ಇಲ್ಲಿ ಉತ್ತಮ ಚಿತ್ರಗಳನ್ನು ಮಾಡುವ ಅನಿವಾರ್ಯತೆ ಇಲ್ಲಾ. ಶಿಪಾರಸ್ಸಿಗೆ ಬೇಕಾದ ಜನರ ಸಂಪರ್ಕ ಬೆಳೆಸಿಕೊಂಡರೆ ಸಾಕು ಎನ್ನುವುದು ಈಗೀಗ ಅರ್ಥವಾಗುತ್ತಿದೆ, ಅದಕ್ಕೆ ಕಾರಣಗಳು ಇವೆ. ನಾನು ಕಲಾತ್ಮಕ ಚಿತ್ರಗಳ ನಿರ್ದೇಶನಕ್ಕೆ ಮಾತ್ರ ಸೀಮಿತನಾದ ನಿರ್ದೇಶಕನಲ್ಲ. ನಾನು ಕಮರ್ಶಿಯಲ್ ಚಿತ್ರಗಳನ್ನು ಸಹ ನಿರ್ದೇಶಿಸುತಿದ್ದೇನೆ. ಕಲಾತ್ಮಕ ಚಿತ್ರದ ನಿರ್ದೇಶನದಲ್ಲಿ ನಮಗೇನು ಲಾಭವಿಲ್ಲಾ, ಅಂತಹ ಚಿತ್ರಗಳಿಗೆ ಬಂಡವಾಳ ಹಾಕುವವರು ಯಾವುದೇ ಲಾಭದ ನಿರೀಕ್ಷೆ ಇರುವುದಿಲ್ಲ. ಅವರ ಉದ್ದೇಶ ಒಂದೊಳ್ಳೆ ಸಿನಿಮಾ ಮಾಡುವುದು, ಸಮಾಜಕ್ಕೆ ತಮ್ಮದೆನಾದರು ಕಾಣಿಕೆ ನೀಡುವುದು ಅಷ್ಟೇ ಆಗಿರುತ್ತದೆ.
ಅಂತಹ ಉದ್ದೇಶದಿಂದಲೇ ರಾಜು ಕಲ್ಕುಣಿಯವರು ಕುಗ್ರಾಮ ಚಿತ್ರವನ್ನು ನಿರ್ಮಾಣ ಮಾಡಿದ್ದು. ಅದೇ ಮನಸ್ಥಿತಿಯಲ್ಲೇ ನಾನು ಹಾಫ಼್ ಚಿತ್ರಕ್ಕೂ ಮುನ್ನ ಈ ಚಿತ್ರವನ್ನು ಸೆನ್ಸಾರ್ ಮಾಡಿಸಿದ್ದು, ಕರೋನಾ ಪ್ಯಾಂಡಮಿಕ್ ನಲ್ಲಿ ದೇಶ ದೇಶಗಳೇ ಎದುರಿಸಿದ ಸಂಕಷ್ಠಗಳು ಇಂದುಗೂ ನಮ್ಮ ಕಣ್ಣ ಮುಂದೆ ಇದೆ. ಸರ್ಕಾರ ಪ್ರಸ್ತುತ ವಿಕೋಪಕ್ಕೆ ಏರುತ್ತಿದ್ದ ಅಪಾಯಕಾರಿ ಪರಿಸ್ಥಿತಿಯನ್ನು ಸುದಾರಿಸಲು ಅನುಸರಿಸಿದ ನೀತಿ ನಿಯಮಗಳು, ಯೋಜನೆಗಳು ಸಾಕಷ್ಠಿವೆ. ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿಯೇ ಜಾರಿಗೊಂಡ ಯೋಜನೆಗಳ ವೆಚ್ಚ ಅದೆಷ್ಟೋ ಕೋಟಿಗಳು ದಾಟಿವೆ. ಅದರ ಬಗ್ಗೆ ವಾರ್ತಾ ಮತ್ತು ಪ್ರಚಾರ ಇಲಾಖೆಗೆ ಮಾಹಿತಿ ಇಲ್ಲವೆಂದೇನಿಲ್ಲ, ಅದು ಅವರದೇ ಜವಾಬ್ದಾರಿಯಲ್ಲಿಯು ನಡೆದಿದೆ. ಇಂತಹ ವಾರ್ತಾ ಮತ್ತು ಪ್ರಚಾರ ಇಲಾಖೆಯ ಅಡಿಯಲ್ಲೇ ನಡೆಯುವ “ಬೆಂಗಳೂರು ಅಂತರ ರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಚಿತ್ರಗಳನ್ನು ಆಯ್ಕೇಮಾಡುವಾಗ ಕನಿಷ್ಟ ಮಾನದಂಡಗಳು ಇಲ್ಲದ ಕಮರ್ಶಿಯಲ್ ಚಿತ್ರಗಳಿಗೆ ಮಣೆ ಆಕುತ್ತಾರೆ.
