ಸ್ಯಾಂಡಲ್ವುಡ್ನಲ್ಲಿ ‘ಸೈರನ್’ ಸೌಂಡ್!?

A 'siren' sound in sandalwood!?

ಎಸ್! ಗಾಂಧಿನಗರಕ್ಕೆ ಹೊಸಬರ ಎಂಟ್ರಿ ಹೊಸದೇನಲ್ಲ. ಈ ಬಣ್ಣದಲೋಕದ ಸೆಳೆತವೇ ಅಂಥದ್ದು. ಎಂಥವರನ್ನೂ ತನ್ನತ್ತ ಎಳೆದು ತರುವ ತಾಕತ್ತು ಬಣ್ಣದ ಲೋಕಕ್ಕಿದೆ. ಹಾಗಂತ ಬಂದ-ಬಂವರೆಲ್ಲಾ ಇಲ್ಲಿ ಭದ್ರ ಅನ್ನೋದು ಸುಳ್ಳು!. ಪ್ರತಿಭೆಯೊಂದಿಗೆ ಪರಿಶ್ರಮ ಪಟ್ಟವರು ಚಿತ್ರರಂಗದಲ್ಲಿ ನೆಲೆಯಾಗೋದಂತು ಸ್ಪಷ್ಟ ಸತ್ಯ.! ಈ ಸಾಲಿಗೆ ನಾನಿದ್ದೇನೆ ಎಂದು “ಸೈರನ್” ಸೌಂಡ್ ಮಾಡುತ್ತಾ ಹೊಸ ಪ್ರತಿಭೆಯೊಬ್ಬ ಎಂಟ್ರಿ ಹಾಕಿದ್ದಾನೆ.siren kannada movie

ಅಸಲಿಗೆ “ಸೈರನ್” ಎಂಬ ಸಖತ್ ಸೌಂಡಿಂಗ್ ಟೈಟಲ್ ಇಟ್ಟುಕೊಂಡು ಚಿತ್ರ ಶುರುಮಾಡಿದ್ದ ಚಿತ್ರತಂಡ ಇದೀಗ ಚಿತ್ರದ ‘ಟೀಸರ್’ ಬಿಡುಗಡೆಗೊಳಿಸಿ ಪ್ರೇಕ್ಷಕರನ್ನ ನಿರೀಕ್ಷೆಯತ್ತ ಹೊರಳಿಸಿಕೊಂಡಿದೆ. ಮೇಲ್ನೋಟಕ್ಕೆ ಇದೊಂದು ‘ಕ್ರೈಂ ಥ್ರಿಲ್ಲರ್’ ಕಂಟೆಂಟ್ ಹೊಂದಿದ ಸಿನಿಮಾ ಎಂಬಂತೆ ಕಾಣುತ್ತಿದ್ದು, ಚಿತ್ರದ ‘ಸೂಪರ್ ಕಾಪ್’ ಪಾತ್ರದಲ್ಲಿ ಕಾಣಿಸಿಕೊಂಡ ಕರಾವಳಿ ಮೂಲದ “ಪ್ರವೀರ್ ಶೆಟ್ಟಿ” ತನ್ನ ಮೊದಲ ಚಿತ್ರದಲ್ಲೇ ‘ರಫ್ ಅಂಡ್ ಟಫ್’ ಲುಕ್ ಅಲ್ಲಿ ‘ಫಿಟ್ ಆಂಡ್ ಫೈನ್’ ಆಗಿ ಕಾಣಿಸಿಕೊಂಡು ಹವಾ ಎಬ್ಬಿಸಿದ್ದಾನೆ. ಅಷ್ಟಕ್ಕು ಈ ಪ್ರವೀರ್ ಶೆಟ್ಟಿ, ಹೇಳಿ-ಕೇಳಿ ಕನ್ನಡಪರ ಹೋರಾಟಗಾರ ಪ್ರವೀಣ್ ಶೆಟ್ಟಿಯ ಮಗ.siren kannada movie

ಅಪ್ಪ ಕನ್ನಡಪರ ಹೋರಾಟಗಳಲ್ಲಿ ಹವಾ ಎಬ್ಬಿಸಿದ್ದರೆ; ಇದೀಗ ಮಗ ಕನ್ನಡ ಚಿತ್ರರಂಗದಲ್ಲಿ ನೆಲೆಯೂರಲು ಸೈರನ್ ಮೂಲಕ ‘ಖದರ್’ ಎಂಟ್ರಿಕೊಟ್ಟಿದ್ದಾನೆ. ಅಂದಹಾಗೆ ಚಿತ್ರದಲ್ಲಿ ಪ್ರವೀರ್ ನಾಯಕನಾಗುವ ಮೊದಲು ಅಭಿನಯ ಸೇರಿದಂತೆ ನಟನಾಗಬೇಕಾದವನಿಗೆ ಇರಬೇಕಾದ ಕೌಶಲಗಳ ತರಬೇತಿಯನ್ನ ಪಡೆದುಕೊಂಡೇ ಪೀಲ್ಡಿಗೆ ಇಳಿದದ್ದು ಚಿತ್ರದ ಟೀಸರ್ನಲ್ಲಿ ಕಾಣುತ್ತಿದೆ‌‌. ಹಾಗಾಗಿ ಪರಿಶ್ರಮ ಎಂದಿಗೂ ವ್ಯರ್ಥವಲ್ಲ; ಸಮಯ ಅದಕ್ಕೊಂದು ಪ್ರತಿಫಲ ಇಟ್ಪಿರುತ್ತೆ‌. ಅದೇನೇ ಇರಲಿ, ಸದ್ಯ ಬಿಡುಗಡೆಗೊಂಡ ಟೀಸರ್ ಸದ್ದಾಗುತ್ತಿದೆ. ಮುಂದೆ ಚಿತ್ರವೂ ಸದ್ದು ಮಾಡಲಿ. ಆ ಮೂಲಕ ಚಿತ್ರರಂಗದಲ್ಲಿ ಮತ್ತೊಬ್ಬ ಆರಡಿ ಕಟೌಟ್ ನೆಲೆಯೂರಲಿ.siren kannada movie

#ನಾಗರಾಜ್ ಅರೆಹೊಳೆ

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…