ತಮಿಳಿನ ಸ್ಟಾರ್ ನಟ ವಿಜಯ್. ಸದ್ಯ ರಾಜಕೀಯ ರಂಗದತ್ತ ಮುಖ ಮಾಡಿರುವ ದಳಪತಿ ಸಿನಿಮಾಗಳಲ್ಲಿ ನಟಿಸುವುದು ಅನುಮಾನ ಎನ್ನುವಂತಾಗಿದೆ Prabhas-and-Thalapathy-Vijay
. ‘ಜನನಾಯಗನ್’ ವಿಜಯ್ ನಟನೆಯ ಕೊನೆಯ ಸಿನಿಮಾ ಎಂದೇ ಪ್ರಚಾರವಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಸಂಕ್ರಾಂತಿ ಸಂಭ್ರಮದಲ್ಲಿ ಜನವರಿ 9ಕ್ಕೆ ‘ಜನನಾಯಗನ್’ ಸಿನಿಮಾ ತೆರೆಗೆ ಬರುವುದು ಪಕ್ಕಾ ಆಗಿದೆ. ಇದೀಗ ಅದೇ ದಿನ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಕೂಡ ತೆರೆಗಪ್ಪಳಿಸುತ್ತದೆ ಎನ್ನಲಾಗ್ತಿದೆ. ಸುಗ್ಗಿ ಸಂಭ್ರಮದಲ್ಲಿ ತೆಲುಗು, ತಮಿಳಿನ ದೊಡ್ಡ ದೊಡ್ಡ ಸಿನಿಮಾಗಳು ತೆರೆಗೆ ಬರುತ್ತದೆ. ಬಹಳ ತಡವಾಗುತ್ತಿರುವ ‘ದಿ ರಾಜಾಸಾಬ್’ ಚಿತ್ರವನ್ನು ಅಂದೇ ತೆರೆಗೆ ತರುವ ಲೆಕ್ಕಾಚಾರ ನಡೀತಿದೆಯಂತೆ. Prabhas-and-Thalapathy-Vijay
ಪ್ರಭಾಸ್ ನಟನೆಯ ಕಾಮಿಡಿ ಹಾರರ್ ಸಿನಿಮಾ ‘ದಿ ರಾಜಾಸಾಬ್’. ಇತ್ತೀಚೆಗೆ ಟೀಸರ್ ಬಿಡುಗಡೆ ಆಗಿ ಸದ್ದು ಮಾಡಿತ್ತು. ನಿರ್ದೇಶಕ ಮಾರುತಿ ಆಕ್ಷನ್ ಕಟ್ ಹೇಳಿದ್ದು ಸಂಜಯ್ ದತ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಪ್ರಯತ್ನ ನಡೀತಿದೆ.

ತಮಿಳಿನ ‘ಜನನಾಯನ್’ ಚಿತ್ರಕ್ಕೆ ವಿನೋದ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡುತ್ತಿದೆ. ವಿಜಯ್ ಸಿನಿಮಾಗಳು ಮೊದಲಿನಿಂದಲೂ ತಮಿಳು ಹಾಗೂ ತೆಲುಗಿನಲ್ಲಿ ಮಾತ್ರ ದೊಡ್ಡದಾಗಿ ತೆರೆಗೆ ಬರುತ್ತವೆ. ‘ಜನನಾಯಗನ್’ ವಿಚಾರದಲ್ಲಿ ಕೂಡ ಇದೇ ರೀತಿ ಆಗ್ತಿದೆ. ಕೊನೆಯ ಸಿನಿಮಾ ಎನ್ನುವ ಕಾರಣಕ್ಕೆ ವಿಜಯ್ 200 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ.

ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಪ್ರಿಯಾಮಣಿ, ಪ್ರಕಾಶ್ ರಾಜ್ ಸೇರಿ ದೊಡ್ಡ ತಾರಾಗಣ ‘ಜನ ನಾಯಗನ್’ ಚಿತ್ರದಲ್ಲಿದೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಂದಾಜು 300 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಈಗಾಗಲೇ ಚಿತ್ರದ ಓಟಿಟಿ ರೈಟ್ಸ್ ಕೂಡ ಅಮೇಜಾನ್ ಪ್ರೈಂಗೆ ಭಾರೀ ಮೊತ್ತಕ್ಕೆ ಮಾರಾಟವಾಗಿದೆ.

ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೇ ಪ್ರಭಾಸ್ ಹೆಚ್ಚು ಅಬ್ಬರಿಸುತ್ತಿದ್ದಾರೆ. ಮೊದಲಿಗೆ ‘ದಿ ರಾಜಾಸಾಬ್’ ಸಣ್ಣ ಸಿನಿಮಾ ಎಂದೇ ಭಾವಿಸಲಾಗಿತ್ತು. ಬಳಿಕ ನಿಧಾನವಾಗಿ ಸಿನಿಮಾ ದೊಡ್ಡದಾಗುತ್ತಾ ಹೋಗಿತ್ತು. ಮಾಳವಿಕಾ ಮೋಹನನ್, ನಿಧಿ ಅಗರ್‌ವಾಲ್, ರಿದ್ದಿ ಕುಮಾರ್ ಚಿತ್ರದಲ್ಲಿ ನಾಯಕಿಯರಾಗಿ ಮಿಂಚಿದ್ದಾರೆ. ಚಿತ್ರದಲ್ಲಿ ಭಿನ್ನ ವಿಭಿನ್ನ ಅವತಾರಗಳಲ್ಲಿ ಪ್ರಭಾಸ್ ಮಿಂಚಿದ್ದಾರೆ.

ಡಿಸೆಂಬರ್ 5ಕ್ಕೆ ಸಿನಿಮಾ ರಿಲೀಸ್ ಎಂದು ಚಿತ್ರತಂಡ ಘೋಷಿಸಿದೆ. ಆದರೆ ಸಂಕ್ರಾಂತಿ ವೀಕೆಂಡ್‌ನಲ್ಲಿ ಗೆಲ್ಲುವ ಲೆಕ್ಕಾಚಾರ ಜೋರಾಗಿದ್ದು ಜನವರಿ 9ಕ್ಕೆ ಬಿಡುಗಡೆ ದಿನಾಂಕ ಮುಂದೂಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗ್ತಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಮೂರ್ನಾಲ್ಕು ದಿನ ರಜೆ ಇರುತ್ತದೆ. ಎರಡೂ ಸಿನಿಮಾ ಚೆನ್ನಾಗಿದ್ದರೆ ಎರಡನ್ನು ಪ್ರೇಕ್ಷಕರು ನೋಡುತ್ತಾರೆ ಎನ್ನುವ ವಾದವೂ ಇದೆ.
