ಪ್ರೀತಿಗೆ ಭಾಷೆ ಇಲ್ಲ ಭಾಷೆಗೆ ಸಾವಿಲ್ಲ ಕಾದಲ್ ಹೆಸರು ಕೂಡ ಹಾಗೆ ಕನ್ನಡದೇ ಪದವಾದರೂ ಕೂಡ ಅದನ್ನು ಬಳಸದೆ ನಮ್ಮದಲ್ಲದ ಪದ ಎಂದು ಅಂದುಕೊಂಡವರಿಗೆ ಅಪ್ಪಟ ಕನ್ನಡ ಪದ ಎಂಬ ಆತ್ಮವಿಶ್ವಾಸದೊಂದಿಗೆ ಕಾದಲ್ ಅನ್ನು ಚಿತ್ರರಸಿಕರಿಗೆ ನೀಡಲು ನಿರ್ದೇಶಕ ವಿಜಯಪ್ರಿಯ ಸಿದ್ದರಾಗಿದ್ದಾರೆ Muhurta of the film Kaadal
ಪರಿಶುದ್ಧ ಪ್ರೇಮಕಥೆಯ ಕಾದಲ್ ಚಿತ್ರದ ಅದ್ದೂರಿ ಮುಹೂರ್ತ ಬೆಂಗಳೂರಿನ ಶ್ರೀ ಆದಿಶಕ್ತಿ ಮದನಘಟ್ಟಮ್ಮ ದೇವಸ್ಥಾನದಲ್ಲಿ ಭರ್ಜರಿ ಬಹದ್ದೂರ್ ಭರಾಟೆ ಚಿತ್ರದ ಖ್ಯಾತಿಯ ನಿರ್ದೇಶಕರಾದ ಶ್ರೀ ಚೇತನ್ ಕುಮಾರ್ ಅವರು ಕ್ಯಾಮರಾ ಚಲನೆ ಮಾಡುವ ಮುಖಾಂತರ ಮತ್ತು ಶ್ರೀಯುತ ಸುರೇಶ್ ಗೌಡ(R R Gowda )ಅವರು ಕ್ಲಾಪ್ ಮಾಡುವ ಮುಖಾಂತರ ಚಾಲನೆ ನೀಡಿದರು
ಚಿತ್ರದಲ್ಲಿ ನಾಯಕನಾಗಿ ಈಗಾಗಲೇ ಕಿರುತೆರೆಯಲ್ಲಿ ಹೆಸರು ಮಾಡಿರುವಂತಹ ಯುವ ನಟ ಸುಗ್ರೀವ ಅವರು ಅಭಿನಯಿಸುತ್ತಿದ್ದಾರೆ ಭರವಸೆಯ ನಾಯಕ ಆಗುವ ಎಲ್ಲಾ ಗುಣಗಳು ನಾಯಕನಲ್ಲಿದೆ ಮತ್ತು ಸುಗ್ರೀವ್ ಅವರಿಗೆ ಜೊತೆಯಾಗಿ ಗಿಣಿ ಹೇಳಿದ ಕಥೆ ಚಿತ್ರದ ನಾಯಕಿ ಗೀತಾ ಅವರು ನಟಿಸುತ್ತಿದ್ದಾರೆ.
ನಿರ್ದೇಶಕರಾದ ವಿಜಯ್ ಪ್ರಿಯ ಅವರು ಕಾದಲ್ ಚಿತ್ರವನ್ನು ಚಿತ್ರರಸಿಕರಿಗೆ ಹೊಸತರದಿಂದ ಮತ್ತು ಅಪ್ಪಟ ಚಿತ್ರ ಪ್ರೇಮಿಗಳು ಬಯಸುವಂತಹ ಸುಮಧುರ ಗೀತೆಗಳ ಜೊತೆಗೆ ಮನರಂಜನೆ ನೀಡಲು ತುಂಬಾ ಹಂಬಲದಿಂದ ಕಥೆ ಸಿದ್ಧಪಡಿಸಿಕೊಂಡಿದ್ದಾರೆ
ಕಾದಲ್ ಹೆಸರು ಕೇಳಿದ ತಕ್ಷಣ ಇದು ತಮಿಳು ಪದ ಅಂತ ಅನಿಸಬಹುದು ಆದರೆ ಇದು ಅಪ್ಪಟ ಕನ್ನಡದ ಪದ ಎಂಬ ದೃಢವಾದ ನಂಬಿಕೆಯಿಂದ ಮತ್ತು ಪುರಾವೆಗಳೊಂದಿಗೆ ಈ ಚಿತ್ರಕ್ಕೆ ಕಾದಲ್ ಎಂದು ಹೆಸರಿಟ್ಟಿದ್ದಾರೆ
ಒಟ್ಟಾರೆ ನಿರ್ದೇಶಕ ವಿಜಯಪ್ರಿಯ ಅವರು ಪೂರ್ಣ ತಯಾರಿಯೊಂದಿಗೆ ತಮ್ಮ ವಿಜಯದೀಪ ಪ್ರೊಡಕ್ಷನ್ ಅಡಿಯಲ್ಲಿ ಶ್ರೀಮತಿ ದೀಪಿಕಾ ವಿಜಯಪ್ರಿಯ ಮತ್ತು ಸ್ನೇಹಿತರು ನಿರ್ಮಾಣದಲ್ಲಿ ಈ ಚಿತ್ರವನ್ನು ವಿಜಯಪ್ರಿಯ ನಿರ್ದೇಶಿಸುತ್ತಿದ್ದಾರೆ
ಛಾಯಾಗ್ರಹಣ ಸಂಜಯ್ ಎಲ್ ಚನ್ನಪ್ಪ, ಸಂಗೀತ ನಿರ್ದೇಶಕ ಹಿತನ್ ಹಾಸನ್, ಸಾಹಿತ್ಯ ಪುನೀತ ಆರ್ಯ, ಗೌರಿಸೂತ, ಭರ್ಜರಿ ಚೇತನ್, ಹಾಗೂ ವಿ. ಗೋಪಿನಾಥ್ ಸಂಭಾಷಣೆ, ವೆಂಕಿ ಯುಡಿವಿ ಸಂಕಲನ ಚಿತ್ರಕ್ಕಿದೆ.