ಕೊಲೆ ಮಾಡಿದ್ದು ಯಾರು ಶೀಲ?

sheela kannada movie review

Sheela 3/5

ಶೀಲ ಹೆಸರಿನ ಚಿತ್ರವೊಂದು ಈ ವಾರ ತೆರೆ ಕಂಡಿದೆ. ಇದು ಏಕಕಾಲದಲ್ಲಿ ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ನಿರ್ಮಾಣಗೊಂಡಿರುವ ಸಿನಿಮಾ. ರಾಗಿಣಿ ಇಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ. ಮಲಯಾಳಂನಲ್ಲಿ ಕಳೆದವಾರವೇ ಈ ಚಿತ್ರ ಬಿಡುಗಡೆಗೊಂಡಿತ್ತು. ಈಗ ಕನ್ನಡದಲ್ಲೂ ತೆರೆಗೆ ಬಂದಿದೆ.sheela kannada movie review

ಗಂಡನನ್ನು ಕಳೆದುಕೊಂಡ ಹೆಣ್ಣುಮಗಳು. ಸಾಲ ಕೊಟ್ಟವರ ಹಿಂಸೆ ತಡೆಯಲಾರದೆ, ತನ್ನ ರೆಸಾರ್ಟನ್ನು ಮಾರಾಟ ಮಾಡಲು ಹೊರಟಿರುತ್ತಾಳೆ. ಇನ್ನೇನು ಬೆಳಗಾದರೆ ಆ ಪ್ರಾಪರ್ಟಿ ಮಾರಾಟವಾಗಿ, ಅದರ ಬಾಬ್ತು ಈಕೆಯ ಕೈಸೇರಬೇಕಿರುತ್ತದೆ. ಅಷ್ಟರಲ್ಲಿ ಒಂದಷ್ಟು ವಿಚಿತ್ರ ಘಟನೆಗಳು ನಡೆದು ಹೋಗುತ್ತವೆ. ತನ್ನ ಸುತ್ತ ಏನಾಗುತ್ತಿದೆ. ಯಾಕೆ ದುಷ್ಟಕೂಟ ತನ್ನನ್ನು ಆವರಿಸಿಕೊಂಡಿದೆ? ಅಂತಾ ತಿಳಿದುಕೊಳ್ಳುವ ಮುಂಚೆಯೇ ಆಕ್ರಮಣ, ಅನಾಹುತಗಳೆಲ್ಲಾ ಘಟಿಸುತ್ತವೆ. ಇದು ಶೀಲ ಚಿತ್ರದ ಒಟ್ಟಾರೆ ಸಾರಾಂಶ. ತೀರಾ ಸಣ್ಣದೊಂದು ಎಳೆಯನ್ನಿಟ್ಟುಕೊಂಡು ನೋಡುಗರಿಗೆ ಥ್ರಿಲ್ಲಾಗುವಂತೆ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಚಿತ್ರದ ಕತೆ ಬಹುತೇಕ ಒಂದು ರೆಸಾರ್ಟ್‌ ಥರದ ಬಿಲ್ಡಿಂಗಿನಲ್ಲೇ ನಡೆದುಹೋಗುತ್ತದೆ. ಒಂದೇ ಲೊಕೇಷನ್ನಿನಲ್ಲಿ, ರಾತ್ರಿ ನಡೆಯುವ ಘಟನೆಯ ಸುತ್ತ ಈ ಸಿನಿಮಾ ಸುತ್ತುವರೆದಿದೆ. ಅರುಣ್‌ ಕೂತೇದತ್‌ ಕ್ಯಾಮೆರಾ ಕೆಲಸ, ಅಲೋಶ್ಯಾ ಪೀಟರ್‌ ಸಂಗೀತ ಸಿನಿಮಾದ ಕಂಟೆಂಟ್‌ಗೆ ಪೂರಕವಾಗಿದೆ. ಅವಿನಾಶ್‌, ಶೋಭರಾಜ್‌, ಚಿತ್ರಾ ಶೆಣೈ, ರಾಗಿಣಿಯನ್ನು ಹೊರತುಪಡಿಸಿ ಮಿಕ್ಕ ಕಲಾವಿದ, ತಂತ್ರಜ್ಞರೆಲ್ಲಾ ಕೇರಳದವರೇ ಆಗಿದ್ದಾರೆ. ನಿರ್ದೇಶಕ ಬಾಲು ನಾರಾಯಣ್ ಈ ಚಿತ್ರವನ್ನು ದ್ವಿಭಾಷೆಯಲ್ಲಿ ಯಾವ ಕಾರಣಕ್ಕೆ ರೂಪಿಸಿದರೋ ಗೊತ್ತಿಲ್ಲ. ಹೆಚ್ಚೂ ಕಮ್ಮಿ ಇದು ಮಲಯಾಳದ ಪ್ರೇಕ್ಷಕರಿಗೆ ಮಾತ್ರ ಹಿಡಿಸುವಂತಾ ಕಥಾವಸ್ತುವನ್ನು ಹೊಂದಿದೆ. ಕಣ್ಮುಂದೆ ನಡೆಯುತ್ತಿರುವ ಘಟನೆಯ ಹೊರತಾಗಿ, ಅನೇಕ ವಿವರಗಳನ್ನು ದಾಖಲಿಸುವ ಪ್ರಯತ್ನವನ್ನೇ ನಿರ್ದೇಶಕ ಬಾಲು ನಾರಾಯಣ್‌ ಮಾಡಿಲ್ಲ. ಒಟ್ಟಾರೆ ಘಟನಾವಳಿಗಳ ಹಿಂದಿರುವ ಉದ್ದೇಶ ಹಣ ಅನ್ನೋದೇನೋ ನಿಜ. ಆದರೆ, ನಿಖರವಾದ ಉದ್ದೇಶ, ವಿಚಾರಗಳೇನು ಅನ್ನೋದೇ ಇಲ್ಲಿ ಅನಾವರಣಗೊಂಡಿಲ್ಲ.sheela kannada movie review

ಕೆಲವಾರು ಲಾಜಿಕ್ಕುಗಳು ಮಿಸ್ಸಾಗಿವೆ ಅನ್ನೋದನ್ನು ಬಿಟ್ಟರೆ, ಮಿಕ್ಕಂತೆ ಶೀಲಾ ಎಲ್ಲೂ ಬೋರು ಹೊಡೆಸದಂತೆ ನೋಡಿಸಿಕೊಂಡು ಹೋಗುತ್ತದೆ. ರಾಗಿಣಿ ಇಲ್ಲಿ ಗುಣಮಟ್ಟದ ಅಭಿನಯ ನೀಡಿದ್ದಾರೆ. ಮಹಿಳಾ ಪ್ರಧಾನ ಥ್ರಿಲ್ಲರ್‌ ಸಿನಿಮಾಗಳನ್ನು ನೋಡಲು ಬಯಸುವ ಪ್ರೇಕ್ಷಕರು ಒಮ್ಮೆ ಶೀಲಾ ನೋಡಬಹುದು!

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…