ಕನ್ನಡ ಸುಭಾಷಿತ  17

ನಿಮ್ಮ ಗುರಿ ಏನೆಂದು  ಪ್ರತಿ ಒಬ್ಬರಿಗೂ ಹೇಳುವ ಅವಶ್ಯಕತೆಯಿಲ್ಲ , ನೀವು  ಸೇರಿದಮೇಲೆ ಅವರೇ ನಿಮ್ಮ ಬಳಿ  ಬರುವರು

ನಿಮ್ಮ ಗುರಿ ಏನೆಂದು  ಪ್ರತಿ ಒಬ್ಬರಿಗೂ ಹೇಳುವ ಅವಶ್ಯಕತೆಯಿಲ್ಲ , ನೀವು  ಸೇರಿದಮೇಲೆ ಅವರೇ ನಿಮ್ಮ ಬಳಿ  ಬರುವರು

ನಮ್ಮೆಲ್ಲರಲ್ಲಿಯೂ ಅನೇಕ ರೀತಿಯ ದೌರ್ಬಲ್ಯ ಗಳಿರುವುದು ಸಹಜವೇ ಆದರೆ ಅದನ್ನು ಅರಿತು ಆ ದೌರ್ಬಲ್ಯ ವನ್ನು ಮೀರಿ ನಿಲ್ಲುವ ಪ್ರಯತ್ನ ವೇ ಸಾಧನಾ ಮಾರ್ಗದ ಮೊದಲ ಹೆಜ್ಜೆ

ನಿನ್ನೆ  ಸುಖವಿತ್ತೆಂದು ಇತಿಹಾಸ ಹೇಳುತ್ತದೆ. ನಾಳೆ ಸುಖವಿರುವುದೆಂದು ವಿಜ್ಞಾನ ಹೇಳುತ್ತದೆ. ಆದರೆ, ಧರ್ಮ ಹೇಳುತ್ತದೆ , ಮನದಲ್ಲಿ ಸತ್ಯತೆ, ಹೃದಯದಲ್ಲಿ ಒಳ್ಳೆಯತನವಿದ್ದಲ್ಲಿ ಪ್ರತಿ ದಿನವೂ ಸಹ ಸುಖವೇ ಇರುವುದೆಂದು

ಸ್ನೇಹ ಪ್ರೀತಿ ಅನ್ನೋದು ದೀಪ ಇದ್ದ ಹಾಗೆ... ಹಚ್ಚೋದು ಸುಲಭ , ಆದರೆ ಅದನ್ನು ಆರದ ಹಾಗೆ ಕಾಪಾಡಿಕೊಳ್ಳುವುದು ತುಂಬಾ ಕಷ್ಟ 

ಹುಟ್ಟು ನಮ್ಮದಲ್ಲ, ಸಾವು ನಮ್ಮದಲ್ಲ, ಭೂಮಿ ನಮ್ಮದಲ್ಲ,ಪ್ರಕೃತಿ ನಮ್ಮದಲ್ಲ, ನಮ್ಮದು ಅಂತ ಉಳಿದಿರುವುದು ಒಂದೇ.. ಅದೇ “ಪ್ರೀತಿ,ಸ್ನೇಹ,ವಿಶ್ವಾಸ,ನಂಬಿಕೆ ಮತ್ತು ಸಂಬಂಧಗಳು”.....ಇವುಗಳು ಎಂದೆಂದಿಗೂ ಶಾಶ್ವತವಾಗಿರಲಿ.....

ನಮ್ಮವರು ಅಂದು ಕೊಂಡವರೆಲ್ಲ ನಮ್ಮ ಜೊತೆ ಎಲ್ಲಾ ಸಮಯದಲ್ಲಿ ಒಂದೇ ತರ ಇರ್ತಾರೆ ಅಂದುಕೊಳ್ಳೊದು ನಮ್ಮ ತಪ್ಪು. ಈ ಪ್ರಪಂಚದಲ್ಲಿ ಸಮಯಕ್ಕಿಂತ ವೇಗವಾಗಿ ಬದಲಾಗೋದು ಮನುಷ್ಯನ ಮನಸ್ಸು ಮತ್ತು ಆಲೋಚನೆಗಳು