ವಾ…ವಾ…ವಾ…ವಾಮನ ಹಾಡು ಬಂತು….ಶೋಕ್ದಾರ್ ಧನ್ವೀರ್ ಮಾಸ್ ಎಂಟ್ರಿ

Wah...Wah...Wah...Vama's song came....Shokdar Dhanveer mass entry

ಶೋಕ್ದಾರ್ ಖ್ಯಾತಿಯ ಧನ್ವೀರ್ ಗೌಡ ನಟನೆಯ ಬಹುನಿರೀಕ್ಷಿತ ವಾಮನ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ವಾ..ವಾ..ವಾ..ವಾಮನ ಅಂತಾ ಬಜಾರ್ ಹುಡ್ಗ ಮಾಸ್ ಎಂಟ್ರಿ ಕೊಟ್ಟಿದ್ದಾರೆ. ನಿರ್ದೇಶಕ ಚೇತನ್ ಕುಮಾರ್ ಬರೆದಿರುವ ಸಾಹಿತ್ಯದ ಹಾಡಿಗೆ ಶಶಾಂಕ್ ಶೇಷಗಿರಿ ಧ್ವನಿಯಾಗಿದ್ದು, ಅಜನೀಶ್ ಲೋಕನಾಥ್ ಟ್ಯೂನ್ ಹಾಕಿದ್ದಾರೆ. ಭೂಷಣ್ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದಿರುವ ನಾಯಕನ ಇಂಟ್ಯೂಡಕ್ಷನ್ ಹಾಡಿಗೆ ಧನ್ವೀರ್ ಜಬರ್ದಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ. ಈಕ್ವಿನಾಕ್ಸ್ ಗ್ಲೋಬಲ್‌ ಎಂಟರ್‌ಟೈನ್ಮೆಂಟ್‌ ಬ್ಯಾನರ್‌ ಅಡಿಯಲ್ಲಿ “ಚೇತನ್‌ ಗೌಡ” ಅದ್ಧೂರಿಯಾಗಿ ನಿರ್ಮಿಸಿರುವ ವಾಮನ ಸಿನಿಮಾವನ್ನು ಯುವ ನಿರ್ದೇಶಕ “ಶಂಕರ್‌ ರಾಮನ್‌” ರಚಿಸಿ ನಿರ್ದೇಶಿಸಿದ್ದಾರೆ. ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ನಡೆದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಭಾಗಿಯಾಗಿ ಮಾಹಿತಿ ಹಂಚಿಕೊಂಡಿದೆ.Wah...Wah...Wah...Vama's song came....Shokdar Dhanveer mass entry

ನಿರ್ದೇಶಕ ಶಂಕರ್ ರಾಮನ್ ಮಾತನಾಡಿ, ಕಥೆಯಲ್ಲಿ ಬರುವ ಪಾತ್ರಗಳಿಗಷ್ಟೇ ಕೌಂಟರ್ ಕೊಡುತ್ತಿರುವುದು. ಬೇರೆ ಯಾರಿಗೂ ಅಲ್ಲ. ನಾಯಕ ಗುಣ ಪಾತ್ರ ನೀರು ಇದ್ದಾಗೆ. ರಾವಣ, ದುರ್ಯೋಧನ ಇಬ್ಬರನ್ನೂ ಆವರಿಸಿಕೊಳ್ಳುತ್ತಾರೆ. ವಾಮನನ್ನು ಆವರಿಸಿಕೊಳ್ಳುತ್ತಾರೆ. ಸಮಯ ಬಂದಾಗ ದಶಾವತಾರದಲ್ಲಿರುವ ಪಾತ್ರವನ್ನು ಆವರಿಸಿಕೊಳ್ಳುತ್ತಾರೆ. ಚಿತ್ರದಲ್ಲಿ ನಾಲ್ಕ ಆಕ್ಷನ್ ಸೀಕ್ವೆನ್ಸ್ ಇದೆ. ಮಾಸ್ ಆಡಿಯನ್ಸ್ ಗೆ ಏನ್ ಬೇಕು ಅದು ಇದೆ. ಕ್ಲಾಸ್ ಆಡಿಯನ್ಸ್ ಬೇಕಾದ ಕಥೆಯು ಇದೆ ಎಂದರು.

