ಕಾಂತಾರ ಮೇಲೆ ಯಾಕೆ ಕಪ್ಪಂ ಕಣ್ಣು?

‘Kantara’ plagiarism row: Why was Thaikkudam Bridge

ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ಕಾಂತಾರ ಚಿತ್ರದ ಹಾಡಿನ ಟ್ಯೂನನ್ನು ತಮ್ಮ ನವರಸಂ ಎಂಬ ಆಲ್ಬಂನಿಂದ ತೆಗೆದುಕೊಂಡಿದ್ದಾರೆ ಎಂದು ಕೇರಳದ ತೈಕುಡಂ ಬ್ರಿಡ್ಜ್ ಆರೋಪಿಸಿರುವುದು ಗೊತ್ತಿರುವ ವಿಷಯವೇ? ಈಗ ರೋಲ್ಕಾಲ್ ಮಾಡುವುದಕ್ಕಾಗಿ ಇಷ್ಟೆಲ್ಲ ಆಗುತ್ತಿದೆಯಾ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ.‘Kantara’ plagiarism row: Why was Thaikkudam Bridge

ಕಾಂತಾರ ಚಿತ್ರದ ಅಂತ್ಯದಲ್ಲಿ ಬರುವ ವರಾಹ ರೂಪಂ ಗೀತೆಯು ಸಾಕಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಗಿರುವುದಷ್ಟೇ ಅಲ್ಲ, ಚಿತ್ರವನ್ನು ಗೆಲ್ಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಆದರೆ, ಈ ಹಾಡು ತಮ್ಮ ನವರಸಂ ಎಂಬ ಸಿಂಗಲ್ನಿಂದ ತೆಗೆದುಕೊಂಡಿದ್ದಾರೆ ಮತ್ತು ಈ ಮೂಲಕ ಕಾಪಿರೈಟ್ ಹಕ್ಕುಗಳ ಉಲ್ಲಂಘನೆ ಆಗಿದೆ ಎಂದು ತೈಕುಡಂ ಬ್ರಿಡ್ಜ್ ಎಂಬ ಮ್ಯೂಸಿಕ್ ಬ್ಯಾಂಡ್ ಆರೋಪ ಮಾಡಿತ್ತು. ತೈಕುಡಂ ಬ್ರಿಡ್ಜ್ಗೂ ಕಾಂತಾರಕ್ಕೂ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲದಿದ್ದರೂ, ನವರಸಂ ಹಾಗೂ ವರಾಹರೂಪಂ ಗೀತೆಗಳ ನಡುವೆ ಸಾಕಷ್ಟು ಸಾಮ್ಯತೆ ಇದ್ದು, ಈ ಮೂಲಕ ಕಾಪಿರೈಟ್ಸ್ ಉಲ್ಲಂಘನೆ ಆಗಿದೆ ಎಂದು ಇನ್ಸ್ಟಾಗ್ರಾಂ ಮೂಲಕ ಎಚ್ಚರಿಸಿತ್ತು.‘Kantara’ plagiarism row: Why was Thaikkudam Bridge

ಇದು ಸಂಪೂರ್ಣ ಸುಳ್ಳೇನಲ್ಲ. ಏಕೆಂದರೆ, ಆ ಹಾಡಿನಿಂದ ಸಾಕಷ್ಟು ಸ್ಫೂರ್ತಿ ಪಡೆದಿದ್ದಾಗಿ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಹ ಕೆಲವು ದಿನಗಳ ಹಿಂದೆ ಹೇಳಿಕೊಂಡಿದ್ದರು. ಆ ಹಾಡಿನಿಂದ ಒಂದಷ್ಟು ಪ್ರೇರಣೆ ಪಡೆದಿದ್ದು ನಿಜ, ಆದರೆ ನಕಲು ಮಾಡಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದರು. ಸಂಗೀತ ನಿರ್ದೇಶಕರೇ ಒಪ್ಪಿಕೊಂಡಿರುವುದರಿಂದ ಆ ಹಾಡಿನಿಂದ ಸ್ಫೂರ್ತಿ ಪಡೆದು ವರಾಹರೂಪಂ ಹಾಡನ್ನು ಮಾಡಲಾಗಿದೆ. ಆದರೆ, ಇದೆಲ್ಲ ಗೊತ್ತಿದ್ದರೂ ತೈಕುಡಂ ಬ್ರಿಡ್ಜ್ನವರು ಇಷ್ಟು ದಿನ ಸುಮ್ಮನೆ ಏಕಿದ್ದರು ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ.‘Kantara’ plagiarism row: Why was Thaikkudam Bridge

