ಸಲಾರ್’ ಚಿತ್ರ ದೇಶ ಕಂಡು ಎರಡು ದೊಡ್ಡ ಚಿತ್ರ ಸರಣಿಗಳಾದ ಬಾಹುಬಲಿ ಮತ್ತು ಕೆಜಿಎಫ್ನ ಅತೀ ದೊಡ್ಡ ಸಂಗಮ.. ‘ಕೆಜಿಎಫ್’ ಚಿತ್ರತಂಡ ಒಂದು ಕಡೆಯಾದರೆ, ‘ಬಾಹುಬಲಿ’ ಚಿತ್ರದ ನಾಯಕ ಪ್ರಭಾಸ್, ಭಾರತದ ಅತೀ ದೊಡ್ಡ ಆಕ್ಷನ್ ಚಿತ್ರಕ್ಕೆ ಕೈಜೋಡಿಸಿರುವುದು ವಿಶೇಷ. ಮಹಾ ಸಂಗಮವೇ ” ಸಾಲಾರ್” . ಈ ಸಂಗಮದ ಬಗ್ಗೆ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳಿದ್ದು, ಆಕ್ಷನ್ ಪ್ರಿಯರಿಗೆ ರಸದೌತಣ ಸಿಗಲಿದೆ.
ದೇಶವೇ ಮೆಚ್ಚಿ ಹೆಮ್ಮೆಪಟ್ಟ ‘ಕೆಜಿಎಫ್’ 1 ಮತ್ತು ‘ಕೆಜಿಎಫ್2’ ಚಿತ್ರಗಳ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ನಿಂದ ನಿರ್ಮಾಣವಾಗಿರುವ ಮೊದಲ ಬಾರತೀಯ ಚಿತ್ರ ಪ್ರಭಾಸ್ ಅಭಿನಯದ ‘ಸಲಾರ್’ನ ಪೋಸ್ಟರ್, 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬಿಡುಗಡೆಯಾಗಿದೆ.
ಹೊಂಬಾಳೆ ಫಿಲಂಸ್ನಡಿ ವಿಜಯಕುಮಾರ್ ಕಿರಗಂದೂರು ನಿರ್ಮಿಸಿ, ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ‘ಸಲಾರ್’ ಚಿತ್ರವು 2023ರ ಸೆಪ್ಟೆಂಬರ್ 28ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. 400 ಕೋಟಿ ರೂ.ಗಳಿಗೂ ಮೀರಿದ ಅತೀ ದುಬಾರಿ ವೆಚ್ಚದ ಮತ್ತು ಅತೀ ನಿರೀಕ್ಷೆಯ ಈ ಚಿತ್ರವು ಈಗಾಗಲೇ ತನ್ನ ಹೈವೋಲ್ಟೇಜ್ ಆಕ್ಷನ್ ದೃಶ್ಯಗಳಿಂದ ಸಾಕಷ್ಟು ಸುದ್ದಿ ಮಾಡುತ್ತಿದೆ.
ಈ ಹಿಂದೆ ಬಿಡುಗಡೆಯಾದ ಚಿತ್ರದ ಕೆಲವು ಪೋಸ್ಟರ್ಗಳು ಈಗಾಗಲೇ ಜನರ ಮನ ಗೆದ್ದಿದೆ. ಇದೀಗ ಚಿತ್ರತಂಡವು ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ.
‘ಸಲಾರ್’ ಒಂದು ಪಕ್ಕಾ ಆಕ್ಷನ್ ಮತ್ತು ಸಾಹಸಮಯ ಚಿತ್ರವಾಗಿದ್ದು ಭಾರತವಲ್ಲದೆ, ಯೂರೋಪ್, ಆಫ್ರಿಕಾ ಮುಂತಾದ ಕಡೆ ಚಿತ್ರೀಕರಣವಾಗಲಿದೆ.
ಈ ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಈಗಾಗಲೇ ಮೊದಲ ಭಾಗದ ಚಿತ್ರೀಕರಣ ಸಂಪೂರ್ಣವಾಗಿದೆ. ಚಿತ್ರತಂಡವು ಸದ್ಯದಲ್ಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದು, ಈ ಚಿತ್ರದ ಗ್ರಾಫಿಕ್ಸ್ ಕೆಲಸದ ಜವಾಬ್ದಾರಿಯನ್ನು ವಿದೇಶದ ಪ್ರತಿಷ್ಠಿತ ಸ್ಟುಡಿಯೋಗೆ ನೀಡಲಾಗಿದ್ದು. ಭಾರತದಲ್ಲಿ ಇದುವರೆಗೂ ಯಾವ ಚಿತ್ರದಲ್ಲೂ ನೋಡದಂತಹ ಅತ್ಯುನ್ನತ ವಿಎಫ್ಎಕ್ಸ್ ಕೆಲಸವನ್ನು ಈ ಚಿತ್ರದಲ್ಲಿ ನೋಡಬಹುದು ಎಂದು ಹೇಳಲಾಗಿದೆ.
‘ಕೆಜಿಎಫ್ 2’ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಪ್ರಶಾಂತ್ ನೀಲ್, ಈಗ ಭಾರತದಲ್ಲೇ ಅತ್ಯಂತ ಬೇಡಿಕೆಯ ನಿರ್ದೇಶಕ ಎಂದರೆ ತಪ್ಪಾಗಲಾರದು. ಇಂಥ ಜನಪ್ರಿಯ ಮತ್ತು ಯಶಸ್ವಿ ನಿರ್ದೇಶಕರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರವು ಐದು ಭಾಷೆಗಳಲ್ಲಿ ಮೂಡಿ ಬರುತ್ತಿರುವ ಭಾರತೀಯ ಚಿತ್ರವಾಗಿದೆ. ಪ್ರಭಾಸ್ಗೆ ನಾಯಕಿಯಾಗಿ ಶ್ರುತಿ ಹಾಸನ್ ಅಭಿನಯಿಸಿದ್ದು, ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಈಶ್ವರಿ ರಾವ್, ಶ್ರೀಯಾ ರೆಡ್ಡಿ ಮುಂತಾದ ಪ್ರತಿಭಾವಂತ ಕಲಾವಿದರ ದಂಡಿದೆ.