ಬಿ ಸಿ ಡಿ ಸ್ಟುಡಿಯೋಸ್ ಸಂಸ್ಥೆ ಇಂದ ನಿರ್ಮಾಣವಾಗಿರುವ ತೆರೆ ಕಾಣಲು ಸಿದ್ಧವಿರುವ “ಯದ್ಭಾವಂ ತದ್ಭವತಿ” ಕನ್ನಡ ಚಲನಚಿತ್ರಕ್ಕೆ 20/11/2022 ರಂದು ನಡೆದ ನಮ್ಮ ಕರ್ನಾಟಕದ ಹೆಮ್ಮೆಯ ಸಾಂಸ್ಕೃತಿಕ ನಗರ ಮೈಸೂರುನಲ್ಲಿ ನಡೆದ ಮೈಸೂರು ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ನಟ ನಿರ್ದೇಶಕರಾದ ಅಮಿತ್ ರಾವ್ ರವರಿಗೆ ನೀಡಿದ್ದು, ಈಗಾಗಲೇ ಒಂದಷ್ಟು ಬೇರೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 53 ಪ್ರಶಸ್ತಿಗಳನ್ನು ಪಡೆದುಕೊಂಡಿರುವ
“ಯದ್ಭಾವಂ ತದ್ಭವತಿ” ಚಿತ್ರಕ್ಕೆ ಮೈಸೂರು ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಅತ್ಯುತ್ತಮ ನಟ 54ನೇ ಪ್ರಶಸ್ತಿಯಾಗಿ ಸೇರ್ಪಡೆಗೊಂಡಿದೆ.
ಈಗಾಗಲೇ ತಮಗೆ ತಿಳಿದಿರುವ ಹಾಗೆ ಚಿತ್ರದಲ್ಲಿ ಅಮಿತ್ ರಾವ್ ಅವರೇ ನಿರ್ದೇಶನ ಹಾಗೂ ನಟನೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ಹಾಗೂ ಛಾಯಾಗ್ರಾಹಕರಾಗಿ ಸುದೀಪ್ ಫ್ರೆಡ್ರಿಕ್,
ಸಂಗೀತ ನಿರ್ದೇಶಕ ರಾಕಿ ಸೋನು,
ಸಂಕಲನ ಶಿವರಾಜ್ ಮೆಹು ,
D I ಮತ್ತು Vfx ಸುಪ್ರೀತ್ ಬಿಕೆ,
ಸಾಹಿತ್ಯ ನವೀನ್ ರೈ,
ಕಾಸ್ಯೂಮ್ ಡಿಸೈನರ್ ರಶ್ಮಿ ಅನುಪ್ ರಾವ್,
ಸಹ ನಿರ್ಮಾಪಕರಾಗಿ R ಶ್ರೀನಿವಾಸ ಶೆಟ್ಟಿ, ನಿರ್ಮಾಪಕ ಮಂಜುನಾಥ್ ದೈವಜ್ಞ
ತಂಡದಲ್ಲಿ ಇದ್ದು,
ನಮ್ಮ ಕರ್ನಾಟಕದ ಹೆಮ್ಮೆಯ ಸಾಂಸ್ಕೃತಿಕ ನಗರಿ ಹೆಸರುವಾಸಿಯಾದ ಮೈಸೂರ್ ನಲ್ಲಿ ನಡೆದ ಮೈಸೂರ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ನನ್ನ ನಟನೆಗೆ ನೀಡಿದ್ದು, ಹೊರ ರಾಜ್ಯಗಳಲ್ಲಿ ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ಛಾಯಾಗ್ರಹ, ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ನಿರ್ಮಾಪಕ, ಅತ್ಯುತ್ತಮ ಕಥೆ, ಹೀಗೆ ಹಲವಾರು ಪ್ರಶಸ್ತಿಗಳು ಸಿಕ್ಕಿದ್ದರೂ,
ನಮ್ಮ ಕನ್ನಡದ ನೆಲದಲ್ಲಿ ನಮ್ಮ ಸಿನಿಮಾಗೆ ಸಿಕ್ಕ ಮೊದಲ ಪ್ರಶಸ್ತಿ ಯಾಗಿದ್ದು, ನನ್ನ ಹೃದಯಕ್ಕೆ ಹತ್ತಿರವಾದ ಪ್ರಶಸ್ತಿ ಆಗಿದೆ ಮತ್ತು ನನಗೆ ಹೆಮ್ಮೆಯ ವಿಷಯ ಎಂದು ನಟ ನಿರ್ದೇಶಕ ಅಮಿತ್ ರವರು ತಿಳಿಸಿದ್ದಾರೆ.