ನೈತಿಕತೆಯ ಬಗ್ಗೆ ಒಂದಿಷ್ಟು ಜಾಗೃತಿ ಇಲ್ಲದೆ ಮೈಮರೆತಿರುವ ಇಲಾಖೆಗೆ ಏನು ಹೇಳುವುದು? ಈಗ ನೇರವಾಗಿ ನಾನು ನಮ್ಮ ಚಿತ್ರದ ಬಗ್ಗೆ ಮಾತನಾಡುತ್ತೇನೆ. ಕರೋನಾ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬರುತ್ತಿರುವ ಸುಳ್ಳು ವದಂತಿಗಳು ಪರಿಸ್ಥಿಯನ್ನು ಮತ್ತಷ್ಟು ಕೆಡಿಸುವ ಮೂಲಕ ಅದೆಷ್ಟೋ ಜನರ ಜೀವ ತೆಗೆದುಕೊಳ್ಳುವಲ್ಲಿ ಪಾತ್ರವಹಿಸಿವೆ. ಇಂತಹ ಅಂತರ್ ಜಾಲದ ಮಾದ್ಯಮಗಳಲ್ಲಿ ಬರುವ ಸುಳ್ಳು ಸುದ್ದಿಗಳನ್ನು ನಂಬಿ ಆಸ್ಪತ್ರೆಗೂ ದಾಖಲಾಗದೆ ಕದ್ದು ಅವಿತುಕೊಂಡಿರುವ ನೂರಾರು ಕರೋನ ರೋಗಿಗಳು ಉದಾಹರಣೆಯಾಗಿದ್ದಾರೆ ಮತ್ತು ಸತ್ತಿದ್ದಾರೆ. ತಮ್ಮ ಕುಟುಂಬಗಳನ್ನು ಅನಾತವನ್ನಾಗಿಸಿದ್ದಾರೆ. ಇಂತಹದ್ದೆ ವಿಷಯವನ್ನು ಒಳಗೊಂಡ ಚಿತ್ರ “ಕುಗ್ರಾಮ”.
ಹಳ್ಳಿಯ ಕೆಲವು ಪುಂಡರು ಅಲ್ಲಿನ ಅವಿದ್ಯಾವಂತ ರೈತನಿಗೆ ವೈದ್ಯಕೀಯ ವಲಯದಲ್ಲಿ ಅನಾಚಾರ ನಡೆಯುತ್ತಿದೆ ನೀನು ಆಸ್ಪತ್ರೆಗೆ ದಾಖಲಾದರೆ ಹಿಂತಿರುಗಿ ಬರುವುದಿಲ್ಲ ಎಂದು ಹೆದರಿಸಿ ಬಿಡುತ್ತಾರೆ. ಕರೋನ ರೋಗಕ್ಕೆ ತುತ್ತಾದ ರೈತನನ್ನು ರಕ್ಷಿಸಲು ಆಶಾ ಕಾರ್ಯಕರ್ತೆ ಇನ್ನಿಲದ ಪ್ರಯತ್ನ ಮಾಡುತ್ತಾರೆ, ಕೊನೆಗೂ ಆ ರೈತ ಆಸ್ಪತ್ರೆಗೆ ದಾಖಲಾಗದೆ ತಲೆ ಮರೆಸಿಕೊಳ್ಳುತ್ತಾನೆ. ಸರ್ಕಾರ, ಪೋಲೀಸರು, ಆಶಾ ಕಾರ್ಯಕರ್ತೆಯರ ಪ್ರಮಾಣಿಕವಾದ ಪ್ರಯತ್ನಗಳು