ಅರ್ಜುನ್ ಯೋಗಿ-ಸಾರಿಕಾ ರಾವ್ ನಟನೆಯ ‘ಅನಾವರಣ’ ಸಿನಿಮಾದ ಮೊದಲ ಹಾಡು ರಿಲೀಸ್

The first song of Arjun Yogi-Sarika Rao starrer 'Anavarana' is released

ನಮ್ಮ ಸಿನಿಮಾ ಬ್ಯಾನರ್ ನಡಿ ಅದ್ವೈತ್ ಪ್ರಭಾಕರ್, ಆರ್. ರಾಮಚಂದ್ರ, ಸತ್ಯ ರಾಣಿ ಜಿ & ರಚನಾ ಬಿ. ಹೆಚ್ ನಿರ್ಮಾಣದ ಅನಾವರಣ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಏನಾಗಿದೆ ಎಂಬ ಪ್ರೇಮಗೀತೆಗೆ ಶಶಿಕುಮಾರ್ ಬೆಳವಾಡಿ ಸಾಹಿತ್ಯ ಬರೆದಿದ್ದು, ವಿಶಾಲ್ ಸಿ ಕೃಷ್ಣ ಟ್ಯೂನ್ ಹಾಕಿದ್ದಾರೆ. ಅರ್ಜುನ್ ಯೋಗಿ, ಸಾರಿಕಾ ರಾವ್ ಹಾಡಿನಲ್ಲಿ ಮಿಂಚಿದ್ದಾರೆ.The first song of Arjun Yogi-Sarika Rao starrer 'Anavarana' is released

ನಿರ್ದೇಶಕ ಹರೀಶ್ ಕುಮಾರ್ ಮಾತನಾಡಿ, ಇದು ನಮ್ಮ ಹಲವಾರು ವರ್ಷದ ಕನಸು. ನಾನು 15 ವರ್ಷ ರಂಗಭೂಮಿಯಲ್ಲಿ ದುಡಿದೆವು. ಸಿನಿಮಾ ಸೆಳೆತ ಬಂತು. 40 ಕಿರುಚಿತ್ರ ನಿರ್ದೇಶಿಸಿದ್ದೇವೆ. ನಮ್ಮ ಕಥೆ ಒಳ್ಳೆ ಒಮ್ಮತ ಬಂತು. ಹೀಗಾಗಿ ಚಿತ್ರ ಮಾಡಲು ಹೆಜ್ಜೆ ಇಟ್ಟೆವು. ಚಿತ್ರದಲ್ಲಿ ಬರುವ ಹಲವಾರು ವಿಶೇಷತೆಗಳ ಅನಾವರಣ. ನಮ್ಮ ನಿರ್ದೇಶಕರ ಪಯಣಕ್ಕೆ ಅನಾವರಣ. ಒಳ್ಳೆ ಸಾಹಿತ್ಯದ ಅನಾವರಣ, ಇಬ್ಬರು ಬೆನ್ನುತಟ್ಟಿದ ನಿರ್ಮಾಪಕ ಅನಾವರಣ.. ನಮ್ಮದೇ ಕಥೆ ಅನಿಸುವ ಸಿನಿಮಾವಿದು ಎಂದರು.The first song of Arjun Yogi-Sarika Rao starrer 'Anavarana' is released

ನಿರ್ದೇಶಕ ಮಂಜುನಾಥ್ ಮಾತನಾಡಿ, ತುಂಬಾ ಪ್ರೀತಿ ಮಾಡುವವರು, ತುಂಬಾ ಪ್ರೀತಿಯಾದರೆ ಯಾವ ರೀತಿ, ಕಾಟ, ಭಾದೆ ಇರುತ್ತದೆ ಅನ್ನುವುದನ್ನು ಸಿನಿಮಾದಲ್ಲಿ ತೋರಿಸಿದ್ದೇವೆ ಎಂದರು.

