ಸಾಮಾನ್ಯವಾಗಿ ಈಗಿನ ಬಹುತೇಕ (” ನಾನು ಕಂಡ”) ಕಲಾವಿದರು, ಸೆಟ್ಟಿಗೆ ಬಂದನಂತರ ಅಲ್ಲಿನ ಕೆಲಸ ಕಾರ್ಯಗಳಿಗಿಂತಲು ಹೆಚ್ಚುಪಾಲು ಜಂಗಮ ವಾಣಿಯ ದಾಸಿಯರಾಗಿರುತ್ತಾರೆ.
ನಾವು ಬಂದಿರುವ ಕೆಲಸ ಏನು? ನನ್ನಿಂದ ಸಿನಿಮಾಗೆ ಮತ್ತು ನಮ್ಮ ಮೇಲೆ ಭರವಸೆ ಇಟ್ಟು ಕರೆದ ನಿರ್ದೇಶಕರಿಗೆ ಯಾವ ರೀತಿಯಲ್ಲಿ ನ್ಯಾಯ ಹೊದಗಿಸ ಬಹುದು ಎಂಬುದರ ಬಗ್ಗೆ ಕನಿಷ್ಠ ಕಾಳಜಿಯೂ ಇರುವುದಿಲ್ಲ. ವಾಟ್ಸ್ ಆಪ್ ನಲ್ಲಿ ಬಂದಿರುವ ಮತ್ತಿನ್ಯಾರದೋ ಸಂದೇಶಗಳಿಗೆ ಉತ್ತರಿಸುವ ಕೌತುಕದಲ್ಲಿ ತೊಡಗಿರುತ್ತಾರೆ. ಅದು ನಮ್ಮಿಬ್ಬರ ಮೊದಲ ಬೇಟಿ, ಮನೆಯೊಂದರಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಅಂದು ಪೋನ್ ನೋಡುತ್ತಾ ಕುಳಿತಿದ್ದ ಆಕಿಯನ್ನು ಗಮನಿಸಿದ ನನಗೆ ಇವರು ಅದೇ ಸಾಲಿನ ಸದಸ್ಯರು ಎಂದುಕೊಂಡೆ. ಮತ್ತೊಂದು ದಿನ ಟೆಕ್ ನಲ್ಲು ಮೊಬೈಲ್ ನೋಡಿದ ಅವರನ್ನು ಪ್ರಶ್ನಿಸಿದೆ. ಮೊಬೈಲ್ ನಲ್ಲಿ ಏನು ನೋಡುತ್ತಿದ್ದೀರಿ? ಎಂದು. ಸ್ಕ್ರಿಪ್ಟ್ ಎಂದು ಮರು ಉತ್ತರದ ಜೊತೆಗೆ ಮೊಬೈಲ್ ಸ್ಕ್ರೀನ್ ತೋರಿಸಿದರು, ಆಗ ಅವರ ಬಗ್ಗೆ ನನಗಿದ್ದ ಅಭಿಪ್ರಾಯ ಬದಲಾಯಿತು. ನಾನು ಆ ಕ್ಷಣವೇ ಅವರಿಗೆ ನನ್ನ ಮೆಚ್ಚುಗೆ ವ್ಯಕ್ತ ಪಡಿಸಿದೆ, ನೀವು ಹಾಗಾಗ ಪೋನ್ ನೋಡುತ್ತಾ ಇರುವುದು ಗಮನಿಸಿದಾಗ, ನಿಮಗೆ ಸಿನಿಮಾ ಬಗ್ಗೆ ಆಸಕ್ತಿ ಇಲ್ಲವೆಂದು ತಿಳಿದುಕೊಂಡಿದ್ದೆ ನೀವು ಸ್ಕ್ರಿಪ್ಟ್ ನೋಡುತ್ತಿರುವುದನ್ನು ತಿಳಿದು ನನಗೆ ಸಂತಸವಾಯಿತು. ಕಲಾವಿದರಿಗೆ ಈ ಬಗೆಯ ಜವಾಬ್ದಾರಿ ಇದ್ದರೆ ಅದು ನಿಜಕ್ಕೂ ಗೆಲುವಿನ ಪಯಾನವಾಗುತ್ತದೆ ಎಂಬುದಾಗಿ ಹೇಳಿದೆ.
ಅವರು ಉತ್ತರಿಸಿದರು “ನಾನು ಆ ವಿಷಯದಲ್ಲಿ ಬಹಳ ವಿಧೆಯಳಾಗಿದ್ದೇನೆ” ಎಂಬುದಾಗಿ. ಅಂದಿನಿಂದ ಅವರೊಂದಿಗೆ ನನ್ನ ವಿಶ್ವಾಸ ಮತ್ತಷ್ಟು ಗಟ್ಟಿಯಾಯಿತು. ಅವರು ಬೇರೆ ಯಾರೂ ಅಲ್ಲ ಅದ್ವಿತಿ ಶಟ್ಟಿ ಪರದೆಯ ಮೇಲೆ ಯಾವುದೇ ಕಲಾವಿದರು ಪ್ರೇಕ್ಷಕರ ಗಮನ ಸೆಳೆಯ ಬೇಕಾದರೆ ಪರದೆಯ ಹಿಂದೆ ಅವರ ಶ್ರದ್ಧೆ ಮತ್ತು ಆಸಕ್ತಿ ಹೆಚ್ಚಿನ ಪಾತ್ರ ವಹಿಸುತ್ತದೆ, ಅಂತೆಯೇ ಅದ್ವಿತಿಯವರ ಅಭಿನಯವೂ ಬ್ರಹ್ಮ ಕಮಲ ಚಿತ್ರದಲ್ಲಿ ಪ್ರೇಕ್ಷಕರ ಮನಸು ಮುಟ್ಟಲಿದೆ. ನಿರ್ದೇಶಕ ಸಿದ್ದು ಪೂರ್ಣ ಚಂದ್ರ ರವರ ಕನಸಿನ ಪಾತ್ರಕ್ಕೆ ಬಣ್ಣ ಹಚ್ಚಿದ ಅದ್ವಿತಿಯವರು ಅಪೇಕ್ಷಾಳಿಗೆ ಜೀವ ನೀಡಿದ್ದಾರೆ.