‘TRP ರಾಮ’ ಟ್ರೇಲರ್ ರಿಲೀಸ್..ಮಹಾಲಕ್ಷ್ಮೀ ಕಂಬ್ಯಾಕ್ ಸಿನಿಮಾ…

TRP Rama' Trailer Release

ದಶಕಗಳ ಹಿಂದೆ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದ ಮಹಾಲಕ್ಷ್ಮೀ TRP ರಾಮ TRP Rama’ Trailer Release ಸಿನಿಮಾ ಮೂಲಕ ಮತ್ತೆ ಕಮ್‌ಬ್ಯಾಕ್‌ ಆಗುತ್ತಿರುವುದು ಗೊತ್ತೇ ಇದೆ. ರವಿಪ್ರಸಾದ್‌ ನಟಿಸಿ ಮತ್ತು ನಿರ್ದೇಶನದ ಈ ಚಿತ್ರದ ಟ್ರೇಲರ್ ಅನಾವರಣಗೊಂಡಿದೆ. ಹೆಣ್ಣಿನ ಶೋಷಣೆ, ಮಾಧ್ಯಮಗಳ ಮೌಲ್ಯವೇನು ಅನ್ನೋದನ್ನು ಟ್ರೇಲರ್ ನಲ್ಲಿ ಕಟ್ಟಿಕೊಡಲಾಗಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಟ್ರೇಲರ್ ಬಿಡುಗಡೆ ಮಾಡಲಾಗಿದ್ದು, ಚಿತ್ರತಂಡ ಒಂದಷ್ಟು ಮಾಹಿತಿ ಹಂಚಿಕೊಂಡಿದೆ.TRP Rama' Trailer Release

ಹಿರಿಯ ನಟಿ ಮಹಾಲಕ್ಷ್ಮೀ ಮಾತನಾಡಿ, ನಾನು ಎಲ್ಲಾ ಭಾಷೆಯಲ್ಲಿ ಎಲ್ಲಾ ಹೀರೋಗಳ ಜೊತೆ ಸಿನಿಮಾ ಮಾಡಿದ್ದೇನೆ. ಎಲ್ಲವೂ ಟೀಂ ವರ್ಕ್..ನಮ್ಮ ಮನೆಯಲ್ಲಿ ಲಾಫಿಂಗ್ ಬುದ್ಧ ಇಟ್ಕೊಂಡು ನಗುತ್ತಾ ಇರುವುದು ಸಾಕಾಗಲ್ಲ. ಮೂರು ಕೋತಿ ನೆನಪು ಇದೆಯಲ್ಲಾ? ಕೆಟ್ಟದನ್ನು ಕೇಳಬಾರದು. ಕೆಟ್ಟದನ್ನು ನೋಡಬಾರದು..ಕೆಟ್ಟದನ್ನು ಮಾಡಬಾರದು. ಅದನ್ನು ನಿಮ್ಮ ಮಕ್ಕಳಿಗೆ ನೆನಪಿಸಿ. ಅವರ ಜೀವನ ಚೆನ್ನಾಗಿರುತ್ತದೆ. ಅದನ್ನೂ ಹೇಳಿಕೊಡುವುದೇ TRP ರಾಮ. ಎಂಟರ್ ಟೈನ್ಮೆಂಟ್ ಇದೆ. ಕ್ವಾಲಿಟಿ ಇದೆ. ನೀತಿ ಇದೆ. ಆ ನೀತಿ ನಮ್ಮ ಜನರೇಷನ್ ಗೆ ಸಿಗಬೇಕು. ನಮ್ಮ ಸರ್ಕಾರ ಎಲ್ಲಾ ನಿರ್ಧಾರ ತೆಗೆದುಕೊಳ್ಳುತ್ತಿದೆ. ಆದ್ರೆ ಅದನ್ನು ಫಾಲೋ ಮಾಡಲು ಆಗ್ತಿಲ್ಲ. TRP ರಾಮ ಬರೀ ಸಿನಿಮಾವಲ್ಲ. ಅದೊಂದು ಜೀವನ ಎಂದು ತಿಳಿಸಿದರು.TRP Rama' Trailer Release

