ಪ್ರತಿಷ್ಠಿತ ಗೋವಾ ‘ಇಂಟರ್ ನ್ಯಾಶನಲ್ ಫಿಲ್ಮಂ ಫೆಸ್ಟಿವಲ್’ ನಲ್ಲಿ ‘ರೆಮೋ’ ಕಮಾಲ್ – ಇಂದು ಸಂಜೆ ಪ್ರೀಮಿಯರ್ ಆಗಲಿದೆ ‘ರೆಮೋ’ ಸಿನಿಮಾ

'Remo' Kamal at 'International Film Festival'

ಪವನ್ ಒಡೆಯರ್ ನಿರ್ದೇಶನದ ಇಶಾನ್, ಆಶಿಕಾ ರಂಗನಾಥ್ ಜೋಡಿಯ ‘ರೆಮೋ’ ಸಿನಿಮಾ ಸ್ಯಾಂಡಲ್ ವುಡ್ ಅಂಗಳದಲ್ಲಿ ಕ್ರೇಜ್ ಸೃಷ್ಟಿಸಿದೆ. ಕ್ರೇಜಿ ಟ್ರೇಲರ್ ಮೂಲಕ ಸಿನಿ ಪ್ರೇಮಿಗಳ ಕುತೂಹಲ ಹೆಚ್ಚಿಸಿರುವ ಈ ಚಿತ್ರ ನಾಳೆ ರಾಜ್ಯಾದ್ಯಂತ ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ. ಸಿನಿಮಾದ ಭರ್ಜರಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ನಾಯಕ ನಟ ಇಶಾನ್, ಆಶಿಕಾ ರಂಗನಾಥ್ ಹಾಗೂ ನಿರ್ದೇಶಕ ಪವನ್ ಒಡೆಯರ್ ಗೋವಾಗೆ ತೆರಳಿದ್ದಾರೆ. ಇದಕ್ಕೆ ಕಾರಣ ವಲ್ಡ್ ಫೇಮಸ್ ಆಗಿರುವ ‘ಇಂಟರ್ ನ್ಯಾಶನಲ್ ಫಿಲ್ಮಂ ಫೆಸ್ಟಿವಲ್ ಆಫ್ ಇಂಡಿಯಾ’'Remo' Kamal at 'International Film Festival'

ಪ್ರತಿಷ್ಠಿತ 53ನೇ ‘ಇಂಟರ್ ನ್ಯಾಶನಲ್ ಫಿಲ್ಮಂ ಫೆಸ್ಟಿವಲ್ ಆಫ್ ಇಂಡಿಯಾ’ ಗೋವಾದಲ್ಲಿ ನಡೆಯುತ್ತಿದೆ. ಬೇರೆ ಬೇರೆ ದೇಶದ ವಿವಿಧ ಕೆಟಗರಿಯ ಆಯ್ದ ಸಿನಿಮಾಗಳು ಇಲ್ಲಿ ಪ್ರದರ್ಶನಗೊಳ್ಳುತ್ತವೆ. ಪ್ರಪಂಚದ ಬೇರೆ ಬೇರೆ ಭಾಷೆಯ ಹೆಸರಾಂತ ನಿರ್ದೇಶಕರು, ತಂತ್ರಜ್ಞರು, ಬರಹಗಾರರು ಈ ಫಿಲ್ಮಂ ಫೆಸ್ಟ್ ನಲ್ಲಿ ಭಾಗಿಯಾಗಿರುತ್ತಾರೆ. ಇಂತಹ ದೊಡ್ಡ ವೇದಿಕೆಗೆ ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ರೆಮೋ’ ಸಿನಿಮಾ ಸೆಲೆಕ್ಟ್ ಆಗಿದ್ದು ಇಂದು ಸಂಜೆ ಸ್ಕ್ರೀನಿಂಗ್ ಆಗುತ್ತಿದೆ.'Remo' Kamal at 'International Film Festival'

ಇಂದು ಸಂಜೆ ನಡೆಯುತ್ತಿರುವ ಪ್ರೀಮಿಯರ್ ಶೋ ನಲ್ಲಿ ‘ರೆಮೋ’ ಸಿನಿಮಾ ಸ್ಕ್ರೀನಿಂಗ್ ಆಗುತ್ತಿದ್ದು, ಈ ಪ್ರಯುಕ್ತ ನಿರ್ದೇಶಕ ಪವನ್ ಒಡೆಯರ್, ನಾಯಕ ಇಶಾನ್, ಆಶಿಕಾ ರಂಗನಾಥ್ ಒಳಗೊಂಡ ಚಿತ್ರತಂಡ ಗೋವಾಗೆ ತೆರಳಿದೆ. ‘ರೆಮೋ’ ಸಿನಿಮಾವನ್ನು ಎಲ್ಲರೊಂದಿಗೆ ಕುಳಿತು ವೀಕ್ಷಣೆ ಮಾಡಲಿದೆ ಚಿತ್ರತಂಡ. ಇಂಟರ್ ನ್ಯಾಶನಲ್ ಫಿಲ್ಮಂ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ಭಾಗಿಯಾಗಿರುವ ವೀಡಿಯೋ ಹಾಗೂ ಫೋಟೋ ಹಂಚಿಕೊಂಡು ನಿರ್ದೇಶಕ ಪವನ್ ಒಡೆಯರ್ ಸಂತಸ ಹಂಚಿಕೊಂಡಿದ್ದಾರೆ.'Remo' Kamal at 'International Film Festival'

‘ರೆಮೋ’ ಮ್ಯೂಸಿಕಲ್ ಮತ್ತು ಔಟ್ ಅಂಡ್ ಔಟ್ ರೋಮ್ಯಾಂಟಿಕ್ ಸಬ್ಜೆಕ್ಟ್ ಸಿನಿಮಾ. ಜಯಾದಿತ್ಯ ಬ್ಯಾನರ್ ನಡಿ ಸಿ. ಆರ್. ಮನೋಹರ್ ಚಿತ್ರವನ್ನು ನಿರ್ಮಾಣ ಮಾಡಿದ್ದು, ಸಿ. ಆರ್. ಗೋಪಿ ಸಹ ನಿರ್ಮಾಣ ಚಿತ್ರಕ್ಕಿದೆ. ವೈದಿ ಕ್ಯಾಮೆರಾ ವರ್ಕ್, ಕೆ.ಎಂ. ಪ್ರಕಾಶ್ ಸಂಕಲನ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಸಿನಿ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಈ ಸಿನಿಮಾ ನಾಳೆ ಬಿಡುಗಡೆಯಾಗುತ್ತಿದೆ.

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…