Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.
‘ಸು ಫ್ರಮ್ ಸೋ’ ಕನ್ನಡ ಚಿತ್ರರಂಗಕ್ಕೆ ಹೊಸ ಭರವಸೆಯನ್ನು ಮೂಡಿಸಿದೆ.Raj-B-Shetty-Movie-Su-From-So-Day-3-Box-Office-Collection
ಕೇವಲ ಕಂಟೆಂಟ್ ಅನ್ನೇ ಪ್ರಧಾನವಾಗಿಸಿಕೊಂಡು ಈ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲಾಗಿತ್ತು. ಸ್ಟಾರ್ ಪಟ್ಟ ಇಲ್ಲದವರೇ ಈ ಸಿನಿಮಾದಲ್ಲಿ ನಟಿಸಿದ್ದು ಈ ಸಿನಿಮಾದ ಇನ್ನೊಂದು ಹೈಲೈಟ್. ‘ಹರಿ ಹರ ವೀರಮಲ್ಲು’ ಅಂತಹ ಸೂಪರ್ಸ್ಟಾರ್ ಸಿನಿಮಾದ ಮುಂದೆ ಕನ್ನಡದ ಸ್ಮಾಲ್ ಬಜೆಟ್ ಚಿತ್ರ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ.
ರಾಜ್ ಬಿ ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಸಿನಿಮಾಗೆ ಟಿಕೆಟ್ ಸಿಗದೆ ಜನರು ಪರದಾಡುತ್ತಿದ್ದಾರೆ.Raj-B-Shetty-Movie-Su-From-So-Day-3-Box-Office-Collection ನಿನ್ನೆ ಭಾನುವಾರವಾಗಿದ್ದರಿಂದ (ಜುಲೈ 28) ಶೋಗಳನ್ನು ಹೆಚ್ಚು ಮಾಡಿದ್ದರೂ ಜನರಿಗೆ ಟಿಕೆಟ್ ಸಿಗಲಿಲ್ಲ. ಸೋಶಿಯಲ್ ಮೀಡಿಯಾಗಳಲ್ಲಿ ಜನರು ಟಿಕೆಟ್ ಸಿಗದೇ ನಿರಾಶರಾಗಿರುವುದನ್ನು ಹಂಚಿಕೊಂಡಿದ್ದರು. ಇಂತಹದ್ದೊಂದು ಸನ್ನಿವೇಶವನ್ನು ನೋಡದೇ ಬಹಳ ವರ್ಷಗಳೇ ಆಗಿತ್ತು.
ಇದೇ ಜೋಷ್ನಲ್ಲಿಯೇ ‘ಕಾಂತಾರ’ದಂತೆಯೇ ಈ ಸಿನಿಮಾವನ್ನು ಬೇರೆ ಬೇರೆ ಭಾಷೆಗಳಿಗೆ ಡಬ್ ಮಾಡಿ ಸಿನಿಮಾವನ್ನು ರಿಲೀಸ್ ಮಾಡಲಾಗುತ್ತಿದೆ. ಈಗಾಗಲೇ ಬಾಲಿವುಡ್ನ ಜನಪ್ರಿಯ ವಿತರಕ ಅನಿಲ್ ಟಂಡಾನಿ ‘ಸು ಫ್ರಮ್ ಸೋ’ ಸಿನಿಮಾವನ್ನು ಹಿಂದಿ ಭಾಷೆಯಲ್ಲಿ ಬಿಡುಗಡೆ ಮಾಡುವುದಕ್ಕೆ ಮುಂದೆ ಬಂದಿದ್ದಾರೆ. ಹಾಗೇ ಮಲಯಾಳಂಗೂ ಡಬ್ ಮಾಡಿ ರಿಲೀಸ್ ಮಾಡಲಾಗುತ್ತಿದೆ. ಈ ಕ್ರೇಜ್ಗೆ ಕಾರಣ ಸಿನಿಮಾಗೆ ಸಿಗುತ್ತಿರುವ ರೆಸ್ಪಾನ್ಸ್. ಮೂರನೇ ದಿನ ಬಾಕ್ಸಾಫೀಸ್ನಲ್ಲಿ ಈ ಸಿನಿಮಾ ಧೂಳೆಬ್ಬಿಸಿದೆ. ಹಾಗಿದ್ದರೆ ಟ್ರೇಡ್ ಎಕ್ಸ್ಪರ್ಟ್ಗಳ ಲೆಕ್ಕಾಚಾರವೇನು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
‘ಸು ಫ್ರಮ್ ಸೋ’ 3ನೇ ದಿನದ ಕಲೆಕ್ಷನ್
ರಾಜ್ ಬಿ ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಕ್ರೇಜಿ ಕಲೆಕ್ಷನ್ ಆಗುತ್ತಿದೆ. ಕರ್ನಾಟಕದಾದ್ಯಂತ ಈ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ‘ಕಾಂತಾರ’ ಬಳಿಕ ಇಂತಹದ್ದೊಂದು ಕ್ರೇಜ್ ಕನ್ನಡ ಚಿತ್ರರಂಗ ನೋಡಿರಲಿಲ್ಲ. 3ನೇ ದಿನ ಅಂದರೆ, ನಿನ್ನೆ (ಜುಲೈ 27) ‘ಸು ಫ್ರಮ್ ಸೋ’ ಸಿನಿಮಾದ ಎಲ್ಲಾ ಶೋಗಳಯ ಹೌಸ್ಫುಲ್ ಆಗಿದ್ದವು. ಜನರು ಟಿಕೆಟ್ಗಾಗಿ ಪರದಾಡಿದ್ದರು. ಸ್ಯಾಕ್ನಿಲ್ಕ್.ಕಾಮ್ ಪ್ರಕಾರ 3ನೇ ದಿನ ಬಾಕ್ಸಾಫೀಸ್ನಲ್ಲಿ ಬರೋಬ್ಬರಿ 3.86 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.