ನಿರ್ದೇಶಕ ಕಂ ನಟ ರವಿ ಪ್ರಸಾದ್ ಮಾತನಾಡಿ, ಒಳ್ಳೆ ಬಜೆಟ್ ಗೆ ಸಿನಿಮಾ ಮಾಡಲು ತಯಾರಿ ನಡೆಸಿದಾಗ ಕಥೆ ಸಿಗುತ್ತಿರಲಿಲ್ಲ. ಅಂದರೆ ಬಜೆಟ್ ಗೆ ಹೊಂದಿಸಲು ಆಗುತ್ತಿರಲ್ಲ. ಆಗ ಹೊಳೆದಿದ್ದೇ TRP ರಾಮ ಕಥೆ. ರಾಮನ ನಾನೇ ಆ ಪಾತ್ರ ಮಾಡಬೇಕು ಎಂದು ಇರಲಿಲ್ಲ. ಈ ರೀತಿ ಕಂಟೆಂಟ್ ಇರುವ ಸಿನಿಮಾವನ್ನು ಯಾರ ಮೂಲಕ ಹೇಳಿಸಬೇಕು ಎಂದು ಹುಡುಕುತ್ತಿದ್ದೇವೆ. ಆಗ ತಲೆಗೆ ಬಂದಿದ್ದು ಮಹಾಲಕ್ಷ್ಮೀ ಮೇಡಂ. ಕಮರ್ಷಿಯಲ್ ಜೊತೆ ಒಂದೊಳ್ಳೆ ಸಂದೇಶ ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಸೆನ್ಸಾರ್ ಆಗಬೇಕಿದೆ. ಅಕ್ಟೋಬರ್ ಮೊದಲ ವಾರ ತೆರೆಗೆ ತರುವ ಪ್ರಯತ್ನ ನಡೆಯುತ್ತದೆ ಎಂದು ತಿಳಿಸಿದರು.

 

Megha Shetty

TRP Rama' Trailer Release

ಹಿರಿಯ ಕಲಾವಿದರಾದ ಓಂ ಸಾಯಿ ಪ್ರಕಾಶ್ ಮಾತನಾಡಿ, ನೈಜ ಘಟನೆಗಳನ್ನು ನಾವು ತೆಗೆದುಕೊಂಡಾಗ ಅದು ಅದು ಹೃದಯಕ್ಕೆ ಹತ್ತಿರವಾಗುತ್ತದೆ. ಟ್ರೇಲರ್ ನೋಡುವಾಗ ತುಂಬಾ ನೋವು ಅನಿಸಿತು. ಸಮಾಜದಲ್ಲಿ ಹೆಣ್ಣನ್ನು ಬೇರೆ ರೀತಿ ನೋಡುವ ಸನ್ನಿವೇಶವಿದೆ. ಸರ್ಕಾರ ಎಷ್ಟು ಕಾನೂನು ಮಾಡುತ್ತಿದ್ದೆ. ಆದರೂ ರಾಕ್ಷಸ ಮನಸ್ಸು ತಡೆಯುತ್ತಿಲ್ಲ. ದಿನದಿಂದಕ್ಕೆ ಈ ರೀತಿ ಹೆಚ್ಚಾಗುತ್ತಿವೆ. ನಾಯಕನೋ ಖಳನಾಯಕನೋ ಗೊತ್ತಿಲ್ಲ. ಕಲಾವಿದರು ಯಾವ ಪಾತ್ರವಾದರೂ ನ್ಯಾಯ ಒದಗಿಸುತ್ತಾರೆ. ಮಹಾಲಕ್ಷ್ಮೀ ತಂದೆ-ತಾಯಿ ಇಬ್ಬರು ಮಹಾನ್ ನಟರು. ಅವರ ತಾಯಿ ಜೊತೆ ತೆಲುಗು ಸಿನಿಮಾ ರಂಗದಲ್ಲಿ ಕೆಲಸ ಮಾಡಿದ್ದೇನೆ. ಮಹಾಲಕ್ಷ್ಮೀ ನೋಡಿದ ತಕ್ಷಣ ನಿಮ್ಮ ತಾಯಿ ನೆನಪಾಗ್ತಿದ್ದಾರೆ ಎಂದೆ. ಎಮೋಷನ್ ಸೀನ್ಸ್ ಅದ್ಭುತವಾಗಿ ಮಾಡುತ್ತಾರೆ. ನಾಯಕನ ಜೀವನದಲ್ಲಿ ಏನಾಯ್ತೋ ಗೊತ್ತಿಲ್ಲ. ನಾಯಕನ ಹೆಸರು ರಾಮ ನೋಡಲು ರಾವಣ ತರ ಕಾಣುತ್ತಾನೆ. ಚಿತ್ರ ನೋಡಿದರೇ ಎಲ್ಲವೂ ಗೊತ್ತಾಗಲಿದೆ. ಇಡೀ TRP ತಂಡಕ್ಕೆ ಒಳ್ಳೆಯದಾಗಲಿ ಎಂದು ತಿಳಿಸಿದರು.TRP Rama' Trailer Release

