ಕನ್ನಡ ಚಿತ್ರರಂಗದ ಜನಪ್ರಿಯ ನಟಿ ರಮ್ಯಾ.VinayRajkumar-and-Ramya
ಒಂದ್ಕಾಲದಲ್ಲಿ ಕನ್ನಡದ ಸ್ಟಾರ್ ನಟರ ಜೊತೆಗೆಲ್ಲಾ ನಟಿಸಿದ್ದ ಚೆಲುವೆ ಬಳಿಕ ಸೈಲೆಂಟ್ ಆಗಿಬಿಟ್ಟರು, ಪಾಲಿಟಿಕ್ಸ್ ಕಡೆ ಹೋಗಿ ಸಿನಿಮಾಗಳಿಂದ ದೂರಾಗಿದ್ದರು. ಬಳಿಕ ಮತ್ತೆ ವಾಪಸ್ ಬರುವ ಸುಳಿವು ಕೊಟ್ಟಿದ್ದರು. ಅದು ಸಾಧ್ಯವಾಗಲಿಲ್ಲ.
ಇದೀಗ ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ VinayRajkumar-and-Ramya ಜೊತೆ ಮೋಹಕ ತಾರೆ ರಮ್ಯಾ ಕ್ಯಾಮರಾ ಮುಂದೆ ನಿಂತಿದ್ದಾರೆ. ‘ಅಭಿ’ ಸಿನಿಮಾ ಮೂಲಕ ಅಣ್ಣಾವ್ರ ಬ್ಯಾನರ್‌ನಲ್ಲೇ ರಮ್ಯಾ ಚಿತ್ರರಂಗಕ್ಕೆ ಪರಿಚಿತರಾಗಿದ್ದರು. ಹಾಗಾಗಿ ದೊಡ್ಮನೆ ಎಲ್ಲಾ ಸದಸ್ಯರ ಜೊತೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದಾರೆ. ‘ಅಪ್ಪು’ ರೀ-ರಿಲೀಸ್ ಸಮಯದಲ್ಲಿ ವಿನಯ್ ಹಾಗೂ ರಮ್ಯಾ ಒಟ್ಟಿಗೆ ಸಿನಿಮಾ ವೀಕ್ಷಿಸಿದ್ದರು.
ನಟಿ ರಮ್ಯಾ ಅವರ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಲ್ಲಿ ಕೂಡ ಹಿಂದೆ ವಿನಯ್ ಮಿಂಚಿದ್ದರು, ವಿನಯ್ ಸಿನಿಮಾಗಳನ್ನು ನೋಡಿ ಮೆಚ್ಚಿಕೊಂಡಿದ್ದರು. ಅವಕಾಶ ಸಿಕ್ಕರೆ ವಿನಯ್ ಜೊತೆ ನಟಿಸ್ತೀನಿ ಎಂದು ಕೂಡ ಮೋಹಕ ತಾರೆ ಹೇಳಿದ್ದರು. ‘ಅಭಿ’ ಸಿನಿಮಾ ಸಮಯದಿಂದಲೂ ವಿನಯ್ ಅವರನ್ನು ರಮ್ಯಾ ನೋಡುತ್ತಿದ್ದಾರೆ. ಹಾಗಾಗಿ ಇಬ್ಬರ ನಡುವೆ ಆತ್ಮೀಯ ಒಡನಾಟವಿದೆ.
‘ಅಪ್ಪು’ ರೀ-ರಿಲೀಸ್ ವೇಳೆ ಚಿತ್ರಮಂದಿರದಲ್ಲಿ ರಮ್ಯಾ ಹಾಗೂ ವಿನಯ್ ಆಪ್ತತೆ ಗೊತ್ತಾಗಿತ್ತು. ಅಭಿಮಾನಿಗಳ ನಡುವೆ ರಮ್ಯಾ ಅವರನ್ನು ವಿನಯ್ ಬಹಳ ಕೇರ್ ಮಾಡಿದ್ದರು. ವಿನಯ್ 10-12 ವರ್ಷದ ಹುಡುಗನಾಗಿದ್ದ ಸಮಯದಿಂದಲೂ ರಮ್ಯಾ ನೋಡುತ್ತಿದ್ದಾರೆ. ‘ಅಭಿ’ ಹಾಗೂ ‘ಆಕಾಶ್’ ಸಿನಿಮಾ ಸೆಟ್‌ಗೂ ವಿನಯ್ ಹೋಗುತ್ತಿದ್ದಾರೆ. ಹಾಗಾಗಿ ಇಬ್ಬರ ನಡುವೆ ಉತ್ತಮ ಒಡನಾಟವಿದೆ. ವಿನಯ್ ನಟನೆಯ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಸೆಟ್‌ಗೂ ರಮ್ಯಾ ವಿಸಿಟ್ ಮಾಡಿದ್ದರು.
ಸದ್ಯ ರಮ್ಯಾ ಹಾಗೂ ವಿನಯ್ ಒಟ್ಟಿಗೆ ಕ್ಯಾಮರಾ ಎದುರಿಸಿದ್ದಾರೆ. ಆದರೆ ಯಾವುದೇ ಚಿತ್ರಕ್ಕಾಗಿ ಅಲ್ಲ. ಬದಲಿಗೆ ಸ್ವಾಸ ಮ್ಯಾಗಜೀನ್ ಫೋಟೊಶೂಟ್‌ಗಾಗಿ ಇಬ್ಬರೂ ಸ್ಟೈಲಿಶ್ ಅವತಾರದಲ್ಲಿ ಕ್ಯಾಮರಾ ಮುಂದೆ ನಿಂತಿದ್ದಾರೆ.