ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ಈಗ ಕನ್ನಡದ ಗಡಿ ದಾಟಿ ಹಿಂದಿ ಚಿತ್ರರಂಗಕ್ಕೆ ಕಾಲಿಸಿರಿದ್ದಾರೆ. ಆನೆ ಪಟಾಕಿ ಚಿತ್ರದಿಂದ ನಿರ್ದೇಶನ ಆರಂಭಿಸಿ, ನಂತರ ರಥಾವರ, ತಾರಕಾಸುರ ಸಿನಿಮಾಗಳನ್ನು ಕಟ್ಟಿಕೊಟ್ಟವರು ಚಂದ್ರಶೇಖರ್ ಬಂಡಿಯಪ್ಪ.
ಯಾರೂ ಟಚ್ ಮಾಡಿರದ ಭಿನ್ನ ಕಥಾಹಂದರಗಳನ್ನು ಆಯ್ಕೆ ಮಾಡಿಕೊಳ್ಳುವ ಚಂದ್ರಶೇಖರ್ ಕನ್ನಡದಲ್ಲಿ ದೊಡ್ಡ ಪ್ರಾಜೆಕ್ಟ್ಗಳನ್ನು ಕೈಗೆತ್ತಿಕೊಳ್ಳಲಿದ್ದಾರೆ. ಅಂದುಕೊಂಡಂತೇ ಆಗಿದ್ದಿದ್ದರೆ ಈ ಹೊತ್ತಿಗೆ ಶಿವಣ್ಣ ನಟನೆಯ ವೈರಮುಡಿ ಕೂಡಾ ಆರಂಭವಾಗಬೇಕಿತ್ತು. ಕಾರಣಾಂತರಗಳಿಂದ ಅದು ತಡವಾಗಿದೆ. ಈ ಗ್ಯಾಪ್ನಲ್ಲಿವರು ಹಿಂದಿಯ ಚಿತ್ರವೊಂದನ್ನು ಬಹುತೇಕ ಪೂರ್ಣಗೊಳಿಸಿದ್ದಾರೆ.
ದೇಶಾದ್ಯಂತ ಹೆಸರು ಮಾಡಿರುವ ಕನ್ನಡದ ನಟ ಕಿಶೋರ್ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ಈ ಸಿನಿಮಾಗೆ ʻರೆಡ್ ಕಾಲರ್ʼ ಎಂದು ಹೆಸರಿಡಲಾಗಿದ್. ಫ್ಯಾನ್ ಫೇರ್ ಎಂಬ ಮುಂಬೈಮೂಲದ ನಿರ್ಮಾಣ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡಿದೆ. ಪ್ರತೀ ಬಾರಿ ಅಪರೂಪದ ಸಬ್ಜೆಕ್ಟುಗಳನ್ನು ಆಯ್ಕೆ ಮಾಡಿಕೊಳ್ಳುವ ಚಂದ್ರಶೇಖರ್ ಬಂಡಿಯಪ್ಪ ಈ ಸಲ ಹಿಂದಿ ಸಿನಿಮಾಗೆ ಯಾವ ವಿಚಾರವನ್ನು ಕೈಗೆತ್ತಿಕೊಂಡಿದ್ದಾರೆ ಅನ್ನೋದು ಇನ್ನಷ್ಟೇ ಜಾಹೀರಾಗಬೇಕು…
ಲಕ್ನೋದಲ್ಲಿ ಈ ಕತೆ ನಡೆಯುವುದರಿಂದ, ಬಹುತೇಕ ಅಲ್ಲೇ ಚಿತ್ರೀಕರಣವನ್ನು ನಡೆಸಲಾಗಿದೆ. ರೆಡ್ ಕಾಲರ್ ಚಿತ್ರದ ವಿಶೇಷವೆಂದರೆ, ಇನ್ನೂ ನಿರ್ಮಾಣ ಹಂತರಲ್ಲಿರುವಾಗಲೇ ಇಂಡಿಯಾದ ಪ್ರತಿಷ್ಠಿತ ಓಟಿಟಿ ಸಂಸ್ಥೆಯೊಂದು ಉತ್ತಮ ಬೆಲೆಗೆ ಖರೀದಿಸುತ್ತಿದೆ.