ಪ್ರಶಾಂತ್ ಚಕ್ರವರ್ತಿ ಮತ್ತು ನಟಿ ಕುಲವಧು ಧನ್ಯ ಉದ್ಘಾಟಿಸಿದರು ಮೆಡಾಕ್ ಲೈಫ್!

ಧುನಿಕ ಜಗತ್ತಲ್ಲಿ ಎಲ್ಲರಿಗೂ ಆರೋಗ್ಯದ್ದೆ ಚಿಂತೆ. ಒಳ್ಳೆಯ ಆರೋಗ್ಯ ಒಳ್ಳೆಯ ಆಸ್ಪತ್ರೆ ಕೇಳೋಕೆ ಎಷ್ಟು ಚೆಂದ ಅಲ್ವಾ. ಆದರೆ ಈ ಶತಮಾನದ ಅತಿ ದೊಡ್ಡ ಸಮಸ್ಯೆ ಅಂದ್ರೆ ಒಳ್ಳೆಯ ಗುಣಮಟ್ಟದ ಆಸ್ಪತ್ರೆ ಮತ್ತು ಉತ್ತಮ ಚಿಕಿತ್ಸೆ ನೀಡುವ ವೈದ್ಯರು. ಇಂತಹ ಸವಾಲಿನ ಸಮಸ್ಯೆಗಳ ನಡುವೆ ನಮ್ಮ ಬೆಂಗಳೂರಿನಲ್ಲಿ ಮೆಡಾಕ್ ಲೈಫ್ ಸಂಸ್ಥೆ ವೈದ್ಯರ ಮತ್ತು ರೋಗಿಗಳ ಪಾಲಿನ ಸೇತುವೆಯಾಗಿ ಹುಟ್ಟಿಕೊಂಡಿದೆ.WhatsApp Image 2022 06 16 at 10.23.16 AM 3


ಅಂದಹಾಗೆ ಇದೇ ಮೊಟ್ಟಮೊದಲ ಬಾರಿಗೆ ರೋಗಿಗಳ ಅನುಕೂಲಕ್ಕೆ ತಕ್ಕಂತೆ ಅಂದರೆ ರೋಗಿಗಳ ಖಾಯಿಲೆಗೆ ಅನುಗುಣವಾಗಿ ಯೋಗ್ಯ ವೈದ್ಯರ ಜೊತೆ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ಸಹಕಾರಿಯಾಗಲಿದೆ ಜೊತೆಗೆ ರೋಗಿಯ ಖಾಯಿಲೆ ವಾಸಿಯಾಗುವತನಕ ವೈದ್ಯರ ಜೊತೆ ನಿರಂತರ ಸಂಪರ್ಕಕ್ಕೆ ಸಂಪೂರ್ಣ ಜವಾಬ್ದಾರಿ ಮೆಡಾಕ್ ಲೈಫ್ ಸಂಸ್ಥೆಯದ್ದಾಗಿರುತ್ತದೆ. ಇಲ್ಲಿವರೆಗೂ ವೈದ್ಯರ ಮತ್ತು ರೋಗಿಯ ನಡುವೆ ಭೇಟಿಗೆ ಅನೇಕ ಅಪ್ಲಿಕೇಶನಗಳು ಬಂದಿರಬಹುದು ಆದರೆ ರೋಗಿಗಳ ಸಂಪೂರ್ಣ ಜವಾಬ್ದಾರಿ ಹೊತ್ತ ಸಂಸ್ಥೆ ಇಲ್ಲಿಯವರೆಗೂ ಬಂದಿಲ್ಲ ಹಾಗಾಗಿ ಮೆಡಾಕ್ ಲೈಫ್ ಸಂಸ್ಥೆ ವಿಶೇಷವಾಗಿರುತ್ತದೆ.WhatsApp Image 2022 06 16 at 10.24.19 AM 1


