“90 ಬಿಡಿ ಮನೀಗ್ ನಡಿ” ಎನ್ನುತ್ತಾರೆ ಬಿರಾದಾರ್.

90 BIDI MANIG NADI

ಎಪ್ಪತ್ತರ ವಯಸ್ಸಿನಲ್ಲೂ ಇಪ್ತತ್ತರ ಯುವಕನ ಉತ್ಸಾಹ ಹೊಂದಿರುವ, ತಮ್ಮ ಕಾಮಿಡಿ ಪಾತ್ರಗಳ ಮೂಲಕ ಕನ್ನಡಿಗರ ಮನ ಗೆದ್ದಿರುವ ಬಿರಾದಾರ್ ನಾಯಕನಾಗಿ ಅಭಿನಯಿಸಿರುವ ಚಿತ್ರ “90 ಬಿಡಿ ಮನೀಗ್ ನಡಿ”. ಇದು ಅವರ ನಟನೆಯ 500ನೇ ಚಿತ್ರವೂ ಹೌದು.‌ ಈ ಚಿತ್ರದ ಹಾಡಿನ ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು. ಉಮೇಶ್ ಬಾದರದಿನ್ನಿ ಹಾಗೂ ನಾಗರಾಜ ಅರೆಹೊಳೆ ಕಥೆ ಬರೆದು, ಜಂಟಿಯಾಗಿ ನಿರ್ದೇಶಿಸಿರುವ ಈ ಚಿತ್ರಕ್ಕೆ ರತ್ನಮಾಲ ಬಾದರದಿನ್ನಿ ಬಂಡವಾಳ ಹೂಡಿದ್ದಾರೆ90 BIDI MANIG NADI

ಉತ್ತಮ ಸಂದೇಶ ಹೇಳುವಂತ ಕಥಾಹಂದರವನ್ನಿಟ್ಟುಕೊಂಡು ಉತ್ತರ ಕರ್ನಾಟಕ ಶೈಲಿಯಲ್ಲಿ ಕಥೆ ಹೇಳಲು ಹೊರಟ್ಟಿದ್ದೇವೆ. ಎಂಭತ್ತು ಭಾಗದಷ್ಟು ಸಂಭಾಷಣೆ ಉತ್ತರ ಕರ್ನಾಟಕ ಶೈಲಿಯಲ್ಲಿರುತ್ತದೆ. ಹಾಗಾಗಿ ನಮಗೆ ಉತ್ತರ ಕರ್ನಾಟಕದ ಕಲಾವಿದನೇ ಬೇಕಾಗಿತ್ತು. ಆಗ ಬಿರಾದಾರ್ ಅವರನ್ನು ಆಯ್ಕೆ ಮಾಡಿಕೊಂಡೆವು.‌ ಅವರ 500 ನೇ ಚಿತ್ರವನ್ನು ನಿರ್ದೇಶಿಸುತ್ತಿರುವುದು ಸಂತೋಷವಾಗಿದೆ ಎನ್ನುತ್ತಾರೆ ನಿರ್ದೇಶಕರಾದ ಉಮೇಶ್ ಬಾದರದಿನ್ನಿ ಹಾಗೂ ನಾಗರಾಜ ಅರೆಹೊಳೆ.90 BIDI MANIG NADI

500ಚಿತ್ರಗಳಲ್ಲಿ ಅಭಿನಯಿಸಿದ್ದಿನೆಂದರೆ ಅದಕ್ಕೆ ರಂಗಭೂಮಿ ಹಾಗೂ ಚಿತ್ರರಂಗದವರ ಪ್ರೋತ್ಸಾಹವೇ ಕಾರಣ. ಈ ಚಿತ್ರದಲ್ಲಿ ಊದಿನ ಕಡ್ಡಿ ಮಾರುವವನ ಪಾತ್ರ ನನ್ನದು. ನನಗೆ ಕುಡಿತದ ಚಟ ಇರುತ್ತದೆ. ಒಬ್ಬ ಹೆಂಗಸಿನ ಪರಿಚಯವಾಗುತ್ತದೆ. ಆನಂತರ ಸಾಕಷ್ಟು ತಿರುವುಗಳಿರುತ್ತದೆ. ಅದನ್ನು ಸಿನಿಮಾದಲ್ಲೇ ನೋಡಬೇಕು. ನಾಟಕದಲ್ಲಿ ಹಾಗೋಹೀಗೋ ಕುಣಿಯುತ್ತಿದ್ದೆ. ಈ ಚಿತ್ರದಲ್ಲಿ ಹಾಡೊಂದಕ್ಕೆ ಪೂರ್ಣಪ್ರಮಾಣದಲ್ಲಿ ನೃತ್ಯ ಮಾಡಿದ್ದೇನೆ. ಭೂಷಣ್ ಮಾಸ್ಟರ್ ಮಾಡಿಸಿದ್ದಾರೆ. ಈ ಹಾಡನ್ನು ನಟ ಶರಣ್ ಮೆಚ್ಚಿಕೊಂಡಿದ್ದಾರೆ ಎಂದು ತಮ್ಮ ಪಾತ್ರ ಹಾಗೂ ಚಿತ್ರದ ಬಗ್ಗೆ ವೈಜನಾಥ್ ಬಿರಾದಾರ್ ವಿವರಿಸಿದರು.90 BIDI MANIG NADI