ನಟಿ ಸ್ಪರ್ಶ ಮಾತನಾಡಿ, ಈ ಸಿನಿಮಾ ಒಪ್ಪಿಕೊಳ್ಳಲು ಮಹಾಲಕ್ಷ್ಮೀ ಮೇಡಂ ಕಾರಣ. ಅವರ ಕಂಬ್ಯಾಕ್ ಚಿತ್ರ. ಅಂತಹ ಲೆಜೆಂಡ್ ಜೊತೆ ಕೆಲಸ ಮಾಡಲು ಎಲ್ಲರಿಗೂ ಅವಕಾಶ ಸಿಗಲ್ಲ. ಪ್ರವೀಣ್ ಸೂಡಾ ಇದಕ್ಕೆ ಸಂಭಾಷಣೆ ಬರೆದಿದ್ದಾರೆ. ಅವರು ಕಥೆ ಹೇಳಿದಾಗ ತುಂಬಾ ಚೆನ್ನಾಗಿದೆ ಅನಿಸಿತು. ತುಂಬಾ ಫಾಸ್ಟ್ ಯುಗದಲ್ಲಿ ಚಿಕ್ಕಪುಟ್ಟ ತಪ್ಪುಗಳಿಂದ ಎಷ್ಟು ದೊಡ್ಡ ಪ್ರಮಾದವಾಗುತ್ತದೆ ಅನ್ನೋದು ಚಿತ್ರದ ಒಂದು ಎಳೆ. ಅದನ್ನು ತುಂಬಾ ಅದ್ಭುತವಾಗಿ ಚಿತ್ರೀಕರಿಸಿದ್ದಾರೆ ಎಂದರು.

Elnaaz Norouzi

ಅಶುತೋಶ್ ಪಿಕ್ಚರ್ಸ್ ಬ್ಯಾನರ್ ನಡಿ ನಿರ್ಮಾಣವಾಗಿರುವ TRP ರಾಮ ಸಿನಿಮಾದಲ್ಲಿ ರವಿಪ್ರಸಾದ್‌ ನಟಿಸಿ, ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಪ್ರಯತ್ನ. ಮಹಾಲಕ್ಷ್ಮೀ ತಾಯಿ ಪಾತ್ರದಲ್ಲಿ, ಪತ್ರಕರ್ತೆಯಾಗಿ ಸ್ಪರ್ಶಯಾಗಿ ನಟಿಸಿದ್ದಾರೆ. ರಾಜ್ ಗುರು ಹೊಸಕೋಟೆ ಸಂಗೀತ, ಸುನಿಲ್ ಕಶ್ಯಪ್ ಸಂಕಲನ, ಗುರುಪ್ರಸಾದ್ ಛಾಯಾಗ್ರಹಣ, ರಾಕೇಶ್ ಆಚಾರ್ಯ ಬಿಜಿಎಂ ಸಿನಿಮಾಕ್ಕಿದೆ. ಸೆನ್ಸಾರ್ ಗಾಗಿ ಕಾಯ್ತಿರುವ TRP ರಾಮ ಆದಷ್ಟು ಬೇಗ ನಿಮ್ಮ ಮುಂದೆ ಬರಲಿದ್ದಾನೆ.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…