ತೆಲುಗು ನಟ ರಾಮ್‌ಚರಣ್ ಈಗ ‘ಪೆದ್ದಿ peddi-ram-charan’s-telugu-movie ಆಗಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದ್ದಾರೆ.
ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ. ಪಾತ್ರಕ್ಕಾಗಿ ಮತ್ತೊಮ್ಮೆ ದೇಹ ಹುರಿಗೊಳಿಸಿ ಚರಣ್ ಸಿದ್ಧರಾಗುತ್ತಿದೆ. ಬುಚ್ಚಿಬಾಬು ನಿರ್ದೇಶನದ ಈ ಚಿತ್ರದಲ್ಲಿ ಭಿನ್ನ ವಿಭಿನ್ನ ಅವತಾರಗಳಲ್ಲಿ ಮೆಗಾ ಪವರ್ ಸ್ಟಾರ್ ದರ್ಶನ ಕೊಡಲಿದ್ದಾರೆ.
peddi-ram-charan’s-telugu-movie ಈಗಾಗಲೇ ಚಿತ್ರದ ಟೀಸರ್ ಹಿಟ್ ಆಗಿ ಹೈಪ್ ಕ್ರಿಯೇಟ್ ಆಗಿದೆ. ಚಿತ್ರದಲ್ಲಿ ಕನ್ನಡ ನಟ ಶಿವರಾಜ್‌ಕುಮಾರ್ ಕೂಡ ಮುಖ್ಯವಾದ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಎ. ಆರ್ ರಹಮಾನ್ ಸಂಗೀತ, ರತ್ನವೇಲು ಛಾಯಾಗ್ರಹಣ ‘ಪೆದ್ದಿ’ ಚಿತ್ರಕ್ಕಿದೆ.
ಚಿತ್ರದಲ್ಲಿ 90ರ ದಶಕದ ಕಥೆ ಹೇಳುತ್ತಿದ್ದಾರೆ. ಆ ಕಾಲಘಟ್ಟವನ್ನು ತೆರೆಗೆ ತರಲು ಚಿತ್ರತಂಡ ಬಹಳ ಶ್ರಮಿಸುತ್ತಿದೆ. ಅವತ್ತಿನ ಕಾಲದಲ್ಲಿ ಹಳ್ಳಿಗಳಲ್ಲಿ ನಡೆಯುತ್ತಿದ್ದ ವಿವಿಧ ಕ್ರೀಡಾಕೂಟಗಳ ಹಿನ್ನೆಲೆಯಲ್ಲಿ ಸಿನಿಮಾ ಕಥೆ ಸಾಗಲಿದೆ. ನಾಯಕ ‘ಪೆದ್ದಿ’ ಕ್ರಿಕೆಟಿಗ, ಕಬಡ್ಡಿ ಆಟಗಾರ ಹೀಗೆ ನಾನಾ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾನೆ. ಮೇಕಿಂಗ್ ಹಂತದಲ್ಲೇ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ‘ಉಪ್ಪೆನ’ ಸಿನಿಮಾ ಮಾಡಿ ಗೆದ್ದಿದ್ದ ಬುಚ್ಚಿಬಾಬು ಬಹಳ ಗ್ಯಾಪ್ ಬಳಿಕ ‘ಪೆದ್ದಿ’ ಚಿತ್ರಕ್ಕೆ ಕೈ ಹಾಕಿದ್ದಾರೆ.
ನಿರ್ದೇಶಕ ಸುಕುಮಾರ್ ಶಿಷ್ಯ ಬುಚ್ಚಿಬಾಬು. ಹಾಗಾಗಿ ತಮ್ಮ ಗುರುವಿನ ರೀತಿಯಲ್ಲೇ ಎಮೋಷನ್ ಜೊತೆಗೆ ಒಂದೊಳ್ಳೆ ಮಾಸ್ ಸಬ್ಜೆಕ್ಟ್ ಸಿನಿಮಾ ಮಾಡುತ್ತಿದ್ದಾರೆ. ಅದ್ಯಾಕೋ ಆರ್‌ಆರ್‌ಆರ್ ಬಳಿಕ ಚರಣ್ ನಟಿಸಿದ ಯಾವುದೇ ಸಿನಿಮಾ ಗೆಲ್ಲುತ್ತಿಲ್ಲ. ‘ಪೆದ್ದಿ’ ಆಗಿ ಕಂಬ್ಯಾಕ್ ಮಾಡಲು ಅವರು ಸಿದ್ಧರಾಗಿದ್ದಾರೆ. ಪಾತ್ರಕ್ಕಾಗಿ ಜಿಮ್‌ನಲ್ಲಿ ಕಸರತ್ತು ನಡೆಸಿ ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಜಿಮ್‌ನಲ್ಲಿ ಹುರಿಗಟ್ಟಿದ್ದ ತಮ್ಮ ಲುಕ್ ಪ್ರದರ್ಶನ ಫೋಟೊ ಕ್ಲಿಕ್ಕಿಸಿ ಚರಣ್ ಹಂಚಿಕೊಂಡಿದ್ದಾರೆ.
‘ಪೆದ್ದಿ’ ಚಿತ್ರಕ್ಕಾಗಿ ಚೇಂಜ್‌ಓವರ್ ಶುರು. “ನೈಜವಾದ ಗಟ್ಟಿತನ. ನಿಜವಾದ ಸಂತೋಷ” ಎಂದು ಕ್ಯಾಪ್ಷನ್ ಕೊಟ್ಟು ಫೋಟೊ ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ದಟ್ಟವಾಗಿ ಗಡ್ಡ ಬಿಟ್ಟು, ಉದ್ದ ಕೂದಲಿಗೆ ಚಿಕ್ಕ ಜಡೆ ಕಟ್ಟಿಕೊಂಡು ರಾಮ್‌ಚರಣ್ ಮಿಂಚಿದ್ದಾರೆ. ಈ ಹಿಂದೆ ‘ಧೃವ’ ಹಾಗೂ ‘ಆರ್‌ಆರ್‌ಆರ್’ ಚಿತ್ರದ ಪಾತ್ರಗಳಿಗೆ ರಾಮ್‌ಚರಣ್ ದೇಹ ಹುರಿಗೊಳಿಸಿ ರಗಡ್ ಲುಕ್‌ನಲ್ಲಿ ನಟಿಸಿದ್ದರು. ಇದೀಗ ಮತ್ತೊಮ್ಮೆ ‘ಪೆದ್ದಿ’ ಚಿತ್ರದಲ್ಲಿ ತನು ಮನ ಅರ್ಪಿಸಿಕೊಳ್ಳುತ್ತಿದ್ದಾರೆ.
‘ಪೆದ್ದಿ’ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ದಿವ್ಯೇಂದು ಶರ್ಮಾ ಹಾಗೂ ಜಗಪತಿ ಬಾಬು ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ಚಿತ್ರದಲ್ಲಿ ಗೌರ್ನಾಯ್ಡು ಎಂಬ ಖಡಕ್ ಪಾತ್ರದಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. ಚಿತ್ರದಲ್ಲಿ ನಾಯಕನ ಗುರುವಿನಂತಹ ಪಾತ್ರ ಇದು. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.