ವೃತ್ತಿ ರಂಗಭೂಮಿಯಲ್ಲಿ ಚಿಕ್ಕ ವಯಸ್ಸಿನಿಂದ ನಾಟಕ ಮಾಡಿಕೊಂಡು ಬಂದಿದ್ದೀನಿ. ಮೊದಲ ಬಾರಿಗೆ ಬಿರಾದಾರ್‌ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದೀನಿ. ಈ ಚಿತ್ರದಲ್ಲಿ ವೇಶ್ಯೆ ಪಾತ್ರ ಮಾಡಿದ್ದೇನೆ. ನಾಯಕನನ್ನು ದುಶ್ಚಟಗಳಿಂದ ದೂರ ಮಾಡುತ್ತೇನೆ ಎಂದು ನಾಯಕಿ ನೀತಾ ಪಾತ್ರದ ಬಗ್ಗೆ ಹೇಳಿದರು.90 BIDI MANIG NADI

ಬಿರಾದಾರ್ ಅವರಲ್ಲಿ ವಿಶೇಷ ಶಕ್ತಿ ಇದೆ.ಈ ವಯಸ್ಸಿನಲ್ಲಿ ಅವರು ಈ ರೀತಿ ನೃತ್ಯ ಮಾಡಿದ್ದು ನೋಡಿ ಕಣ್ಣೀರು ಬಂತು. ನನ್ನದು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಎಂದರು ನಟ ಧರ್ಮ.  500ನೇ ಸಿನಿಮಾ ಆದರೂ ಮೊದಲ ಚಿತ್ರದ ಹುಮ್ಮಸಿನಲ್ಲಿ ಬಿರಾದಾರ್ ಅಭಿನಯಿಸಿದ್ದಾರೆ. ಉತ್ತರ ಕರ್ನಾಟಕ ಸೊಗಡಿನ ಚಿತ್ರ. ನಾನು ಈ ಚಿತ್ರದಲ್ಲಿ ಅಭಿನಯಿಸಿರುವುದು ಖುಷಿಯಾಗಿದೆ ಎಂದು ಕರಿಸುಬ್ಬು ತಿಳಿಸಿದರು. ಹಾಡನ್ನು ಬರೆದು ಸಂಗೀತ ನೀಡಿರುವ ಶಿವು ಭೇರಗಿ, ಗಾಯಕ ರವೀಂದ್ರ ಸೊರಗಾವಿ ಹಾಗೂ ಹಿನ್ನೆಲೆ ಸಂಗೀತ ನೀಡಿರುವ ವೀರ ಸಮರ್ಥ್ ಚಿತ್ರದ ಕುರಿತು ಮಾತನಾಡಿದರು.

ನಿರ್ಮಾಣ ಸಂಸ್ಥೆ: ಅಮ್ಮ ಟಾಕೀಸ್ ಬಾಗಲಕೋಟೆ
ನಿರ್ಮಾಪಕರು: ರತ್ನಮಾಲಾ ಬಾದರದಿನ್ನಿ
ನಿರ್ದೇಶಕರು(ಜಂಟಿ):
ಉಮೇಶ್ ಬಾದರದಿನ್ನಿ & ನಾಗರಾಜ್ ಅರೆಹೊಳೆ
ಕಲಾವಿದರು: ವೈಜನಾಥ ಬಿರಾದಾರ, ನೀತಾ ಮೈಂದರ್ಗಿ
ಹಾಡಿನ ವಿವರ: ಸಿಂಗಲ್ ಕಣ್ಣಾ ಹಾರಸ್ತಿ, ಡಬ್ಬಲ್ ಹಾರ್ನಾ ಬಾರಸ್ತಿ
ಸಂಗೀತ& ಸಾಹಿತ್ಯ: ಶಿವು ಭೇರಗಿ
ಹಾಡಿದವರು: ರವೀಂದ್ರ ಸೊರಗಾವಿ & ಶಮಿತಾ ಮಲ್ನಾಡ್
ನೃತ್ಯ ನಿರ್ದೇಶನ: ಭೂಷಣ್
ಛಾಯಾಗ್ರಹಣ: ಕೃಷ್ಣ ನಾಯ್ಕರ್
ಸಂಕಲನ: ವೆಂಕಟೇಶ್ ಯುಡಿವಿ

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…