ಈ ಸಂಸ್ಥೆಯ ಪ್ರಾರಂಭೋತ್ಸವ ಇದೇ ಜೂನ್ 15 ರಂದು ನೆರವೇರಿದೆ. ಸಮಾಜ ಸೇವಕರಾದ ಶ್ರೀ ಪ್ರಶಾಂತ್ ಚಕ್ರವರ್ತಿ ಮತ್ತು ಕಿರುತೆರೆ ನಟಿ ಕುಲವಧು ಧಾರಾವಾಹಿ ಖ್ಯಾತಿಯ ಧನ್ಯ ( ದೀಪಿಕಾ ) ಅವರು ಉದ್ಘಾಟಿಸಿದ್ದಾರೆ. ಮೆಡಾಕ್ ಲೈಫ್ ಸಂಸ್ಥೆಯ ಎಂ. ಡಿ. ನಾಸೀಫ್, ಸಿ. ಇ. ಓ. ಡಾ. ದರ್ಶನ್ ಎಸ್ ಅಂಗಡಿ ( UK ) ವ್ಯವಸ್ಥಾಪಕ ಮುನೀರ್, ಆಸೀಫ್ ಡೆಪ್ಯೂಟಿ ಮ್ಯಾನೇಜರ್ ಮತ್ತು ಯೋಜನಾ ವ್ಯವಸ್ಥಾಪಕ ಸುಜೀಶ್ ರವರನ್ನು ಒಳಗೊಂಡ ಅನುಭವಿ ತಂಡ ಈ ಸಂಸ್ಥೆಯೊಂದಿಗೆ ರೋಗಿಗಳ ನೋವುಗಳಿಗೆ ಸ್ಪಂದಿಸಲು ಮುಂದಾಗಿದ್ದಾರೆ. ಕೇವಲ ದುಡ್ಡಿಗಾಗೆ ಆರೋಗ್ಯದ ಜೊತೆ ಆಟವಾಡುವ ಕೆಲವು ಸಂಸ್ಥೆಗಳ ನಡುವೆ ರೋಗಿಗಳ ಅನುಕೂಲಕ್ಕೆಂದು ನಮ್ಮ ಬೆಂಗಳೂರಿನಲ್ಲಿ ಶುರುವಾಗಿರುವ ಸಂಸ್ಥೆಗೆ ಶುಭ ಹಾರೈಸೋಣ.WhatsApp Image 2022 06 16 at 10.23.17 AM 1

You Will  Love   Like  These

Chitra Suddhi
daali uttarakhand kannada movie

ಡಾಲಿ ಧನಂಜಯ “ಉತ್ತರ ಕಾಂಡ”ದ ನಾಯಕ.

ವಿಜಯ್ ಕಿರಗಂದೂರು ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು.…

News
VXplore Banking & Competitive Exams Coaching Academy

ಅದು ಕೆಂಗೇರಿಯಲ್ಲಿ ಹೊಸದಾಗಿ ಶುರುವಾದ ಸ್ಪರ್ಧಾತ್ಮಕ ಪರೀಕ್ಷೆಗಳ...

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಪ್ರತಿಷ್ಠಿತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಚಂದ್ರ ಮೂರ್ತಿ ಯವರು ಇದರ ಸಂಸ್ಥಾಪಕರು. ಉತ್ತಮ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಕಾರಣದಿಂದ ಈ VXplore Banking & Competitive Exams Coaching Academy. ತರಭೇತಿ ಕೇಂದ್ರವನ್ನು ತೆರೆದಿದ್ದಾರೆ. ಅದು ಆಕಾಕ್ಷಿ ವಿಧ್ಯಾರ್ಥಿಗಳಿಗೆ ಅವರ…

Chitra Suddhi
In the movie "December 24". Boys from Kunigal Taluk

“ಡಿಸೆಂಬರ್ 24” ಚಿತ್ರದಲ್ಲಿ ಹಾವಳಿ ಕೊಡೋಕೆ ಕುಣಿಗಲ್...

“ಡಿಸೆಂಬರ್ 24” ಚಿತ್ರದಲ್ಲಿ ಅನಿಲ್ ಗೌಡ್ರು, ಕುಮಾರ್ ಗೌಡ್ರು ಹಾಗೂ ಬೆಟ್ಟೇಗೌಡ್ರು ಖಡಕ್ ಖಳನಾಯಕರಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಇವರು ತುಂಬಾ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಾಯಕರ ಪಾತ್ರ ಎಷ್ಟು ಮುಖ್ಯನೋ ಹಾಗೆ ಖಳನಾಯಕರ ಪಾತ್ರಗಳು ಅಷ್ಟೇ ಮುಖ್ಯ. ಅದರಂತೆ ಖಳನಾಯಕರ ಆರ್ಭಟ ಜೋರಾಗೆ ಇರಲಿದೆ…

Chitra Suddhi
90 bidi manig nadi song release

ನಾಳೆಯಿಂದ ನೈಂಟಿ ನಶೆ!

ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ…

Chitra Suddhi
i am pregnant kannada movie censored ua

“ಐ ಆಮ್ ಪ್ರೆಗ್ನೆಂಟ್” ಚಿತ್ರವು ಸೆನ್ಸಾರ್ ಮಂಡಳಿಯಿಂದ...

“ಅನು ಸಿನಿಮಾಸ್” ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ಐ ಆಮ್ ಪ್ರೆಗ್ನೆಂಟ್” ಎಂಬ ಚಿತ್ರವನ್ನು ಸೆನ್ಸಾರ್ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ . ಕೆಲವೇ ದಿನಗಳಲ್ಲಿ ಚಿತ್ರಮಂದಿರಕ್ಕೆ ಲಗ್ಗೆಯಿಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ . ಇದರಲ್ಲಿ ನುರಿತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ಕೂಡ ಇದಕ್ಕೆ ಉತ್ತಮ ಬೆಂಬಲವನ್ನು…