ವಿಭಿನ್ನ ಕಥಾಹಂದರ ಹೊಂದಿರುವ ’ಪರಿಶುದ್ಧಂ’ ಚಿತ್ರದ ಧ್ವನಿಸಾಂದ್ರಿಕೆ, ಟ್ರೇಲರ್ ಮತ್ತು ಮೇಕಿಂಗ್ ಬಿಡುಗಡೆ ಕಾರ್ಯಕ್ರಮವು ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮಾ.ಹರೀಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು.
ಸರದಿಯಂತೆ ಮೊದಲು ಮಾತನಾಡಿದ ಆರೋನ್ ಕಾರ್ತಿಕ್‌ವೆಂಕಟೇಶ್ ಚಿತ್ರಕ್ಕೆ ಕಥೆ, ಸಾಹಿತ್ಯ, ಸಂಗೀತ ಜತೆಗೆ ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದು, ನಿರ್ಮಾಣದಲ್ಲಿ ಪಾಲುದಾರನಾಗಿದ್ದೇನೆ.
ಮದುವೆ ಅನ್ನುವ ಪದ್ದತಿ ಪರಿಶುದ್ದವಾದದು. ಗಂಡಹೆಂಡತಿ ಸಂಬಂಧದಲ್ಲಿ ಮೂರನೇ ವ್ಯಕ್ತಿ ಪ್ರವೇಶ ಆಗಬಾರದೆಂದು ಸಂದೇಶದಲ್ಲಿ ಹೇಳಲಾಗಿದೆ. ಇದನ್ನು ಕಮರ್ಷಿಯಲ್ ರೀತಿಯಲ್ಲಿ ತೋರಿಸಲಾಗಿದೆ. ನಟಿ ಕಲ್ಪನಾರಂತೆ ಸ್ಪರ್ಶಾರೇಖಾ ತೂಕದ ಪಾತ್ರವನ್ನು ನಿರ್ವಹಿಸಿದ್ದಾರೆ. ಅತಿಥಿ ಪಾತ್ರದಲ್ಲಿ ಎಂ.ಡಿ.ಕೌಶಿಕ್ ಕೊನೆ ದೃಶ್ಯದಲ್ಲಿ ಬರಲಿದ್ದು, ಭಾಗ-೨ರಲ್ಲಿ ಇವರಿಂದಲೇ ಸಿನಿಮಾವು ಶುರುವಾಗುತ್ತದೆ. ಬೆಂಗಳೂರು, ಮಂಗಳೂರು, ತುಮಕೂರು, ಬ್ಯಾಂಕಾಕ್ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಇಂಗ್ಲೀಷ್ ಗೀತೆಯೊಂದು ಇರಲಿದ್ದು, ಇದನ್ನು ಗ್ರ್ಯಾಮಿ ಪ್ರಶಸ್ತಿಗೆ ಕಳುಹಿಸಲಾಗುವುದು. ಎರಡೇ ಸ್ವರದಲ್ಲಿ ’ಕ’ ಅಕ್ಷರದೊಂದಿಗೆ ಹಾಡನ್ನು ಬರೆಯಲಾಗಿದ್ದು ಎಂ.ಡಿ.ಪಲ್ಲವಿ ಧ್ವನಿಯಾಗಿದ್ದಾರೆಂದು ಸಿನಿಮಾದ ಕುರಿತಂತೆ ಮಾಹಿತಿ ನೀಡಿದರು.
ನಿರ್ದೇಶರು ವೇಗವಾಗಿ ಕಥೆ ಹೇಳಿದಾಗ ಮತ್ತೋಮ್ಮೆ ಹೇಳಿ ಅಂತ ಕೋರಿಕೊಂಡೆ. ಇಂತಹ ಪಾತ್ರ ಮಾಡೋಕೆ ನನ್ನಿಂದ ಆಗುತ್ತಾ ಎಂಬ ಗೊಂದಲದಲ್ಲಿದ್ದೆ. ಆದರೂ ಧೈರ್ಯದಿಂದ ಮಾಡಿದೆ. ಇಂತಹ ಅವಕಾಶವನ್ನು ನೀಡಿದ್ದಕ್ಕೆ ಥ್ಯಾಂಕ್ಸ್. ಪ್ರತಿಯೊಂದು ಫ್ರೇಮ್ ಚೆನ್ನಾಗಿ ಬಂದಿದೆ. ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕಾದರೆ, ಬೇರೆ ಭಾಷೆಯಲ್ಲಿ ಸುತ್ತಾಡಿಕೊಂಡು ಬಂದರೆ ಮಾತ್ರ ಇಲ್ಲಿ ಸ್ವಾಗತ ಸಿಗುತ್ತದೆ. ಅದು ಈಗ ಬದಲಾವಣೆಯಾಗುತ್ತಿದೆ ಎಂದು ಸ್ವಶಾರೇಖಾ ಅಭಿಪ್ರಾಯಪಟ್ಟರು.
’ಅಮೃತಘಳಿಗೆ’ ಸಿನಿಮಾದ ಮೂಲಕ ಕಾರ್ತಿಕ್‌ವೆಂಕಟೇಶ್ ಪರಿಚಯವಾಗಿದ್ದು, ಇದರಲ್ಲಿ ನಟಿಯಾಗಿ ಕಾಣಿಸಿಕೊಂಡು ಒಂದು ಹಾಡಿನಲ್ಲಿ ಬರುತ್ತೇನಂದು ನೀತು ಹೇಳಿದರು. ರೋಹನ್‌ಕಿಡಿಯಾರ್ ಬಂಡವಾಳ ಹೂಡುವ ಜತೆಗೆ ಸ್ವರ್ಶಾರೇಖಾ ಅವರಿಗೆ ಜೋಡಿಯಾಗಿ ನಟಿಸಿದ್ದಾರೆ. ಕುಮಾರ್‌ರಾಥೋಡ್ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ.
ಮತ್ತೋಂದು ಮುಖ್ಯ ಪಾತ್ರದಲ್ಲಿ ನಟಿಸಿರುವ ದಿಶಾಪೂವಯ್ಯ ಗೈರುಹಾಜರಿದ್ದರು. ಉಳಿದಂತೆ ಭಾರ್ಗವ್, ಅರ್ಚನಾ, ವಿಕ್ಟರಿವಾಸು, ಕುರಿರಂಗ, ಮೈಸೂರುರಮಾನಂದ್, ರಾಜ್‌ಚರಣ್, ದುಬೈರಫೀಕ್, ಎಂ.ಡಿ.ಕೌಶಿಕ್ ಪಾತ್ರದ ಪರಿಚಯ ಮಾಡಿಕೊಂಡರು.