ವಿಫಲವಾಗುವಲ್ಲಿ ಸಾಮಾಜಿಕ ಜಾಲತಾಣಗಳು ಬಿತ್ತಿದ ಸುಳ್ಳು ಸುದ್ದಿಗಳು ಕಾರಣವಾಗಿದೆ. ಬಡವರ, ಅವಿದ್ಯಾವಂತರ ಜೀವಗಳು ನಾಶವಾಗಿವೆ. ಇಂತಹ ವಿಷಯ ವಸ್ತುವನ್ನುಇಟ್ಟುಕೊಂಡು ಮಾಡಿರುವ ಕುಗ್ರಾಮ ಚಿತ್ರವನ್ನು ನೋಡಿದ ಸೆನ್ಸಾರ್ ಮಂಡಳಿ ಮುಕ್ತವಾಗಿ ತಮ್ಮ ಅಭಿಪ್ರಾಯವನ್ನು ನನ್ನೊಂದಿಗೆ ಹಂಚಿಕೊಂಡಿದೆ.
ಇಂತಹ ಚಿತ್ರಗಳು ಸಮಾಜಕ್ಕೆ ಅವಶ್ಯವಿದೆ, ಒಂದು ಜವಾಬ್ದಾರಿಯುತವಾದಂತ ಸಿನಿಮಾ ನಿರ್ದೇಶಕರಾಗಿರುವ ಕಾರಣ ನಿಮ್ಮ ಬಗ್ಗೆ ನನಗೆ ಮೆಚ್ಚುಗೆ ಇದೆ ಎಂದು ಮನಪೂರಕವಾಗಿ ಹೇಳಿದರು. ಆದರೆ ಆ ಕುಗ್ರಾಮ ಸಿನಿಮಾ ಚಿತ್ರೋತ್ಸವದಲ್ಲಿ ಮೂಲೆ ಗುಂಪಾಗಿ ಹೋಗುತ್ತದೆ ಅದಕ್ಕೆ ಕಾರಣ ಅಕಾಡೆಮಿ ಅವರೇ ಹೇಳಬೇಕು. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ನೊಡುಗರಿಗೆ ಒಂದು ಹಳ್ಳಿಯ ಸುಂದರ ಪರಿಸರದ ಅನುಭವ ಕಟ್ಟಿಕೊಡುವ ಪಾತ್ರಗಳ ಮೂಲಕ ಸಮಾಜದ ವಾಸ್ತವಿಕತೆಯನ್ನು ಸೂಕ್ಮವಾಗಿ ಹೇಳವ ಉದ್ದೇಷ ಪೂರ್ವಕವಾಗಿಯೇ ಮದ್ಯಏಷ್ಯಾ ಸಂಗೀತವನ್ನು ಅಳವಡಿಸಿ, ಕರೋನಾ ರೋಗದ ಜಾಡನ್ನು ಹೇಳವ ಚಿತ್ರಗಳನ್ನೇ ಇವರು ಗುರುತಿಸದೆ ಕಮರ್ಶಿಯಲ್ ಸಿನಿಮಾಗಳಿಗೆ ಮಣೆ ಆಕುತ್ತಾರೆ. ಸಿನಿಮಾಗಳಲ್ಲಿ ಇರುವ ಸೂಕ್ಷ್ಮ ವಿಷಯಕಳನ್ನು ಗ್ರಹಿಸಿ ಅದನ್ನು ಅಳೆದು ತೂಗಬೇಕಾದರೂ, ಆಯ್ಕೆ ಸಮಿತಿಯಲ್ಲಿ ಅಂತಹ ಜನರು ಇರಬೇಕು ಅಲ್ಲವೇ!?
