ಮೈಸೂರ್ ಜಿಲ್ಲೆಯ ಕೃಷ್ಣರಾಜನಗರ ತಾಲೋಕಿನ ” ಕಾಮೇನಹಳ್ಳಿ ” ಎಂಬ ಕುಗ್ರಾಮದಲ್ಲಿ ತಾಯಿ ರತ್ನಮ್ಮ ತಂದೆ ಸ್ವಾಮಿಯವರಿಗೆ ಜನಿಸಿದ ಹಿರಿಯ ಪುತ್ರನೆ “ಮಾವುತ” ಚಿತ್ರದ ನಿರ್ದೇಶಕ ಈ “ರವಿಶಂಕರ್ ನಾಗ್” MAVUTA Director Ravishankar Nag
ಬಡತನದೊಂದಿಗೆ ಭಾಂದವ್ಯ ಬೆಸೆದುಕೊಂಡಿದ್ದ ಇವರಿಗೆ ಒಬ್ಬ ತಮ್ಮ, ಇಬ್ಬರು ತಂಗಿಯರು ಇದ್ದಾರೆ, ದೊಡ್ಡಪ್ಪ ಕಾಳಿದಾಸರವರು ಹಾರ್ಮೋನಿಯಂ ಮಾಸ್ಟರ್ ಆಗಿದ್ದರಿಂದ ಶಂಕರ್ ಗೆ ಬಾಲ್ಯದಿಂದಲೇ ಕಲೆ ಗೀಳು ಅತ್ತಿಕೊಂಡಿತು, ದೊಡ್ಡಪ್ಪನ ನಾಟಕ ನಿರ್ದೇಶನದಲ್ಲಿ ನಾಟಕವನ್ನು ಮಾಡಿದ್ದರು, ಮುಂದೆ ದೊಡ್ಡಪ್ಪನ ಹಾಗೆ ನಾಟಕದ ಮಾಸ್ಟರ್ ಆಗಬೇಕೆಂದು ಕೊಂಡಿದ್ದರು, ಒಂದು “ಸ್ವಾರ್ಥಿಗಳ ಲೋಕದಲ್ಲಿ” ಎಂಬ ಸಾಮಾಜಿಕ ನಾಟಕವನ್ನು ನಿರ್ದೇಶಿಸಿ ಅಭಿನಯಿಸಿದ್ದರು, ಕಲೆಯ ಮೇಲಿನ ಆಸಕ್ತಿಯಿಂದ ಕಥೆ, ಕವನ, ಹಾಡುಗಳನ್ನು ಬರೆಯುವುದನ್ನು ಕಲಿತರು. ಇವರು ಶಂಕರನಾಗ್ ರವರ ಅಪ್ಪಟ ಅಭಿಮಾನಿಯಾಗಿದ್ದು ಅವರ ಚಿತ್ರಗಳನ್ನ ನೋಡುತ್ತಲೇ ಚಿತ್ರರಂಗದಲ್ಲಿ ಆಸಕ್ತಿ ಬೆಳೆಯುತ್ತ ಹೋಗುತ್ತದೆ, ನಂತರ ನಾಟಕ ನಿರ್ದೇಶನದಿಂದ ಸಿನೆಮಾ ನಿರ್ದೇಶನದತ್ತ ಆಸಕ್ತಿ ಬೆಳೆದು ಕಷ್ಟ ಪಟ್ಟು ಬಿ ಎ ವಿದ್ಯಾಭ್ಯಾಸವನ್ನು ಮುಗಿಸಿ ಅವರು ಬರೆದ ಕಥೆ ಕವನ ಹಾಡುಗಳ ಹಿಡಿದುಕೊಂಡು ಗಾಂಧಿನಗರದ ಕಡೆ ಹೆಜ್ಜೆ ಹಾಕಿದರು.
ದೂರದ ಬೆಟ್ಟ ನುಣ್ಣಗೆ ಎಂಬಂತೆ ಅವರು ಗಾಂಧಿನಗರಕ್ಕೆ ಬಂದಾಗಲೇ ಸಿನಿಮಾ ಸೇರುವುದು ಎಷ್ಟು ಕಷ್ಟ ಎಂದು ತಿಳಿದಿದ್ದು. ಯಾರೊಬ್ಬರ ಪರಿಚಯವು ಇಲ್ಲದೆ, ನಂಬಿಕೆ ಇಲ್ಲದವರ ನಂಬಿ ತಂದಿದ್ದ ಪುಡಿಗಸು ಖಾಲಿಯಾದಾಗ ಊರಿಗೆ ಹಿಂತಿರುಗಿ ಹೋಗಬೇಕು ಎನ್ನುವಾಗ ಹೋಗಲು ಮನಸು ಬಾರದೆ ಪಟ್ಟಂದೂರು ಅಗ್ರಹಾರದ ಸ್ನೇಹಿತರ ರೂಮ್ನಲ್ಲಿ ಇದ್ದುಕೊಂಡು ITPL ಇಂಡಸ್ಟ್ರಿಯಲ್ ಏರಿಯದ ಫ್ಯಾಕ್ಟರಿ ಗಳಲ್ಲಿ ಕೆಲಸಕ್ಕೆ ಸೇರಿ ರಜಾ ದಿನಗಳಲ್ಲಿ ಗಾಂಧಿನಗರದಲ್ಲಿ ಅವಕಾಶಕ್ಕಾಗಿ ಅಲೆದು ಅಲೆದು ಮೂರ್ನಾಲ್ಕು ವರ್ಷಗಳು ಕಳೆದೆ ಹೋಗುತ್ತವೆ.
