ಜೂನ್ 2ರ ಗುರುವಾರ ಬೆಂಗಳೂರಿನ ನಾಗರಬಾವಿಯ ಮಾದೇಶ್ವರ ದೇವಾಲಯದಲ್ಲಿ ಕುಂಬಳಕಾಯಿ ಒಡೆಯುವ ಭಾಗವಾಗಿ ಚಿತ್ರೀಕರಣ ಹಮ್ಮಿಕೊಳ್ಳಲಾಗಿತ್ತು.
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ , ನಿರ್ದೇಶಕ ರಾಮ್ ನಾರಾಯಣ್, ನಿರ್ಮಾಪಕ ಬಸವರಾಜ್ ಮಂಚಯ್ಯ ಹಾಗೂ ನಟಿಯರಾದ ರಾಶಿ ಪೊನ್ನಪ್ಪ, ನಿಮಿಕಾ ರತ್ನಾಕರ್ ಮತ್ತು ಲೇಖಾಚಂದ್ರ ಕಾಣಿಸಿಕೊಂಡರು.
ಟೈಸನ್, ಕ್ರ್ಯಾಕ್ ಹಾಗೂ ಇತರ ಚಿತ್ರಗಳನ್ನು ನಿರ್ದೇಶನ ಮಾಡಿರುವ ರಾಮ್ನಾರಾಯಣ್ ಇದೀಗ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಜೊತೆ ಸೇರಿ ಅಬ್ಬರ ಎಂಬ ಚಿತ್ರ ಮಾಡುತ್ತಿದ್ದು, C&M ಮೂವೀಸ್ ಲಾಂಛನದಲ್ಲಿ ಬಸವರಾಜ್ ಮಂಚಯ್ಯ ನಿರ್ಮಾಣ ಮಾಡುತ್ತಿದ್ದಾರೆ.
ಪ್ರಜ್ವಲ್ ಮೊದಲಬಾರಿಗೆ ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿ ಕೊಳ್ಳುತ್ತಿದ್ದು, ರಾಶಿ ಪೊನ್ನಪ್ಪ, ನಿಮಿಕಾ ರತ್ನಾಕರ್ ಹಾಗೂ ಲೇಖಾಚಂದ್ರ ಜೊತೆಗಿದ್ದಾರೆ. ಚಿತ್ರದ ಕೊನೆಯ ಹಂತದ ಚಿತ್ರೀಕರಣವು ಬ್ಯಾಂಕಾಕ್ ಮತ್ತು ಪಟಾಯ ದಲ್ಲಿ ನಡೆಯಿತು.
ಮಾದೇಶ್ವರ ದೇವಸ್ಥಾನದ ಆವರಣದಲ್ಲೇ ಕುಂಬಳಕಾಯಿ ಒಡೆಯಬೇಕೆಂಬ ಆಶಯದಲ್ಲಿ ಇಲ್ಲಿ ಕೊನೆಯ ಹಂತದ ಚಿತ್ರೀಕರಣ ನಡೆಸಲಾಯಿತು ಎಂಬ ವಿವರ ಕೊಟ್ಟರು ನಿರ್ದೇಶಕ ರಾಮ್ ನಾರಾಯಣ್.
ಜುಲೈ ವೇಳೆಗೆ ಅಬ್ಬರದಿಂದಲೇ ಬರಬೇಕು ಎಂಬುದು ನಮ್ಮ ಉದ್ದೇಶ ಎಂದು ಹೇಳಿಕೊಂಡರು ನಿರ್ಮಾಪಕ ಬಸವರಾಜ ಮಂಚಯ್ಯ. ಈ ಚಿತ್ರ ನನಗೆ ಬಹಳ ವಿಶೇಷವೇ.. ಏಕೆಂದರೆ ಮೂರು ಶೆಡ್ ಗಳಿವೆ ಜೊತೆಗೆ ಕಾಮಿಡಿ, ಆಕ್ಷನ್, ಡ್ರಾಮಾ ಎಲ್ಲವೂ ಇದೆ ಎಂಬುದೆ ಹೆಗ್ಗಳಿಕೆ ಎಂದರು ಪ್ರಜ್ವಲ್ ದೇವರಾಜ್.
ರವಿಶಂಕರ್ ಎರಡು ಶೆಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ
ಶೋಭರಾಜ್, ಶಂಕರ್ ಅಶ್ವಥ್, ವಿಕ್ಟರಿವಾಸು, ಪ್ರಶಾಂತ್ ನಟನ, ಅರಸು ಮಹಾರಾಜ್, ಮೋಹನ್ ಜುನೇಜ, ಉಮೇಶ್, ಗೋವಿಂದೇಗೌಡ, ವಿಜಯ್ ಚೆಂಡೂರ್, ಮೂಗ್ ಸುರೇಶ್, ಸಲ್ಮಾನ್, ಮಮತಾ ರಾಹುತ್, ಖುಷಿ ಹಾಗೂ ಇತರರು ನಟಿಸಿದ್ದಾರೆ.
ರವಿ ಬಸ್ರೂರ್ ಸಂಗೀತವಿದೆ. ಯೋಗರಾಜ್ ಭಟ್, ಪತ್ರಕರ್ತ ವಿಜಯ್ ಭರಮಸಾಗರ ಸಾಹಿತ್ಯ ಬರೆದಿದ್ದಾರೆ. ಜೆ.ಕೆ.ಗಣೇಶ್ ಛಾಯಾಗ್ರಹಣ, ವೆಂಕಟೇಶ್ ಯುಡಿವಿ ಸಂಕಲನ, ವಿನೋದ್, ಪಳನಿರಾಜ, ಮಾಸ್ಮಾದ ಸಾಹಸ, ರಾಮು, ಮೋಹನ್, ಕಲೈ ನೃತ್ಯನಿರ್ದೇಶನ ಚಿತ್ರಕ್ಕಿದೆ ಎಂಬ ವಿವರಗಳು ಬಂದವು.