ಅಲ್ಲಿಗೆ ಬರುವವರಲ್ಲಿ ಬಹುತೇಕರು ಅರ್ಹತೆಗಿಂತಲು ಶಿಪಾರಸ್ಸಿನ ಮೇರೆಗೆ ಬರುವವರೆ ಆಗಿರುತ್ತಾರೆ. ಇನ್ನು ಚಿತ್ರಗಳ ಗುಣಮಟ್ಟದ ಆಯ್ಕೇ ಹೇಗೆಸಾದ್ಯ. ಅದಕ್ಕೆ ಒಂದೊಳ್ಳೆ ಉದಾಹರಣೆ ಎಂದರೆ “ರಾಷ್ಟ್ರ ಪ್ರಶಸ್ತಿಯಲ್ಲಿ ಡೊಳ್ಳು ಸಿನಿಮಾಗೆ ದೊರೆತ “ಸ್ಥಿರ ಶಬ್ದ ಗ್ರಹಣ ಪ್ರಶಸ್ತಿ.” ಇತ್ತೀಚೆಗೆ ಅದು ದೊಡ್ಡ ಸುದ್ದಿಯೇ ಆಗಿತ್ತು. ಅದರ ಬಗ್ಗೆ ನಾನೇನು ಹೆಚ್ಚಾಗಿ ಹೇಳಬೇಕಾಗಿಲ್ಲಾ, ಅದರ ಬಗ್ಗೆ ಆ ಸಿನಿಮಾ ನಿರ್ದೇಶಕರೆ ಮಾತನಾಡಿದ್ದಾರೆ ಮತ್ತು ಆ ಪ್ರಶಸ್ಥಿಯನ್ನು ಮತ್ತೆ ಹಿಂದಕ್ಕೆ ಪಡೆದುಕೊಂಡದ್ದು ಎಲ್ಲರಿಗೂ ಗೊತ್ತಿದೆ. ಪ್ರಶಸ್ತಿ ನೀಡುವವರಿಗೆ ಯಾವ ಪ್ರಶಸ್ಥಿ ನೀಡಬೇಕು ಎನ್ನುವ ತಿಳುವಳಿಕೆಯೂ ಇಲ್ಲದ ಪ್ರಸಂಗ ಅದಾಗಿದೆ ಅಂದ ಮೇಲೆ ಇನ್ನೆಂತಹ ಮೇದಾವಿಗಳು ಆ ಜಾಗದಲ್ಲಿ ಕುಂತಿದ್ದಾರೆ ಎಂದು ನೀವೇ ಅಂದಾಜು ಮಾಡಿಕೊಳ್ಳಿ.
ಮುಂದೆ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗುವ ಚಿತ್ರಗಳೂ ಇಂತೆಯೇ ಇರುತ್ತವೆ. ಹಿಂದೊಮ್ಮೆ ಇತ್ತು ಪ್ರಶಸ್ತಿಗಳನ್ನು ಪಡೆದುಕೊಳ್ಳಬೇಕಾದರೆ ಉತ್ತಮ ಚಿತ್ರಗಳನ್ನು ಮಾಡಬೇಕು ಎಂಬುದಾಗಿ. ಈಗ ಕಾಲ ಬದಲಾಗಿದೆ ಉತ್ತಮ ಚಿತ್ರಗಳನ್ನು ಮಾಡುವ ಅಗತ್ಯತೆ ಇಲ್ಲಾ. “ಸಿಪಾರಸ್ಸು ಮತ್ತು ಲಂಚ” ಈ ಎರಡರಲ್ಲಿ ನಿಪುಣರಾಗಿದ್ದರೆ ಪ್ರಶಸ್ತಿಗೆ ಬಾಜೀನರಾಗಬಹುದು. ಸರ್ಕಾರದಿಂದ ಸಿನಿಮಾಗಳಿಗೆ ಸಿಗುವ ಅನುದಾನವು ಇದೇ ಚೌಕಟ್ಟಿನಲ್ಲಿ ಒಳಗೊಂಡಿದೆ. ಅಲ್ಲಿ ಲಂಚ ಮೊದಲನೆ ಸ್ಥಾನವನ್ನು ವಹಿಸುತ್ತಿದೆ.
