ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್(ಕೆಕೆ, KK) ಕೋಲ್ಕತ್ತಾದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ ಬಳಿಕ ಕುಸಿದು ಬಿದ್ದು ಮಂಗಳವಾರ ರಾತ್ರಿ (ಮೇ 31) ಸಾವನ್ನಪ್ಪಿದ್ದಾರೆ. ಕೇವಲ ಬಾಲಿವುಡ್ ಮಾತ್ರವಲ್ಲದೇ ಕೆಕೆ ಬೇರೆ ಬೇರೆ ಭಾಷೆಯಲ್ಲೂ ಗಾನಸುಧೆ ಹರಿಸಿದ್ದಾರೆ.
ಹಿಂದಿ, ತೆಲುಗು, ತಮಿಳು, ಕನ್ನಡ, ಮರಾಠಿ ಸೇರಿದಂತೆ ಅನೇಕ ಭಾಷೆಯ ಗೀತೆಗಳಿಗೆ ಧ್ವನಿ ನೀಡಿದ್ದಾರೆ. ಕನ್ನಡದಲ್ಲೂ ಕೆಕೆ ಅನೇಕ ಗೀತೆಗಳಿಗೆ ಕಂಠದಾನ ಮಾಡಿದ್ದಾರೆ. ಲವ್ ಸಿನಿಮಾ ಮೂಲಕ ಕನ್ನಡ ಗೀತೆಗೆ ಧ್ವನಿಯಾದ ಕೆಕೆ ಬಳಿಕ ಅನೇಕ ಹಾಡುಗಳನ್ನು ಹಾಡಿದ್ದಾರೆ.