ಇಲ್ಲಿ ಹರಿ ಇಲ್ಲ ಮೂವರು ಗಿರಿ ಇದ್ದಾರೆ!

ಹೆಸರು ಕೇಳಿದರೆ ಇದು ಹರಿ ಎನ್ನುವವನ ಕಥೆಯಲ್ಲ, ಗಿರಿ ಎನ್ನುವ ಕಥೆ ಇರಬಹುದು ಎಂದನಿಸಬಹುದು. ಅದಕ್ಕೆ ಸರಿಯಾಗಿ, ನಾಯಕನ ಪಾತ್ರದ ಹೆಸರು ಗಿರಿ ಎಂದಿರುವುದರಿಂದ ಇದು ಅವನ ಕುರಿತಾದ ಚಿತ್ರ ಎಂದು ಮೇಲ್ನೋಟಕ್ಕೆ ಅನಿಸಬಹುದು.202721

ಆದರೆ, ಇದು ಒಬ್ಬ ಗಿರಿಯ ಕಥೆಯಲ್ಲ, ಮೂವರು ಗಿರಿಯರ ಕಥೆ ಎನ್ನುತ್ತಾರೆ ರಿಷಭ್ ಶೆಟ್ಟಿ. ‘ಇಲ್ಲಿ ನಾನೊಬ್ಬನೇ ಗಿರಿಯಲ್ಲ. ಇಲ್ಲಿ ಮೂವರು ಗಿರಿಯರಿದ್ದಾರೆ. ಒಂದು ನಾನಾದರೆ, ಇನ್ನೊಂದು ನಾಯಕಿ, ಮತ್ತೊಂದು ವಿಲನ್ ಪಾತ್ರಗಳ ಹೆಸರು ಸಹ ಇಲ್ಲಿ ಗಿರಿ ಎಂದಿರುತ್ತದೆ. ನಾಯಕಿಯ ಹೆಸರು ಗಿರಿಜಾ ಥಾಮಸ್. ಆಕೆಯನ್ನು ಎಲ್ಲರೂ ಗಿರಿ ಎಂದು ಕರೆಯುತ್ತಿರುತ್ತಾರೆ. ಇನ್ನು, ವಿಲನ್ ಹೆಸರು ಸಹ ಗಿರಿ. ಹಾಗಾಗಿ, ಯಾವ ಗಿರಿಯ ಕಥೆ ಇದು ಎಂಬ ಕುತೂಹಲ ಮತ್ತು ಗೊಂದಲಕ್ಕೆ ಚಿತ್ರ ನೋಡಿದ ನಂತರವಷ್ಟೇ ಉತ್ತರ ಸಿಗಬೇಕು’ ಎನ್ನುತ್ತಾರೆ ಅವರು.Harikathe Alla Girikathe Team

ರಿಷಭ್ ಪ್ರಕಾರ, ಇದೊಂದು ಪಕ್ಕಾ ಮನರಂಜನೆಯ ಪ್ಯಾಕೇಜ್ ಅಂತೆ. ಇತ್ತೀಚೆಗಷ್ಟೇ ಪ್ರೇಕ್ಷಕರು ಒಂದು ಪಕ್ಕಾ ಸೆಂಟಿಮೆಂಟ್ ಚಿತ್ರ ನೋಡಿ ಅತ್ತಿದ್ದು, ಈಗ ಒಂದು ಪಕ್ಕಾ ಮನರಂಜನೆಯ ಚಿತ್ರ ನೋಡಿ ನಗುವ ಸಮಯ ಬಂದಿದೆ ಎನ್ನುತ್ತಾರೆ ಅವರು. ‘ಇದೊಂದು ಮನರಂಜನೆಯ ಚಿತ್ರ. ಪ್ರೇಕ್ಷಕರನ್ನು ಎರಡೂವರೆ ತಾಸು ನಗಿಸಿ ಕಳಿಸಬೇಕು ಎಂಬುದು ಉದ್ದೇಶ. ಟ್ರೇಲರ್ ನೋಡಿದರೆ, ಚಿತ್ರದಲ್ಲೇನಿರಬಹುದು ಮತ್ತು ಕಥೆ ಹೇಗಿರಬಹುದು ಎಂಬ ಅಂದಾಜು ಸಿಗಬಹುದು. ಇಲ್ಲಿ ನನ್ನ ಪಾತ್ರ ಬೇರೆ ತರಹ ಇದೆ. ಸ್ವಲ್ಪವೂ ಹೀರೋಯಿಸಂ ಇಲ್ಲ. ಅವನು ಒಂದು ಇಕ್ಕಟ್ಟಿನಲ್ಲಿ ಸಿಕ್ಕಿಕ್ಕೊಳ್ಳುತ್ತಾನೆ. ಅದರಿಂದ ಹೇಗೆ ಆಚೆ ಬರುತ್ತಾನೆ ಎನ್ನುವುದರ ಜೊತೆಗೆ ಆತ ಏನೆಲ್ಲ ಕಥೆ ಹೇಳುತ್ತಾನೆ ಎಂಬುದೇ ಚಿತ್ರದ ಕಥೆ’ ಎನ್ನುತ್ತಾರೆ ರಿಷಭ್ ಶೆಟ್ಟಿ.vijay karnataka

‘ಹರಿಕಥೆ ಅಲ್ಲ ಗಿರಿಕಥೆ’, ಪ್ರತಿಷ್ಠಿತ ಸಂದೇಶ್ ಪ್ರೊಡಕ್ಷನ್ಸ್ ನಿರ್ಮಾಣದ ಹೊಸ ಚಿತ್ರ. ಇದುವರೆಗೂ 25ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿರುವ ಈ ಸಂಸ್ಥೆಯು ಇದೇ ಮೊದಲ ಬಾರಿಗೆ ರಿಷಭ್ ಜತೆಗೆ ಕೈಜೋಡಿಸಿದೆ. ಅಷ್ಟೇ ಅಲ್ಲ, ಮೊದಲ ಬಾರಿಗೆ ಈ ಸಂಸ್ಥೆಯ ಚಿತ್ರವೊಂದರಲ್ಲಿ ಇಷ್ಟೊಂದು ಸಂಖ್ಯೆಯ ಹೊಸಬರು ಕೆಲಸ ಮಾಡಿದ್ದಾರೆ. ಚಿತ್ರವನ್ನು ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್ ಜತೆಯಾಗಿ ನಿರ್ದೇಶನ ಮಾಡಿದರೆ, ಗಿರಿಕೃಷ್ಣ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ.

ಇನ್ನು, ಚಿತ್ರದಲ್ಲಿ ರಿಷಭ್ ಜತೆಗೆ ರಚನಾ ಇಂದರ್, ತಪಸ್ವಿನಿ ಪೂಣಾಚ್ಛ, ಹೊನ್ನವಳ್ಳಿ ಕೃಷ್ಣ, ಪ್ರಮೋದ್ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ. ಒಂದು ವಿಶೇಷ ಪಾತ್ರದಲ್ಲಿ ಯೋಗರಾಜ್ ಭಟ್ ಸಹ ಕಾಣಿಸಿಕೊಂಡಿದ್ದಾರೆ.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…