ಇವುಗಳ ಬಗ್ಗೆ ನೀವು ಯಾರನ್ನು ಪ್ರಶ್ನಿಸುವುದು? ವಾರ್ತ ಪ್ರಚಾರ ಇಲಾಖೆಯನ್ನು ಕೇಳಿದರೆ ಅವರು ನಾವು ಅದಕೊಂದು ಅಕಾಡೆಮಿ ರಚಿಸಿದ್ದೇವೆ ನೀವು ಅಲ್ಲಿ ಕೇಳಿ ಎನ್ನುತ್ತಾರೆ. ಅಕಾಡೆಮಿ ಅಧ್ಯಕ್ಷರನ್ನು ಕೇಳಿದರೆ ನಾವು ಎಲ್ಲಾ ಸಿನಿಮಾಗಳನ್ನು ಕುಳಿತು ನೊಡುಲು ಸಾದ್ಯವಿಲ್ಲ ಅದಕೊಂದು ಆಯ್ಕೇ ಸಮಿತಿಯನ್ನು ರಚಿಸದ್ದೇವೆ ಇದೆಲ್ಲಾ ಅವರ ಆಯ್ಕೇ, ಎಂದು ಸದಸ್ಯರ ಕಡೆಗೆ ಕೈ ತೋರಿಸುತ್ತಾರೆ. ಇನ್ನು ಸದಸ್ಯರ ಬಗ್ಗೆ ಹೇಳಬೇಕೆ? ಅಲ್ಲಿ ಸಿಪಾರಸ್ಸಿನ ಮೇರೆಗೆ ಒಂಬತ್ತು, ಅರ್ಹತೆಗೆ ಒಬ್ಬರು. ಅದರಲ್ಲು ಪ್ರಾಮಾಣಿಕರನ್ನು ಮಾತನಾಡಿಸಿದರೆ ಅವರು ಹೇಳುವುದು ಹೀಗೆ ನಮ್ಮ ಕೈಯಲ್ಲಿ ಏನೂ ಇಲ್ಲಾ ಇದೆಲ್ಲವು ಮೊದಲೇ ನಿಶ್ಚಿತವಾಗಿರುತ್ತದೆ ನಾವು ಕೇವಲ ನೆಪಮಾತ್ರಕ್ಕೆ ಎನ್ನುತ್ತಾರೆ.
ಇಂತಹ ಕೊಳಕು ವ್ಯವಸ್ಥೆಯಲ್ಲಿ ಸಾಗಿರುವ ಕಲಾತ್ಮಕ ಚಿತ್ರಹಳ ಪಯಣ ನಿಜಕ್ಕೂ ಬೇಡವಾಗಿದೆ. ಉತ್ತಮ ಚಿತ್ರಗಳಿಗೆ ಪ್ರೇಕ್ಷಕರನ್ನು ತಲುಪಲು ಬೇಕಾದ ಹಣದ ಶಕ್ತಿಯೂ ಇಲ್ಲಾ, ಇತ್ತ ಪ್ರಾಮಾಣಿಕತೆಯ ಪುರಸ್ಕಾರಗಳು ಇಲ್ಲಾ. ಇಂತಿದೆ ಕಲಾತ್ಮಕ ಚಿತ್ರಗಳ ಸ್ಥಿತಿ ಇದರ ಬಗ್ಗೆ ರಾಜ್ ಬಿ ಶಟ್ಟಿಯವರನ್ನು ಒಳಗೊಂಡಂತೆ ಇನ್ನು ಅನೇಕ ನಿರ್ದೇಶಕರು ತಮ್ಮ ಅಸಮದಾನಗಳನ್ನು ಹೇಳಿಕೊಂಡಿದ್ದಾರೆ ನಾನೇನು ಮೊದಲಲ್ಲಾ.
