ಜೋಗಿ ಪ್ರೇಮ್ ಅಭಿನಯದ ಕನ್ನಡದ ದಾಸ್ವಾಳ ಚಿತ್ರದಲ್ಲಿ ಮಿಂಚಿದವರು ಐಶ್ವರ್ಯ ಮೆನನ್.Photo-Gallery-Iswarya-Menons
ಆ ನಂತರ ಕೋಮಲ್ ಜೊತೆ ನಮೋ ಭೂತಾತ್ಮ ಚಿತ್ರದಲ್ಲಿ ಕೂಡ ಕಾಣಿಸಿಕೊಂಡ ಐಶ್ವರ್ಯ ಮೆನನ್ ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಕೂಡ ಅಭಿನಯಿಸಿದರು. ತಮ್ಮ ಅಭಿನಯದಿಂದ ಅನೇಕರ ಹೃದಯವನ್ನು ಕೂಡ ಗೆದ್ದರು.
ಚಿತ್ರರಂಗದಲ್ಲಿ ಈಗಾಗಲೇ ಒಂದು ದಶಕವನ್ನು ಪೂರೈಸಿರುವ ಐಶ್ವರ್ಯ ಮೆನನ್ ಸೋಶಿಯಲ್ ಮೀಡಿಯಾದ ಸಕ್ರಿಯ ಸದಸ್ಯೆ ಕೂಡ ಹೌದು. ತಮ್ಮ ಅಭಿಮಾನಿಗಳಿಗಾಗಿ ದಿನ ನಿತ್ಯ ಒಂದಾದರು ಫೋಟೊ ಅಥವಾ ವಿಡಿಯೋವನ್ನು ಹಂಚಿಕೊಳ್ಳುವ ಐಶ್ವರ್ಯ ಮೆನನ್ ಸದ್ಯ ಹೊಸ ಫೋಟೊಗಳ ಮೂಲಕ ಅನೇಕರ ಕಣ್ಮನ ಸೆಳೆಯುತ್ತಿದ್ದಾರೆ.
ನೋಡಲು ಕೇರಳದ ಹುಡುಗಿಯಂತೆ ಕಾಣುವ ಐಶ್ವರ್ಯ ಮೆನನ್, ಬೆಸಿಕಲಿ ತಮಿಳುನಾಡಿನ ಚೆಲುವೆ. ಇತ್ತೀಚೆಗೆ ಬಂದ ಮಮ್ಮೂಟ್ಟಿ ಅಭಿನಯದ ಬಾಜೂಕಾ ಚಿತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದ ಐಶ್ವರ್ಯ ಮೆನನ್ ಬಿಳಿ ಬಣ್ಣದ ಕ್ರಾಪ್ ಟಾಪ್ ಮತ್ತು ಹೈ ವೇಸ್ಟೆಡ್ ಶಾರ್ಟ್ಸ್‌ನಲ್ಲಿ ಕ್ಯಾಮರಾಗೆ ಫೋಸ್ ನೀಡಿದ್ದಾರೆ.
ಬೇಸಿಗೆಯಲ್ಲಿ ಸೆಖೆ ಹಾಗೂ ದೇಹಕ್ಕೆ ಹೊಂದಿಕೊಳ್ಳುವ ಈ ಉಡುಪು ಸದ್ಯ ಅನೇಕರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಕಾಮೆಂಟ್‌ಗಳ ಮಹಾಪೂರ ಕೂಡ ಹರಿದು ಬರುತ್ತಿದೆ. ಐಶ್ವರ್ಯ ಈ ಫೋಟೊಗಳನ್ನು ಹಂಚಿಕೊಂಡ ನಾಲ್ಕು ಗಂಟೆಗಳಲ್ಲಿಯೇ 60,000 ಕ್ಕೂ ಅಧಿಕ ಲೈಕ್‌ಗಳು ಸಿಕ್ಕಿವೆ ಅಂದರೆ ಐಶ್ವರ್ಯ ಕ್ರೇಜ್ ಹೇಗಿದೆ ಎಂದು ನೀವೆ ಊಹಿಸಿ.
ಇನ್ನುಳಿದಂತೆ ಐಶ್ವರ್ಯ ಮೆನನ್ ಸಿನಿಮಾ ಮಾತ್ರವಲ್ಲದೆ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಸನ್ ಟಿವಿಯಲ್ಲಿ ಪ್ರಸಾರವಾದ ‘ತೆಂಡ್ರಲ್’ ಧಾರಾವಾಹಿಯಲ್ಲಿ ಶ್ರುತಿ ಪಾತ್ರದಲ್ಲಿ ನಟಿಸಿದ್ದರು. ಫೋಟೋಶೂಟ್‌ಗಳ ಮೂಲಕ ಆಗಾಗ ಕಣ್ಣುಕುಕ್ಕುವ ಐಶ್ವರ್ಯಾ ಮೆನನ್, ವಿವಿಧ ಉಡುಪುಗಳಲ್ಲಿ ಫೋಟೋಶೂಟ್ ಮಾಡಿಸಿಕೊಂಡು ಅದನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.