ಎಷ್ಟು ಶೋ ಹೌಸ್ಫುಲ್? ಎಲ್ಲೆಲ್ಲಿ ಹೇಗಿದೆ ರೆಸ್ಪಾನ್ಸ್?
ಮೂರನೇ ದಿನ ಸ್ಪೆಷಲ್ ಶೋಗಳನ್ನು ಅರೇಂಜ್ ಮಾಡಲಾಗಿತ್ತು. ಸಿನಿಮಾ ಟಿಕೆಟ್ಗಳಿಗಾಗಿ ಬೇಡಿಕೆ ಇಟ್ಟಿದ್ದ ಸಿನಿಪ್ರಿಯರು ‘ಸು ಫ್ರಮ್ ಸೋ’ ಶೋಗಳನ್ನು ಹೆಚ್ಚಿಸುವಂತೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಎರಡನೇ ದಿನದಿಂದಲೇ ಶೋಗಳ ಸಂಖ್ಯೆಯನ್ನು ಏರಿಕೆ ಮಾಡಲಾಗಿತ್ತು.ಬಹು ಬೇಡಿಕೆಯ ಮೇರೆಗೆ ಕರ್ನಾಟಕದಾದ್ಯಂತ ಭಾನುವಾರ 1000ಕ್ಕಿಂತಲೂ ಅಧಿಕ ಶೋಗಳನ್ನು ಪ್ರದರ್ಶನ ಮಾಡಲಾಗಿದೆ. ಎಲ್ಲಾ ಶೋಗಳಿಗೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಬಿಕೆಟಿ ಏರಿಯಾ 760 ಶೋಗಳು
ಎಂಎಂಸಿಎಚ್ 80 ರಿಂದ 90 ಶೋಗಳು
ಚಿತ್ರದುರ್ಗ-ದಾವಣಗೆರೆ 50 ರಿಂದ 60 ಶೋಗಳು
ಹುಬ್ಬಳ್ಳಿ 50 ರಿಂದ 60 ಶೋಗಳು
ಹೈದರಾಬಾದ್ ಕರ್ನಾಟಕ 20 ಶೋಗಳು
ಮೂರು ದಿನಗಳ ಒಟ್ಟು ಕಲೆಕ್ಷನ್ ಎಷ್ಟು?
‘ಸು ಫ್ರಮ್ ಸೋ’ ಮೂರು ದಿನಗಳ ಕಲೆಕ್ಷನ್ ಸಖತ್ ಆಗಿದೆ. ಮೊದಲ ದಿನ 78 ಲಕ್ಷ ರೂಪಾಯಿ ಕಲೆಕ್ಷನ್ ಆಗಿತ್ತು. ಎರಡನೇ ದಿನ ಈ ಸಿನಿಮಾ 2.17 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಹಾಗೇ ಮೂರನೇ ದಿನ ಈ ಸಿನಿಮಾ 3.86 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಒಟ್ಟು ಮೂರು ದಿನಗಳಲ್ಲಿ ‘ಸು ಫ್ರಮ್ ಸೋ’ 6.81 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಸ್ಯಾಕ್ನಿಲ್ಕ್.ಕಾಮ್ ವರದಿ ಮಾಡಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್ಗಳ ಕುರಿತು ಪ್ರಕಟಿಸುವ ವರದಿಗಳಿಗೆ CINIPARK ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.