ಕನ್ನಡ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ತಮ್ಮ ಅದ್ಭುತ ಪಾತ್ರಗಳಿಂದ ಪರಭಾಷಾ ಫಿಲ್ಮ್ ಮೇಕರ್ಸ್ ಗಮನ ಸೆಳೆದಿದ್ದಾರೆ. ‘ಗರುಡ ಗಮನ ವೃಷಭ ವಾಹನ’ ಸಿನಿಮಾ ನೋಡಿ ಅನುರಾಗ್ ಕಶ್ಯಪ್ ಹಾಗೂ ಸಂದೀಪ್ ರೆಡ್ಡಿ ವಂಗಾ ರೀತಿಯ ಸ್ಟಾರ್ ನಿರ್ದೇಶಕರು ಶಾಕ್ ಆಗಿದ್ದರು. ಈಗಾಗಲೇ ಮಲಯಾಳಂ ಚಿತ್ರದಲ್ಲಿ ರಾಜ್ ನಟಿಸಿ ಬಂದಿದ್ದಾರೆ.Raj-B-Shetty-reject-ram-charan-s-big-budget-film-peddi
ಅಚ್ಚರಿಯ ಸಂಗತಿ ಅಂದರೆ ರಾಮ್‌ಚರಣ್ ನಟನೆಯ ‘ಪೆದ್ದಿ’ ಚಿತ್ರದಲ್ಲಿ ನಟಿಸುವಂತೆ ಬುಲಾವ್ ಬಂದಿತ್ತಂತೆ. ಆದರೆ ನಯವಾಗಿಯೇ ಆ ಅವಕಾಶವನ್ನು ರಾಜ್ ನಿರಾಕರಿಸಿದ್ದಾರೆ. ಕೇಳಿದ್ದಷ್ಟು ಸಂಭಾವನೆ ಕೊಡಲು ಸಿದ್ಧ ಎಂದರೂ ಒಪ್ಪಲಿಲ್ಲವಂತೆ. ಬುಚ್ಚಿಬಾಬು ನಿರ್ದೇಶನದ ‘ಪೆದ್ದಿ’ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಕೂಡ ಜಬರ್ದಸ್ತ್ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಸುಕುಮಾರ್ ಶಿಷ್ಯ ಬುಚ್ಚಿಬಾಬು ಈಗಾಗಲೇ ‘ಉಪ್ಪೆನ’ ಸಿನಿಮಾ ಮಾಡಿ ಸಕ್ಸಸ್ ಕಂಡಿದ್ದಾರೆ.Raj-B-Shetty-reject-ram-charan-s-big-budget-film-peddi
ಅವರ 2ನೇ ಸಿನಿಮಾ ‘ಪೆದ್ದಿ’. ಬಹುಕೋಟಿ ವೆಚ್ಚದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ರಾಮನವಮಿ ಸಂಭ್ರಮದಲ್ಲಿ ಬಂದಿದ್ದ ‘ಪೆದ್ದಿ’ ಫಸ್ಟ್ ಶಾಟ್ ಟೀಸರ್ ಸೂಪರ್ ಹಿಟ್ ಆಗಿದೆ. ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಚಿತ್ರದಲ್ಲಿ 90ರ ದಶಕದ ಕಥೆ ಹೇಳಲಾಗುತ್ತಿದೆ.
‘ಪೆದ್ದಿ’ ಚಿತ್ರದ ಪ್ರಮುಖ ಪಾತ್ರಕ್ಕೆ ರಾಜ್ ಬಿ ಶೆಟ್ಟಿ ಅವರನ್ನು ನಿರ್ದೇಶಕರು ಸಂಪರ್ಕಿಸಿದ್ದರಂತೆ. ಬರೋಬ್ಬರಿ 100 ದಿನಗಳ ಕಾಲ್‌ಶೀಟ್ ಕೇಳಿದ್ದರಂತೆ. ಆದರೆ ಕನ್ನಡದಲ್ಲೇ ವಿಭಿನ್ನ ಸಿನಿಮಾಗಳನ್ನು ಮಾಡುತ್ತಿರುವ ರಾಜ್ ಬಿ ಶೆಟ್ಟಿಗೆ ಯಾಕೋ ಪಾತ್ರ ಇಷ್ಟವಾಗಲಿಲ್ಲ ಅನ್ನಿಸುತ್ತದೆ. ಅದಕ್ಕೆ ನಟಿಸೋಕೆ ಒಲ್ಲೆ ಎಂದಿದ್ದಾರೆ.
ರಾಜ್ ಬಿ ಶೆಟ್ಟಿ ತಮ್ಮದೇ ಲಾಫ್ಟರ್ ಬುದ್ಧ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುವ ‘ಸು ಫ್ರಂ ಸೋ’ ಎಂಬ ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಜೆಪಿ ತುಮ್ಮಿನಾಡು ಈ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.