ಎಸ್! ಗಾಂಧಿನಗರಕ್ಕೆ ಹೊಸಬರ ಎಂಟ್ರಿ ಹೊಸದೇನಲ್ಲ. ಈ ಬಣ್ಣದಲೋಕದ ಸೆಳೆತವೇ ಅಂಥದ್ದು. ಎಂಥವರನ್ನೂ ತನ್ನತ್ತ ಎಳೆದು ತರುವ ತಾಕತ್ತು ಬಣ್ಣದ ಲೋಕಕ್ಕಿದೆ. ಹಾಗಂತ ಬಂದ-ಬಂವರೆಲ್ಲಾ ಇಲ್ಲಿ ಭದ್ರ ಅನ್ನೋದು ಸುಳ್ಳು!. ಪ್ರತಿಭೆಯೊಂದಿಗೆ ಪರಿಶ್ರಮ ಪಟ್ಟವರು ಚಿತ್ರರಂಗದಲ್ಲಿ ನೆಲೆಯಾಗೋದಂತು ಸ್ಪಷ್ಟ ಸತ್ಯ.! ಈ ಸಾಲಿಗೆ ನಾನಿದ್ದೇನೆ ಎಂದು “ಸೈರನ್” ಸೌಂಡ್ ಮಾಡುತ್ತಾ ಹೊಸ ಪ್ರತಿಭೆಯೊಬ್ಬ ಎಂಟ್ರಿ ಹಾಕಿದ್ದಾನೆ.
ಅಸಲಿಗೆ “ಸೈರನ್” ಎಂಬ ಸಖತ್ ಸೌಂಡಿಂಗ್ ಟೈಟಲ್ ಇಟ್ಟುಕೊಂಡು ಚಿತ್ರ ಶುರುಮಾಡಿದ್ದ ಚಿತ್ರತಂಡ ಇದೀಗ ಚಿತ್ರದ ‘ಟೀಸರ್’ ಬಿಡುಗಡೆಗೊಳಿಸಿ ಪ್ರೇಕ್ಷಕರನ್ನ ನಿರೀಕ್ಷೆಯತ್ತ ಹೊರಳಿಸಿಕೊಂಡಿದೆ. ಮೇಲ್ನೋಟಕ್ಕೆ ಇದೊಂದು ‘ಕ್ರೈಂ ಥ್ರಿಲ್ಲರ್’ ಕಂಟೆಂಟ್ ಹೊಂದಿದ ಸಿನಿಮಾ ಎಂಬಂತೆ ಕಾಣುತ್ತಿದ್ದು, ಚಿತ್ರದ ‘ಸೂಪರ್ ಕಾಪ್’ ಪಾತ್ರದಲ್ಲಿ ಕಾಣಿಸಿಕೊಂಡ ಕರಾವಳಿ ಮೂಲದ “ಪ್ರವೀರ್ ಶೆಟ್ಟಿ” ತನ್ನ ಮೊದಲ ಚಿತ್ರದಲ್ಲೇ ‘ರಫ್ ಅಂಡ್ ಟಫ್’ ಲುಕ್ ಅಲ್ಲಿ ‘ಫಿಟ್ ಆಂಡ್ ಫೈನ್’ ಆಗಿ ಕಾಣಿಸಿಕೊಂಡು ಹವಾ ಎಬ್ಬಿಸಿದ್ದಾನೆ. ಅಷ್ಟಕ್ಕು ಈ ಪ್ರವೀರ್ ಶೆಟ್ಟಿ, ಹೇಳಿ-ಕೇಳಿ ಕನ್ನಡಪರ ಹೋರಾಟಗಾರ ಪ್ರವೀಣ್ ಶೆಟ್ಟಿಯ ಮಗ.
ಅಪ್ಪ ಕನ್ನಡಪರ ಹೋರಾಟಗಳಲ್ಲಿ ಹವಾ ಎಬ್ಬಿಸಿದ್ದರೆ; ಇದೀಗ ಮಗ ಕನ್ನಡ ಚಿತ್ರರಂಗದಲ್ಲಿ ನೆಲೆಯೂರಲು ಸೈರನ್ ಮೂಲಕ ‘ಖದರ್’ ಎಂಟ್ರಿಕೊಟ್ಟಿದ್ದಾನೆ. ಅಂದಹಾಗೆ ಚಿತ್ರದಲ್ಲಿ ಪ್ರವೀರ್ ನಾಯಕನಾಗುವ ಮೊದಲು ಅಭಿನಯ ಸೇರಿದಂತೆ ನಟನಾಗಬೇಕಾದವನಿಗೆ ಇರಬೇಕಾದ ಕೌಶಲಗಳ ತರಬೇತಿಯನ್ನ ಪಡೆದುಕೊಂಡೇ ಪೀಲ್ಡಿಗೆ ಇಳಿದದ್ದು ಚಿತ್ರದ ಟೀಸರ್ನಲ್ಲಿ ಕಾಣುತ್ತಿದೆ. ಹಾಗಾಗಿ ಪರಿಶ್ರಮ ಎಂದಿಗೂ ವ್ಯರ್ಥವಲ್ಲ; ಸಮಯ ಅದಕ್ಕೊಂದು ಪ್ರತಿಫಲ ಇಟ್ಪಿರುತ್ತೆ. ಅದೇನೇ ಇರಲಿ, ಸದ್ಯ ಬಿಡುಗಡೆಗೊಂಡ ಟೀಸರ್ ಸದ್ದಾಗುತ್ತಿದೆ. ಮುಂದೆ ಚಿತ್ರವೂ ಸದ್ದು ಮಾಡಲಿ. ಆ ಮೂಲಕ ಚಿತ್ರರಂಗದಲ್ಲಿ ಮತ್ತೊಬ್ಬ ಆರಡಿ ಕಟೌಟ್ ನೆಲೆಯೂರಲಿ.
#ನಾಗರಾಜ್ ಅರೆಹೊಳೆ