ಇದೇ ರೀತಿಯ ಕಮರ್ಶಿಯಲ್ ಚಿತ್ರಗಳ ಪ್ರದರ್ಶನ ಮೊನ್ನೆ ನೆಡೆದ ಮೈಸೂರು ದಸರಾ ಪ್ರದರ್ಶನದಲ್ಲೂ ಮುಂದುವರೆದಿದೆ, ಇದೆಲ್ಲವನ್ನು ನೋಡುತಿದ್ದರೆ ಇಲಾಖೆ ಕಮರ್ಶಿಯಲ್ ಸಿನಿಮಾಗಳ ಪ್ರಚಾರದ ಏಜೆಂಟ್ ಆಗಿ ಕೆಲಸ ಮಾಡುತ್ತಿದೆ ಎಂದು ಕಾಣುತ್ತದೆ. ಮೈಸೂರು ದಸರಾಗೆ ಬಂದ ಸಿನಿಮಾಗಳ ಪಟ್ಟಿಯೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ. ಇದು ಹೀಗೆ ಮುಂದುವರೆದರೆ ಮುಂದೊಂದು ದಿನ ಒಂದು ಉತ್ತಮ ಚಿತ್ರಕ್ಕೆ ಪ್ರಶಸ್ತಿ ದೊರೆತರೆ, ಆ ಚಿತ್ರದ ನಿರ್ದೇಶಕರನ್ನು ಬೇಟಿಯಾದಾಗ ಎಷ್ಟು ಕರ್ಚು ಬಂತು ಈ ಬಾರಿ ಪ್ರಶಸ್ತಿ ಕೊಂಡುಕೊಳ್ಳಲು ಎನ್ನುವ ಪ್ರಶ್ನೆಯನ್ನು ಎದುರಿಸಬೇಕಾಗುತ್ತದೆ.
ಹಣ ಮತ್ತು ಸಿಪಾರಸ್ಸಿನಲ್ಲಿ ಚಿತ್ರ ತಂಡಗಳು ಪ್ರಶಸ್ತಿ ಕೊಂಡುಕೊಳ್ಳುವುದು ಹಣಕ್ಕೆ ಅಕಾಡೆಮಿಯವರು ಪ್ರಶಸ್ತಿಗಳನ್ನು ಮಾರುವುದು ನಿಲ್ಲಿಸದ ಹೊರತು ಈ ಸಮಸ್ಯೆ ಸುದಾರಿಸಲು ಸಾದ್ಯವಿಲ್ಲ ಎಂದು ನಿರ್ದೇಶಕ ಲೋಕೇದ್ರ ಸೂರ್ಯ ತಮ್ಮ ಅಸಮದಾನವನ್ನು ತೋಡಿಕೊಂಡಿದ್ದಾರೆ. ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತೆ ಈ ವರ್ಷದಿಂದ ಬೆಂಗಳೂರು ಚಿತ್ರೋತ್ಸವಕ್ಕೆ ಆಯ್ಕೇಯಾದ ಸಿನಿಮಾಗಳಿಗೆ ಸರ್ಕಾರದ ಅನುದಾನ ಅಂದ್ರೆ ಸಬ್ಸೀಡೀ, ಕಡ್ಡಾಯಾ ಆಗಿದೆ ಜೊತೆಗೆ ಎಂಟು ಲಕ್ಷ ರುಪಾಯಿಗಳು ಹೆಚ್ಚಿಗೆ ನಿಡುವುದಾಗಿಯು ಮಾತಾಗಿದೆ. ಇನ್ನು ಮುಂದೆ ಅಲ್ಲಿಗೆ ಬರುವ ಚಿತ್ರಗಳ ಆಯ್ಕೇಗೆ “ಗುಣಮಟ್ಟವಲ್ಲ, ಹಣದ ಮಟ್ಟ” ಹೆಚ್ಚು ಪಾತ್ರ ವಹಿಸುತ್ತದೆ. ಈಗ ಹೊಸದಾಗಿ ಕುಳಿತ ಅದ್ಯಕ್ಷರು ಇದರಲ್ಲಿ ಬೆರೆತು ಹೋಗುತ್ತಾರೋ, ಅಥವಾ ಇದಕ್ಕೆ ವಿರುದ್ಧವಾಗಿ ಪ್ರಾಮಾಣಿಕರಾಗುತ್ತಾರೋ, ಅದನ್ನು 2023ರ ಚಿತ್ರೋತ್ಸವ ಹೇಳಬೇಕಿದೆ.