ಕಾಂತಾರ ಚಿತ್ರ ಕಳೆದ ಸೆ. 30ರಂದು ಬಿಡುಗಡೆಯಾಗಿತ್ತು. ಅದಾಗಿ ಕೆಲವು ದಿನಗಳಲ್ಲೇ ವರಾಹರೂಪಂ ಹಾಡು, ಮಲಯಾಳಂನ ನವರಸಂನಿಂದ ಸ್ಫೂರ್ತಿ ಪಡೆದಿದೆ ಎಂದು ಸುದ್ದಿಯಾಗಿತ್ತು. ಈ ವಿಷಯ ಸಾಕಷ್ಟು ಚರ್ಚೆ ಸಹ ಆಗಿತ್ತು. ಕೆಲವು ಸುದ್ದಿವಾಹಿನಿಗಳಲ್ಲಿ ಈ ಕುರಿತು ಕಾರ್ಯಕ್ರಮ ಪ್ರಸಾರವಾಗಿ, ಅದರಲ್ಲಿ ಅಜನೀಶ್ ಲೋಕನಾಥ್ ಮಾತನಾಡಿದ್ದರು. ಇಷ್ಟೆಲ್ಲ ಆಗುತ್ತಿರುವಾಗ, ಈ ವಿಷಯ ತೈಕುಡಂ ಬ್ರಿಡ್ಜ್ನವರಿಗೆ ಗೊತ್ತೇ ಇರಲಿಲ್ಲ ಎಂದೇನಲ್ಲ. ಒಂದು ಪಕ್ಷ ಗೊತ್ತಿರದಿದ್ದರೂ, ಅದಾಗಿ ಕೆಲವು ದಿನಗಳಲ್ಲೇ ಚಿತ್ರದ ಮಲಯಾಳಂ ಅವತರಣಿಕೆ ಸಹ ಬಿಡುಗಡೆಯಾಗಿದೆ. ಆಗಲಾದರೂ ಗೊತ್ತಾಗಿರಲೇಬೇಕು. ಆಗೆಲ್ಲ ಸುಮ್ಮನಿದ್ದ ಅವರು ಈಗ್ಯಾಕೆ ಕಾಪಿರೈಟ್ ಉಲ್ಲಂಘನೆ, ಕಾನೂನು ಕ್ರಮ ಮುಂತಾದ ಪದಗಳನ್ನು ಉಪಯೋಗಿಸುತ್ತಿದ್ದಾರೆ ಎಂಬ ಪ್ರಶ್ನೆ ಸಹಜವೇ.Send me a file which I can share with her

ಮೂಲಗಳ ಪ್ರಕಾರ, ಇದು ರೋಲ್ಕಾಲ್ ಮಾಡುವ ಒಂದು ತಂತ್ರವಂತೆ. ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ನವರಸಂ ಶೈಲಿಯ ಹಾಡು ಇದ್ದರೆ ಚೆನ್ನಾಗಿರುತ್ತದೆ ಎಂದು ಹೊಂಬಾಳೆ ಫಿಲಂಸ್ನವರು ತೈಕುಡಂ ಬ್ರಿಡ್ಜ್ ತಂಡದವರನ್ನು ಸಂಪರ್ಕಿಸಿದ್ದರಂತೆ. ಹಕ್ಕುಗಳನ್ನು ಅಧಿಕೃತವಾಗಿ ಪಡೆಯುವುದಕ್ಕೆ ಸಂಭಾವನೆ ಕೊಡುವುದಕ್ಕೂ ಮುಂದಾಗಿದ್ದರಂತೆ. ಆದರೆ, ತೈಕುಲಂ ಬ್ರಿಡ್ಜ್ ತಂಡದವರು ಅದಕ್ಕೆ ಒಪ್ಪಿಲ್ಲ. ಮೌಖಿಕವಾಗಿ ಬಳಸಿಕೊಳ್ಳುವುದಕ್ಕೆ ಅನುಮತಿ ನೀಡಿದ್ದರಂತೆ. ಕಾರಣ, ಆ ಸಂದರ್ಭದಲ್ಲಿ ಅವರಿಗೂ ಈ ಹಾಡು ಇಷ್ಟು ದೊಡ್ಡ ಹಿಟ್ ಆಗಬಹುದು ಎಂದು ಗೊತ್ತಿರಲಿಲ್ಲ. ಯಾವಾಗ ಹಾಡು ಜನಪ್ರಿಯವಾಗಿ, ಚಿತ್ರ ಸೂಪರ್ ಹಿಟ್ ಆಗಿ ಹೊಂಬಾಳೆಯವರು ಕೋಟಿಕೋಟಿ ಬಾಚಿಕೊಳ್ಳುವುದಕ್ಕೆ ಮುಂದಾದರೋ, ಆಗ ತೈಕುಡಂ ಬ್ರಿಡ್ಜ್ ತಂಡದವರ ಕಣ್ಣು ಕೆಂಪಾಗಿದೆ. ತಾವು ಎಂಥಾ ಎಡವಟ್ಟು ಮಾಡಿಕೊಂಡಿದ್ದೇವೆ ಎಂದು ಅರ್ಥವಾಗಿದೆ.‘Kantara’ plagiarism row: Why was Thaikkudam Bridge

