ಸಿಂಪಲ್ ಸುನಿ ಸಿನಿಮಾಗಳು ಸಿನಿಪ್ರಿಯರ ಇಷ್ಟ ಆಗುವುದಕ್ಕೆ ಕಾರಣವಿದೆ. ಇವರ ಸೃಷ್ಟಿಸುವ ಕಂಟೆಂಟ್ ಪ್ರೇಕ್ಷಕನಿಗೆ ಇಷ್ಟ ಆಗುತ್ತೆ. ಅದರಲ್ಲೂ ಹೊಸ ಪ್ರತಿಭೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವ ಧೈರ್ಯ ಮಾಡುತ್ತಿರುವ ನಿರ್ದೇಶಕರಲ್ಲಿ ಸಿಂಪಲ್ ಸುನಿ ಕೂಡ ಒಬ್ಬರು. ಸಿಂಪಲ್ ಸ್ಟೋರಿಗಳ ಮೂಲಕವೇ ಪ್ರೇಕ್ಷಕರನ್ನು ರಂಜಿಸುವ ನಿರ್ದೇಶಕ ಹೊಸ ಪ್ರಾಜೆಕ್ಟ್‌ಗೆ ಕೈ ಹಾಕಿದ್ದಾರೆ.
ಸುನಿ ಸಿನಿಮಾದ ಟೈಟಲ್‌ಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತವೆ. ಅಪ್ಪಟ ಕನ್ನಡದ ಟೈಟಲ್‌ಗಳನ್ನೇ ಇಟ್ಟು ಸಿನಿಮಾ ಮಾಡುವ ಸುನಿ ಈ ಬಾರಿ ಅಂತಹದ್ದೇ ಒಂದು ಟೈಟಲ್ ಅನ್ನು ಹೊತ್ತು ಬಂದಿದ್ದಾರೆ. ಅದುವೇ ‘ಮೋಡ ಕವಿದ ವಾತಾವರಣ’. ಇಂತಹ ಅಪ್ಪಟ ಕನ್ನಡದ ಟೈಟಲ್‌ಗಳನ್ನು ಕೇಳದೆ ಬಹಳ ದಿನಗಳಾಗಿದ್ದವು. ಸದ್ಯ ಈ ಟೈಟಲ್ ಅಂತೂ ಸಿನಿಮಾ ಪ್ರಿಯರಿಗೆ ತುಂಬಾನೇ ಇಷ್ಟ ಆಗಿಬಿಟ್ಟಿದೆ.
‘ಮೋಡ ಕವಿದ ವಾತಾವರಣ’ ಹಲವು ಆರಂಭದಲ್ಲಿಯೇ ಹಲವು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹೊತ್ತು ಆರಂಭ ಆಗುತ್ತಿದೆ. ಹೊಸಬರನ್ನು ಕ್ಲಾಸ್ ಆಗಿ ಪರಿಚಯಿಸೋದ್ರಲ್ಲಿ ಸುನಿ ಪಂಟರ್ ಅನ್ನೋದು ಇಡೀ ಇಂಡಸ್ಟ್ರಿಗೆ ಗೊತ್ತಿದೆ. ಈ ಬಾರಿ ಅವರು ಪರಿಚಯಿಸುತ್ತಿರುವ ಹೊಸ ಪ್ರತಿಭೆ ಶೀಲಮ್. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಯುವ ಪ್ರತಿಭೆ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಇಲ್ಲೊಂದು ಇಂಟ್ರೆಸ್ಟಿಂಗ್ ವಿಷಯವಿದೆ. ‘ಮೋಡ ಕವಿದ ವಾತಾವರಣ’ ಸಿನಿಮಾದ ಹೀರೋ ಶೀಲಮ್ ನಿರ್ದೇಶಕ ಸಿಂಪಲ್ ಸುನಿಯೊಂದಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಈಗ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಈ ಬಾರಿ ಸಿಂಪಲ್ ಸುನಿ ತನ್ನ ಶಿಷ್ಯನನ್ನೇ ಹೀರೋ ಮಾಡುವುದಕ್ಕೆ ಮುಂದಾಗಿದ್ದಾರೆ. ಹಾಗಂತ ಶೀಲಮ್ ಇದೇ ಮೊದಲ ಬಾರಿಗೆ ನಟಿಸುತ್ತಿರೋದೇ ಅಲ್ಲ. ಈ ಹಿಂದೆ ಕೆಲವು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೀರೋ ಆಗಿ ಚಿತ್ರರಂಗದಲ್ಲಿ ಗೆಲುವಿನ ನಗೆ ಬೀರುವುದಕ್ಕೆ ಮುಂದಾಗಿದ್ದಾರೆ.
ಇನ್ನೂ ಒಂದು ವಿಷಯ ಅಂದರೆ, ಸಿಂಪಲ್ ಸುನಿ ಈ ಸಿನಿಮಾವನ್ನು ಆರಂಭ ಮಾಡಿಲ್ಲ. ಬದಲಿಗೆ ಮುಗಿಸಿದ್ದಾರೆ. ‘ಮೋಡದ ಕವಿದ ವಾತಾವರಣ’ ಇತ್ತೀಚೆಗೆ ಶೂಟಿಂಗ್ ಮುಗಿಸಿದೆ. ಕೊನೆಯ ದಿನದ ಶೂಟಿಂಗ್ ಮುಗಿಸಿದ ಬಳಿಕ ಸಿನಿಮಾದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಸಿಂಪಲ್ ಸುನಿ ತಮ್ಮ ಹೊಸ ಸಿನಿಮಾದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಈ ಸಿನಿಮಾದ ಹೀರೋ ಶೀಲಮ್ ಕೂಡ ಸಿಂಪಲ್ ಸುನಿ ನಿರ್ದೇಶನದಲ್ಲಿ ನಟಿಸಿದ್ದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ. “ಸಿಂಪಲ್ ಸುನಿ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿರುವುದು ನನ್ನ ಅದೃಷ್ಟ” ಎಂದರೆ, ಶೀಲಮ್‌ಗೆ ನಾಯಕಿಯಾಗಿ ನಟಿಸುತ್ತಿರುವ ಸಾತ್ವಿಕಾ ಕೂಡ ಇದು ನನ್ನ ಡ್ರೀಮ್ ಪ್ರಾಜೆಕ್ಟ್ ಎಂದಿದ್ದಾರೆ. “ಸುನಿ ಸರ್ ಜೊತೆ ಕೆಲಸ ಮಾಡಬೇಕೆಂದು ಕೇಳಿಕೊಂಡಿದ್ದೆ. ಅವರ ಬಳಿ ಕಲಿಯುವುದು ತುಂಬಾನೇ ಇದೆ. ಈ ಜರ್ನಿಯಲ್ಲಿ ಬಹಳಷ್ಟು ಕಲಿತಿದ್ದೇನೆ. ಶೀಲಮ್ ಡಿಡಿಕೇಟರ್ ಆಕ್ಟರ್. ಅವರು ಸಿನಿಮಾಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ” ಎಂದು ತಿಳಿಸಿದ್ದಾರೆ.