ಮಧು ಶ್ರೀ
ಅಕುಲ್ ನಿರ್ದೇಶನದಲ್ಲಿ ಮೂಡಿಬಂದಿರುವ “#19” ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಮಧುಶ್ರೀ ತಾನು ಕನ್ನಡ ಚಿತ್ರರಂಗದಲ್ಲಿ ಒಬ್ಬ ಪ್ರತಿಭಾನ್ವಿತ ಕಲಾವಿದೆಯಾಗಿ ಕಾಣಿಸಿಕೊಳ್ಳಬೇಕೆಂಬ ಆಶಯ ಹೊಂದಿದ್ದಾರೆ.
ಬಾಲ್ಯದಿಂದಲೂ ನಟನೆಯ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ಬಂದಿದ್ದು ‘ ಮಧುಶ್ರೀ ‘ ತನ್ನ ಶಾಲಾ ಕಾಲೇಜು ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
‘ಬರ್ಗೆಟ್ ಬಸ್ಯ ‘ ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದು ಚಿತ್ರವು ಡಬ್ಬಿಂಗ್ ಹಂತದಲ್ಲಿದೆ.
ಚಿತ್ರರಂಗದಲ್ಲಿ ಅವಕಾಶಗಳನ್ನು ಹರಸುತ್ತ ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ , K S H ಕ್ರಿಯೇಟಿವ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಈಗಾಗಲೇ ಆಡಿಯೋ ಬಿಡುಗಡೆಯಾಗಿರುವ ‘ನಾಗರಾಜ್ ಎಂ ಜಿ ಗೌಡ’ ನಿರ್ದೇಶನದ ‘ಕಾನೂನೂ ಅಸ್ತ್ರ’ ಚಿತ್ರದಲ್ಲೂ ಒಂದು ಪಾತ್ರವಾಗಿ ಕಾಣಿಸಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಸುಮಾರು ಒಂದು ವರ್ಷಗಳಿಂದ ನಟನೆಯಲ್ಲಿ ತೊಡಗಿಸಿಕೊಂಡಿರುವ ಇವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರು, ತಾಯಿ ಪಾರ್ವತಮ್ಮ ತಂದೆ ಚನ್ನ ಬಸವಾರದ್ಯ ಇವರು ಸಿದ್ಧಗಂಗಾ ಮಠದಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ .
ಬೆಳ್ಳಿ ತೆರೆಯ ಮೇಲೆ ದೊಡ್ಡ ದೊಡ್ಡ ಕಲಾವಿದರೊಂದಿಗೆ ತೆರೆಯನ್ನು ಹಂಚಿಕೊಳ್ಳುವ ಆಸೆಯಿಂದ ಕನ್ನಡ ಚಿತ್ರ ರಂಗಕ್ಕೆ ಬಂದಿದ್ದಾರೆ ಬೆಳ್ಳಿತೆರೆ ಅಲ್ಲದೆ ಕಿರುತೆರೆಯಲ್ಲಿ ‘ ಪುಟ್ಟಕ್ಕನ ಮಕ್ಕಳು’ , ‘ಗಟ್ಟಿಮೇಳ ‘, ‘ಒಲವಿನ ನಿಲ್ದಾಣ’, ‘ಮಂಗಳ ಗೌರಿ ಮದುವೆ’,’ ಬೆಟ್ಟದ ಹೂ’ ಇನ್ನೂ ಮುಂತಾದ ಧಾರಾವಾಹಿಗಳಲ್ಲಿ ಸಣ್ಣ ಪಾತ್ರವನ್ನು ನಿರ್ವಹಿಸಿದ್ದಾರೆ, ಹಾಗೂ ‘ಲವ್ ಕಣೋ ‘, 50/1 page’s, ಎಂಬ ಕಿರುಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
” ನಾನು ಭವಿಷ್ಯದಲ್ಲಿ ನಟನೆಗೆ ಸವಾಲೊಡ್ಡುವ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆಯನ್ನು ಇಟ್ಟುಕೊಂಡಿದ್ದೇನೆ ಕನ್ನಡ ಜನತೆ ನನ್ನ ಪ್ರತಿಭೆಯನ್ನು ಗುರುತಿಸಿ ಚಿತ್ರರಂಗದಲ್ಲಿ ಬೆಳೆಸುತ್ತಾರೆ” ಎಂದು ಮಧುಶ್ರೀ ಅವರು ನಗು ನಗುತ್ತಲೇ ಹೇಳಿದರು.