ಆ ನಂತರ ಅವರು ಹೊಂಬಾಳೆ ಫಿಲಂಸ್ನವರ ವಿರುದ್ಧ ಒಂದಿಷ್ಟು ಕೋಟಿಗಳಿಗೆ ಡಿಮ್ಯಾಂಡ್ ಇಟ್ಟಿದ್ದರಂತೆ. ಯಾವಾಗ, ಹೊಂಬಾಳೆಯವರು ನಿರಾಕರಿಸಿದರೋ, ಆಗ ಕಾಪಿರೈಟ್ ಉಲ್ಲಂಘನೆ ಮತ್ತು ಕಾನೂನು ಕ್ರಮದಂತಹ ನಾಟಕಗಳು ಶುರುವಾಗಿದೆ. ಒಂದು ಪಕ್ಷ ತೈಕುಡಂ ಬ್ರಿಡ್ಜ್ನವರು ಗಂಭೀರವಾಗಿದ್ದರೆ, ಇನ್ಸ್ಟಾಗ್ರಾಂ ಮೂಲಕ ಎಚ್ಚರಿಸುತ್ತಿರಲಿಲ್ಲ. ನೇರವಾಗಿ ಕಾನೂನು ಕ್ರಮದ ಹೋರಾಟಕ್ಕೆ ಮುಂದಾಗಿರುತ್ತಿದ್ದರು. ಆದರೆ, ತಮ್ಮದೇ ತಪ್ಪಿರುವುದರಿಂದ ಮತ್ತು ಹೀಗೆ ಹೆದರಿಸುವ ಮೂಲಕ ಒಂದಿಷ್ಟಾದರೂ ರೋಲ್ಕಾಲ್ ಮಾಡಿ ಕಿತ್ತುಕೊಳ್ಳುವುದಕ್ಕೆ ಮುಂದಾಗಿದೆ. ಇದೆಲ್ಲದರ ಹಿಂದೆ ಕೇರಳದ ಮಾತೃಭೂಮಿ ಸಂಸ್ಥೆಯ ಮುಖ್ಯಸ್ಥ ಶ್ರೇಯಮ್ಸ್‌ ಕುಮಾರ್‌ ಚಿತಾವಣೆ ಇದೆ ಎಂದು ಹೇಳಲಾಗುತ್ತಿದೆ.thaikkudam bridge slider 2017 03

ಕಪ್ಪಂ ಟೀವಿಯ ಮುಂದಾಳುವೂ ಆಗಿರುವ ಶ್ರೇಯಮ್ಸ್‌ ಎಡಪಂಥೀಯ ಧೋರಣೆಯ ರಾಜಕಾರಣಿ ಕೂಡಾ ಹೌದು. ಯಾವಾಗ ʻಕಾಂತಾರʼದ ಸುತ್ತ ಹಿಂದುತ್ವದ ನೆರಳು ಆವರಿಸಿತೋ, ಶ್ರೇಯಮ್ಸ್‌ ಕುಮಾರ್‌ ಅದನ್ನು ಸಹಿಸದಾದರು. ಈಗ ತೈಕುಡಂ ಬ್ರಿಡ್ಸ್‌ ತಂಡದವರನ್ನು ಛೂ ಬಿಟ್ಟು, ಖುದ್ದು ತಾವೇ ಎಲ್ಲ ರಾದ್ದಾಂತ ಸೃಷ್ಟಿಸುತ್ತಿದ್ದಾರೆ. ಜೊತೆಗೆ ಕೋಟಿಗಟ್ಟಲೆ ಹಣ ಪೀಕುವ ಹುನ್ನಾರ ಮಾಡಿದ್ದಾರೆ ಎನ್ನಲಾಗುತ್ತಿದೆ.Send me a file which I can share with her

ಇಷ್ಟೆಲ್ಲಾ ಆದರೂ, ಹೊಂಬಾಳೆಯವರು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಸದ್ಯ ಇಡೀ ಭಾರತದಲ್ಲಿ ಮುಂಚೂಣಿಯಲ್ಲಿರುವ ಹೊಂಬಾಳೆ ಕಿಡಿಗೇಡಿಗಳ ಕಿತಾಪತಿಗಳಿಗೆ, ಕುತಂತ್ರಗಳಿಗೆ ಮಣಿಯುವ ಮಾತೇ ಇಲ್ಲ. ಏನೇ ಆದರೂ ಮೌನವಾಗಿರುವುದು ಮತ್ತು ಎಂಥದ್ದೇ ಆರೋಪ ಬಂದರೂ ಎದುರಿಸುವುದಕ್ಕೆ ತಯಾರಾಗಿರುವುದು ತೈಕುಡಂ ಬ್ರಿಡ್ಜ್ ಅವರನ್ನು ಇನ್ನಷ್ಟು ಉರಿಸಿದೆ. ಈ ಪ್ರಕರಣ ಮುಂದಿನ ದಿನಗಳಲ್ಲಿ ಯಾವ ತರಹದ ತಿರುವನ್ನು ಪಡೆಯುತ್ತದೋ ಎಂಬ ಕುತೂಹಲ ಎಲ್ಲರಿಗೂ ಇದೆ.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…