ಒಮ್ಮೆ ಗಾಂಧಿನಗರದಲ್ಲಿ ಸೀರಿಯಲ್ ಮ್ಯಾನೇಜರ್ ಒಬ್ಬರ ಪರಿಚಯವಾಗಿ ಅವರ ಬಳಿ ನನ್ನ ಬಗ್ಗೆ ಹೇಳಿಕೊಂಡಾಗ ಅವರು “ಡಿಟೇಕ್ಟಿವ್ ಧನುಷ್” ಎಂಬ ಸೀರಿಯಲ್ ನಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಅವಕಾಶ ಕೊಟ್ಟರು, ಹೀಗೆ ಮುಂದುವರಿಯುತ್ತ ಗೆಜ್ಜೆನಾದ ವಿಜಯ್ ಕುಮಾರ್ ನಿರ್ದೇಶನದ ” ಮೇಘ ಮಂದಾರ ” ಎಂಬ ಸೀರಿಯಲ್ ಗೆ ಜೂನಿಯರ್ ಆರ್ಟಿಸ್ಟ್ ಆಗಿ ಹೋಗಿರಲು ಆ ದಿನ ಅಲ್ಲಿನ ಒಬ್ಬ ಅಸಿಸ್ಟೆಂಟ್ ಡೈರೆಕ್ಟರ್ ಕೆಲಸ ಬಿಟ್ಟು ಹೋಗಿರಲು ಆತನ ಸ್ಥಾನಕ್ಕೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸಕ್ಕೆ ಸೇರಿಕೊಂಡರು.
ಅಲ್ಲಿಂದ ಸಿಂಧೂರ, ರಥಸಪ್ತಮಿ, ಅಕ್ಕ ಎಂಬ ಸೀರಿಯಲ್ ನಲ್ಲಿ ಕೆಲಸ ನಿರ್ವಹಿಸಿ ನಂತರ ಗೊರವಾಲೆ ಮಹೇಶ್ ಎಂಬ ನಿರ್ದೇಶಕರ ಸಹಕಾರದೊಂದಿಗೆ ಸಾಯಿ ಲಕ್ಷ್ಮಣ್ ನಿರ್ದೇಶನದ”ಲೈಫ್ ಸ್ಟೈಲ್ ” ಎಂಬ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ, ಅದರಲ್ಲಿ ಒಂದು ಹಾಡನ್ನು ಕೂಡ ಬರೆದಿದ್ದರು, ಆದರೆ ಆ ಚಿತ್ರ ಅರ್ಧಕ್ಕೆ ನಿಂತು ಹೋಗುತ್ತದೆ, ನಂತರ ” ಪ್ರೀತಿಯ ಲೋಕ ” ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ, ಅದರ ಸಂಭಾಷಣೆ, ಸಾಹಿತ್ಯವನ್ನು ಬರೆದಿದ್ದಾರೆ.
ನಂತರ “ಲವ್ ಇಸ್ ಪಾಯಿಸನ್”, ನೃತ್ಯಂ, ಕುಚುಕು, ಸಿಂಹ ಹಾಕಿದ ಹೆಜ್ಜೆ, ರೈತರಾಜ್ಯ, ಗೀತಾಂಜಲಿ, ಮಹಾರಾಜ ಕಾಲೇಜು, ಕಾಲಬ್ರಹ್ಮ, ಕಡೆಮನೆ, ಅಂತರ್ಯಾಮಿ, ಬರೀ 10 ಪರ್ಸೆಂಟ್ ಬಡ್ಡಿ, ಹೀಗೆ ಸುಮಾರು 25-30 ಚಿತ್ರಗಳಲ್ಲಿ ಸಹ ನಿರ್ದೇಶಕನಾಗಿ, ಸಂಭಾಷಣೆಗಾರನಾಗಿ, ಸಾಹಿತ್ಯಗಾರನಾಗಿ ಕೆಲಸ ನಿರ್ವಹಿಸಿದ್ದಾರೆ.