ಖಂಡಿತ ನಿಮ್ಮ ಜೀವನವನ್ನೇ ಬದಲಾಯಿಸುತ್ತೆ ಶ್ರೀಕೃಷ್ಣನ ಈ ನುಡಿಗಳು..!
ನೀವು ಅನಗತ್ಯವಾಗಿ ಚಿಂತಿಸುತ್ತಿರಿ? ಯಾರಿಗಾಗಿಯೋ ಏಕೆ ಹೆದರುತ್ತೀರಿ? ಯಾರು ನಿಮ್ಮನ್ನು ಕೊಲ್ಲಲು ಸಾಧ್ಯ? ಅಂತಿಮವಾಗಿ ಆತ್ಮವು ಹುಟ್ಟುತ್ತದೆ ಅಥವಾ ಸಾಯುತ್ತದೆ ಅಷ್ಟೇ ಅಲ್ಲವೇ. ಸ್ವಯಂ ವಿನಾಶ ಮತ್ತು ನರಕಕ್ಕೆ ಮೂರು ದಾರಿಗಳಿವೆ, ಅದುವೇ ಕಾಮ, ಕೋಪ ಮತ್ತು ದುರಾಸೆ.
ಬದುಕುವುದಕ್ಕಾಗಿ ದುಡಿಯುವುದು ಅನಿವಾರ್ಯ, ಹಾಗಂತ ಫಲದ ಮೇಲೆ ಕಣ್ಣಿಟ್ಟು ಕೆಲಸ ಮಾಡಿದರೆ ನಿರಾಸೆ ಹೆಚ್ಚು, ಕೆಲಸವನ್ನು ಶ್ರದ್ಧೆಯಿಂದ, ಪ್ರೀತಿಯಿಂದ ಮಾಡಿದರೆ ಫಲ ಇಂದಲ್ಲ ನಾಳೆ ದೊರಕಿಯೇ ದೊರಕುತ್ತದೆ.
ಜೀವನದಲ್ಲಿ ಆಸೆ-ದುರಾಸೆಗಳನ್ನು ಕಡಿಮೆ ಮಾಡುವುದೇ ಸಂತೋಷದ ಕಲಿಕೈ.
ಎಲ್ಲಾ ಹೇಳುತ್ತಾರೆ ಮನುಷ್ಯ ಕಾಲಿ ಕೈಯಲ್ಲಿ ಬರುತ್ತಾನೆ ಕಾಲಿ ಕೈನಲ್ಲಿ ಹೋಗುತ್ತಾನೆ ಎಂದು, ಆದರೆ ಮನುಷ್ಯ ಬರುವಾಗ ಭಾಗ್ಯದ ಜೊತೆ ಬರುತ್ತಾನೆ ಹೋಗುವಾಗ ಕರ್ಮದ ಫಲ ಕೊಂಡು ಹೋಗುತ್ತಾನೆ.
ನಿಮ್ಮ ಗುರಿಯನ್ನು ಸಾಧಿಸುವಲ್ಲಿ ನೀವು ವಿಫಲವಾದರೆ ತಂತ್ರವನ್ನು ಬದಲಿಸಿ, ಗುರಿಯನ್ನಲ್ಲ.