ್ಟಿದ್ದಾರೆ. ಈ ಮೂಲಕ ಟಗರು ಚಿತ್ರದ ಸೂಪರ್ ಹಿಟ್ ಕಾಂಬೋ ಬೈರಾಗಿಯ ಭಾಗವಾಗಿದೆ. ಬೈರಾಗಿ ಹಾಡಿಗೆ ವಸಿಷ್ಠ ಸಿಂಹ ಗಾಯನWhatsApp Image 2022 06 21 at 8.41.13 AM

ಈಗಾಗಲೇ ಬಿಡುಗಡೆಯಾಗಿ ಜನಮೆಚ್ಚುಗೆ ಪಡೆದಿರುವ ರಿದಮ್ ಆಫ್ ಶಿವಪ್ಪ ಹಾಡಿಗೆ ಶಿವಣ್ಣನ ಜೊತೆ ನಟ ಶರಣ್ ಕೂಡಾ ದನಿ ಸೇರಿಸಿದ್ದರು. ಈಗ ವಸಿಷ್ಠ ಹಾಡಿರುವ ಪವರ್ ಫುಲ್ ಹಾಡು ಇಷ್ಟರಲ್ಲೇ ರಿಲೀಸಾಗಲಿದೆ. ಮೋಡಿ ವಿದ್ಯೆಯ ಮಹಾಗುರು ಅನೂಪ್ ಸಿಳೀನ್ ನೀಡಿರುವ ಸಂಗೀತದ ಈ ಹಾಡಿನಲ್ಲಿ ಚಿಟ್ಟೆ ಜೊತೆ ಕೆ.ಜಿ.ಎಫ್ ಖ್ಯಾತಿಯ ಅನನ್ಯಾ ಭಟ್ ಕೂಡಾ ಸಾಥ್ ನೀಡಿದ್ದಾರೆ…!85068766

ಜುಲೈ ಒಂದನೇ ತಾರೀಖು ತೆರೆಗೆ ಬರುತ್ತಿರುವ ಬೈರಾಗಿ ಇಂಥಾ ಹತ್ತು ಹಲವು ವಿಶೇಷಗಳನ್ನು ಹೊತ್ತು ಬರುತ್ತಿದೆ….!

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…