ಅರ್ಜುನ್ ಯೋಗಿ ಮಾತನಾಡಿ, ನನ್ನ ಹಿಂದಿನ ಸಿನಿಮಾ ಚೇಸ್ ನೋಡಿ ಕಾಲ್ ಮಾಡಿದ್ದರು. ಚಿತ್ರ ರಿಲೀಸ್ ದಿನ ನಮ್ಮ ಕೆಲಸ ನೋಡಿ ಮೆಚ್ಚಿ ಇನ್ನೊಂದು ಕೆಲಸ ಕೊಡ್ತಾರೆ ಅದೇ ಖುಷಿ ವಿಚಾರ. ಅನಾವರಣ ಚಿತ್ರಕ್ಕೆ ಇಬ್ಬರು ನಿರ್ದೇಶಕರು. ಅವರು ಏನ್ ಕಥೆ ಹೇಳಿದ್ದರು ಅದಕ್ಕಿಂತ ದುಪ್ಪಟ್ಟಾಗಿ ಸಿನಿಮಾ ಮೂಡಿಬಂದಿದೆ. ಗ್ಲಿಂಪ್ಸ್, ಟ್ರೇಲರ್ ನೋಡಿದ್ದೇನೆ. ಈ ತಂಡ ಗೆದ್ದರೆ ಇನ್ನೊಂದಿಷ್ಟು ಸಿನಿಮಾಗಳು ಹುಟ್ಟಿಕೊಳ್ಳುತ್ತದೆ. ತುಂಬಾ ಚೆನ್ನಾಗಿ ಕಥೆ ಕಟ್ಟಿದ್ದಾರೆ. ನನಗೆ ಬಹಳ ಇಷ್ಟವಾಗಿದೆ. ನಾನು ಸಾಫ್ಟ್ ವೇರ್ ಇಂಜಿನಿಯರ್ ಪಾತ್ರ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ ಎಂದರು.The first song of Arjun Yogi-Sarika Rao starrer 'Anavarana' is released

ನಟಿ ಸಾರಿಕಾ ಮಾತನಾಡಿ, ತುಂಬಾ ಪೊಸೆಸಿವ್ ನೆಸ್ ಆಗಿರುವ ಹುಡುಗಿ ಪಾತ್ರ ನನ್ನದು. ನಿಮಗೆ ಎಲ್ಲರಿಗೂ ಕೋಪ ಬರುತ್ತದೆ ಅಂತಹ ಕಾರೆಕ್ಟರ್. ಗಂಡ ಎಲ್ಲಿ ಹೋಗಲಿ ಬಿಡ್ಲಿ ಅವನಿಗೆ ಅಷ್ಟು ಟಾರ್ಚರ್ ಕೊಟ್ಟಾಗಿ ಬಿಟ್ಟಿದ್ದೇನೆ. ಶೂಟಿಂಗ್ ಸೆಟ್ ನಲ್ಲಿ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದೇನೆ. ಶೂಟಿಂಗ್ ಅನಿಸುತ್ತನೆ ಇರಲಿಲ್ಲ. ಹಾಲಿಡೇ ತರ ಇತ್ತು. ಮಂಜು ಸರ್ ಜೊತೆ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ. ನಿಮ್ಮ ಆಶೀರ್ವಾದ ನಮ್ಮ ಇಡೀ ತಂಡದ ಮೇಲೆ ಇರಬೇಕು ಎಂದರು.The first song of Arjun Yogi-Sarika Rao starrer 'Anavarana' is released

ಅರ್ಜುನ್ ಯೋಗಿ, ಸಾರಿಕಾ ರಾವ್ ನಾಯಕ ಹಾಗೂ ನಾಯಕಿಯಾಗಿ ನಟಿಸಿದ್ದು, ,ಗೌರೀಶ್ ಅಕ್ಕಿ, ನಂದ ಗೋಪಾಲ್, ಹೊನ್ನವಳ್ಳಿ ಕೃಷ್ಣ, ರತಸಪ್ತಮಿ ಅರವಿಂದ್, ಕಾಮಿಡಿ ಕಿಲಾಡಿ ಸೂರಜ್, ಸೂರ್ಯ, ಸಂತು, ವಾಣಿ, ರಾಜೇಶ್ವರಿ, ಕಮಲಾ ತಾರಾಬಳಗದಲ್ಲಿದ್ದಾರೆ. ಆಗಿದೆ. ಹರೀಶ್ ಕುಮಾರ್, ಮಂಜುನಾಥ್ ಪಿಳ್ಳಪ್ಪ ಇಬ್ಬರು ಅನಾವರಣ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ವೆಂಕಿ ಸಂಕಲನ, ಶಶಿಕುಮಾರ್ ಸಾಹಿತ್ಯ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ವಿಶಾಲ್ ಸಿ ಕೃಷ್ಣ ಸಿನಿಮಾಕ್ಕಿದೆ. ಫ್ಯಾಮಿಲಿ ಡ್ರಾಮಾ ಜೊತೆಗೆ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಅನಾವರಣ ಶೂಟಿಂಗ್ ಮುಗಿಸಿ ಸೆನ್ಸಾರ್ ಅಂಗಳ ಹೋಗಲು ರೆಡಿಯಾಗಿದೆ.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…