ಮಲೆನಾಡಿನ ಸಿನಿಹಬ್ಬಕ್ಕೆ ಜೊತೆಯಾದ ಸತ್ಯ ಪಿಕ್ಚರ್ಸ್ ಹಾಗೂ ಅನ್ಲಾಕ್ ರಾಘವ ಚಿತ್ರತಂಡ

Satya Pictures and Unlock Raghava film team joined the Malnad film festival

ಇಂದು ಜೋಗದೂರು ಶಿವಮೊಗ್ಗದಲ್ಲಿ ಸಿನಿಹಬ್ಬ – ಮಲೆನಾಡ ಕಿರುಚಿತ್ರೋತ್ಸವ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು. ಸತ್ಯ ಪಿಕ್ಚರ್ಸ್ ಸಹಯೋಗದಲ್ಲಿ ತೀರ್ಥಹಳ್ಳಿಯ ಕುರ್ಕುರೆ ಕ್ರಿಯೇಷನ್ಸ್ ಹಾಗೂ ಶಿವಮೊಗ್ಗದ ಶಿವಮೊಗ್ಗ ಸಿನಿಮಾಸ್ ಅಡ್ಡ ಜಂಟಿಯಾಗಿ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ‘ಸಿನಿಹಬ್ಬ’ ಕಾರ್ಯಕ್ರಮವನ್ನು ಆಯೋಜಿಸಿದ್ದರು.Satya Pictures and Unlock Raghava film team joined the Malnad film festival

ಕನ್ನಡ ಚಲನಚಿತ್ರರಂಗದಲ್ಲಿ ತಮ್ಮ ವಿಶೇಷ ಶೈಲಿಯಿಂದ ಹೊಸ ಛಾಪು ಮೂಡಿಸುತ್ತಿರುವ ಯುವ ನಿರ್ದೇಶಕರಾದ ಡಿ.ಸತ್ಯಪ್ರಕಾಶ್ ಹಾಗೂ ಕುಶಾಲ್ ಗೌಡ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಿನಿಹಬ್ಬದಲ್ಲಿ ಕಿರುಚಿತ್ರಗಳನ್ನು ವೀಕ್ಷಿಸಿ, ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಲೆನಾಡಿನ ಯುವಪ್ರತಿಭೆಗಳು ಸಿನಿಮಾರಂಗದಲ್ಲಿ ಮತ್ತಷ್ಟು ಸಕ್ರಿಯರಾಗುವಂತೆ ಪ್ರೋತ್ಸಾಹಿಸಿದರು.Satya Pictures and Unlock Raghava film team joined the Malnad film festival

ಅನ್ ಲಾಕ್ ರಾಘವ ಚಲನಚಿತ್ರದ ನಿರ್ಮಾಪಕರಾದ ಡಿ.ಮಂಜುನಾಥ್ ಅವರು ಸಿನಿಹಬ್ಬವನ್ನು ಉದ್ಘಾಟಿಸಿ, ಉತ್ತಮ ಸಿನಿಕತೆಗಳಿಗೆ ವೇದಿಕೆ ಕಲ್ಪಿಸಿಕೊಡುವುದಕ್ಕಾಗಿ ಪ್ರೋತ್ಸಾಹವಿದ್ದೇ ಇರುತ್ತದೆ ಎಂದರು. ಸಿನಿಹಬ್ಬದಲ್ಲಿ ಪುನೀತ್ ರಾಜ್ ಕುಮಾರ್ ಹಾಗೂ ಶಂಕರ್ ನಾಗ್ ಅವರಿಗೆ ಪುಷ್ಪನಮನವನ್ನು ಸಲ್ಲಿಸಲಾಯಿತು.Satya Pictures and Unlock Raghava film team joined the Malnad film festival

“ಕನ್ನಡ ಚಿತ್ರರಂಗಕ್ಕೆ ಪ್ರಾದೇಶಿಕ ಸೊಗಡಿನ ಕತೆಗಳ ಅವಶ್ಯಕತೆ ಇದೆ. ಯುವಕರು ನಟನೆಯತ್ತ ಮಾತ್ರ ಹೊರಳದೇ ಅಲ್ಲದೇ ತಾಂತ್ರಿಕ ವಿಭಾಗಗಳಲ್ಲೂ ತೊಡಗಿಸಿಕೊಳ್ಳಬೇಕು” ಎಂದು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಡಿ.ಸತ್ಯಪ್ರಕಾಶ್ ಹೇಳಿದರು. ತೀರ್ಥಹಳ್ಳಿಯ ನವಪ್ರತಿಭೆ, ಅನ್ ಲಾಕ್ ರಾಘವ ಚಲನಚಿತ್ರದ ನಾಯಕನಟ ಮಿಲಿಂದ್ ಅವರಿಗೆ ಸಭಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರು ಆತ್ಮೀಯವಾಗಿ ಸ್ವಾಗತಿಸಿ, ಶುಭ ಹಾರೈಸಿದರು.Satya Pictures and Unlock Raghava film team joined the Malnad film festival

ಮಲೆನಾಡ ಯುವ ಪ್ರತಿಭೆಗಳ ಐದು ಕಿರುಚಿತ್ರಗಳು ಸಿನಿಹಬ್ಬದಲ್ಲಿ ಪ್ರದರ್ಶಿತಗೊಂಡದ್ದು ವಿಶೇಷ. ಕಾರ್ತಿಕ್ ಶ್ರೀಯನ್ ನಿರ್ದೇಶನದ ‘ಕಂಪೋಸರ್’, ರಾಕೇಶ್ ಬಿ ಜೆ ಹಾಸನ್ ನಿರ್ದೇಶಿಸಿರುವ ‘ಮಾಧ ಪುರಾಣ’, ಅನೀಶ್ ಎಸ್ ಶರ್ಮಾ ನಿರ್ದೇಶನದ ‘ವಡ್ಡಾರಾಧಕ’, ವಿನಯ್ ಶೆಟ್ಟಿ ನಿರ್ದೇಶಿಸಿರುವ ‘ಅಸ್ಪಷ್ಟ’, ಕಾರ್ತಿಕ್ ಕುರ್ಕುರೆ ನಿರ್ದೇಶಿಸಿರುವ ‘ಅಧ್ಯಾಯ ಮೂರು’ ಹಾಗೂ ‘ಎಕ್ಸಿಬಿಷನಿಸಮ್’ ಕಿರುಚಿತ್ರಗಳನ್ನು ಪ್ರದರ್ಶಿಸಲಾಯಿತು. ಈ ಎಲ್ಲ ಕಿರುಚಿತ್ರಗಳೂ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಗಳಿಸಿದವು.

ಸಿನಿಹಬ್ಬ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿಯ ಸಿನಿಮಾ ನಿರ್ಮಾಪಕರಾದ ನಾಗೇಂದ್ರ ಜೋಯಿಸ್, ಶಿವಮೊಗ್ಗ ಸಿನಿಮಾಸ್ ಅಡ್ಡದ ರಘು ಕಡೂರು ಗುಂಡ್ಲು, ಕುರ್ಕುರೆ ಕ್ರಿಯೇಷನ್ಸ್ ನ ವಿನಯ್ ಶೆಟ್ಟಿ ಹಾಗೂ ಕಾರ್ತಿಕ್ ಕುರ್ಕುರೆ, ಶಿವಮೊಗ್ಗದ ರಂಗಾಯಣದ ನಿರ್ದೇಶಕರಾದ ಸಂದೇಶ್ ಜವಳಿ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…