ನಾಯಕ‌ ಧನ್ವೀರ್ ಮಾತನಾಡಿ, ವಾಮನ ಇದು ನನ್ನ ಮೂರನೇ ಸಿನಿಮಾ. ಇಂದು ಟೈಟಲ್ ಸಾಂಗ್ ರಿಲೀಸ್ ಮಾಡಿದ್ದೇವೆ. ಈ ತರ ಸಾಂಗ್ ನ್ನ ನನ್ನ ಹಿಂದಿನ ಸಿನಿಮಾಗಳಲ್ಲಿ ಎಕ್ಸ್ ಪೆಕ್ಟ್ ಮಾಡಿದ್ದೆ. ಆದರೆ ಚೇತನ್ ಸರ್ ನನ್ನ ಹಿಂದೆ ಇಟ್ಟುಬಿಟ್ಟಿದ್ದರು. ಹೋದ ಸಿನಿಮಾದಲ್ಲಿಯೇ ಇದು ಆಗಬೇಕಿತ್ತು. ಅವರ ಬರವಣಿಗೆಗೆ ನಾನು ದೊಡ್ಡ ಫ್ಯಾನ್. ಅವರ ಪದ ಜೋಡಣೆ ಎಲ್ಲಾ ಚೆನ್ನಾಗಿರುತ್ತದೆ. ಸಿನಿಮಾದಲ್ಲಿ ಒಳ್ಳೆ ಕಂಟೆಂಟ್ ಇದೆ. ಇವತ್ತಿನಿಂದ ನಮ್ಮ ಸಿನಿಮಾ ಪ್ರಮೋಷನ್ ಶುರುವಾಗಿದೆ. ನಿಮ್ಮ ಸಪೋರ್ಟ್ ಇರಲಿ ಎಂದರು.Wah...Wah...Wah...Vama's song came....Shokdar Dhanveer mass entry

ನಾಯಕಿ ರೀಷ್ಮಾ ನಾಣಯ್ಯ ಮಾತಾನಾಡಿ, ವಾಮನ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಇದೆಲ್ಲ ಕ್ರೆಡಿಟ್ ನಿರ್ದೇಶಕರು, ಚೇತನ್ ಸರ್ ಸಾಹಿತ್ಯ, ಶಶಾಂಕ್ ವಾಯ್ಸ್, ಅಜನೀಶ್ ಸಂಗೀತಕ್ಕೆ ಸಲ್ಲಬೇಕು. ಈ ಸಿನಿಮಾದ ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿ ಬಂದಿದೆ. ನನ್ನ ಪಾತ್ರದ ಹೆಸರು ನಂದಿನಿ. ಸಿಂಪಲ್ ಆದ ಮುದ್ದಾದ ಕ್ಯಾರೆಕ್ಟರ್. ಲವ್ ನಲ್ಲಿಯೇ ಫೈಟ್ ಇದೆ ಎಂದರು.

ನಿರ್ಮಾಪಕ ಚೇತನ್ ಗೌಡ ಮಾತನಾಡಿ, ವಾಮನ ಸಿನಿಮಾದಲ್ಲಿ ನಮ್ಮ ಶ್ರಮ ಕಡಿಮೆ. ನಿರ್ದೇಶಕರು, ಆಕ್ಟರ್ಸ್, ಟೆಕ್ನಿಷಿಯನ್ಸ್ ಎಲ್ಲಿಯೂ ಶ್ರಮ ಕೊಡಲಿಲ್ಲ. ನಾನು ಶೂಟಿಂಗ್ ಸ್ಪಾರ್ಟ್ ಗೆ ಹೋಗಿರುವುದು ಕೇವಲ ನಾಲ್ಕು ದಿನವಷ್ಟೇ. ಅವರ ಮನೆ ಸಿನಿಮಾ ಎನ್ನುವಂತೆ ಎಲ್ಲರು ಕೆಲಸ ಮಾಡಿದ್ದಾರೆ. ಒಳ್ಳೆ ಸಿನಿಮಾ ಮಾಡಬೇಕೆಂದು ಬಂದಿದ್ದೆ. ಒಳ್ಳೆ ಸಿನಿಮಾ ಆಗಿದೆ. ಕನ್ನಡ ಸಿನಿಮಾರಂಗಕ್ಕೆ ನಮ್ಮೊಂದು ಕೊಡುಗೆ ಇರಲಿ ಎಂದು ಮಾಡಿದ್ದೇವೆ. ಕೈ ಹಿಡಿದು ಆಶೀರ್ವದಿಸಿ ಎಂದರು.

ಧನ್ವೀರ್‌ಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ಅಭಿನಯಿಸಿದ್ದು, ತಾರಾ, ಸಂಪತ್‌, ಆದಿತ್ಯ ಮೆನನ್‌, ಶಿವರಾಜ್ ಕೆಆರ್ ಪೇಟೆ, ಅವಿನಾಶ್‌, ಅಚ್ಯುತ್‌ ಕುಮಾರ್‌, ಕಾಕ್ರೊಚ್‌ ಸುಧಿ, ಭೂಷಣ್‌ ಮುಂತಾದವು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಮಹೇಂದ್ರ ಸಿಂಹ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಅರ್ಜುನ್ ರಾಜ್, ವಿಕ್ರಮ್ ಮೋರ್ ಮತ್ತು ಜಾಲಿ ಬಾಸ್ಟಿನ್ ಆಕ್ಷನ್, ನವೀನ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಮೊದಲ ಹಾಡು ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಪ್ರಚಾರ ಕಾರ್ಯ ಆರಂಭಿಸಿದೆ.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…