Karmanye Vadhikaraste 3.5/5
ಕರ್ಮಣ್ಯೇ ವಾಧಿಕಾರಸ್ತೆ – ಈ ಹೆಸರು ಕೇಳಿದರೇನೆ ಮೈಮನಗಳಲ್ಲಿ ಮಿಂಚು ಹರಿದಂತಾಗುತ್ತದೆ. ಅಷ್ಟು ಶಕ್ತಿಶಾಲಿ ಧಾರ್ಮಿಕ ಚಿಂತನೆಯ ದಾರಿ ಇದು. ಇಂಥ ಮೀಮಾಂಸೆಯೊಂದಿಗೆ ಪ್ರಾರಂಭವಾಗುವ ಕಥೆ ದೇವಕಿನಂದನ ಶಾಸ್ತ್ರಿಯದ್ದು. ತಾನು ಯಾವಾಗಲು ವಿಭಿನ್ನವಾಗಿ ಯೋಚಿಸುವ ವಿಜ್ಞಾನಕ್ಕೂ ಪುರಣಕ್ಕೂ ಸಾಮಿಪ್ಯವನ್ನು ತಾಳೆಹಾಕುವುದರಲ್ಲೇ ತನ್ನ ವಿದ್ಯಾಭ್ಯಾಸವನ್ನು ಮಾಡುತ್ತಿರುತ್ತಾನೆ.
ಶಿಕ್ಷಕರಿಂದ ಒದೆ ತಿನ್ನುತ್ತಾ ಬೈಸಿಕೊಳ್ಳುವುದೇ ಇವನ ಬಾಲ್ಯವಾಗಿರುತ್ತದೆ. ಇದನ್ನು ನೋಡಿದ ಈತನ ಸಹೋದರಿ ಮುಂದಿನ ಶಿಕ್ಷಣಕ್ಕೆ ತನ್ನೊಂದಿಗೆ ಇರಿಸಿಕೊಂಡಾಗಲೂ ಇದೇ ಹುಚ್ಚಾಟ ಮುಂದುವರಿಯುತ್ತದೆ. ಈತನಿಗೆ ಮದುವೆ ಮಾಡಿದರೆ ಸರಿಹೋಗಬಹುದು ಎಂದುಕೊಂಡು ನೋಡಿದ ಹೆಣ್ಣು ಜಾಹ್ನವಿ (ನಾಯಕಿ ದಿವ್ಯಗೌಡ). ಜಾಹ್ನವಿ ಈ ಹುಡುಗನ್ನು ಮದುವೆಯಾಗಬೇಕಾದರೆ ಒಮ್ಮೆ ಮುಖಾಮುಖಿ ಮಾತನಾಡಬೇಕೆಂದಾಗ ಜ್ಯೋತಿಷ್ಯದಲ್ಲಿ ಇವನ ಭವಿಷ್ಯ ನೋಡಿ, ಜೀವನದಲ್ಲಿ ಈತನನ್ನು ಮಾತ್ರ ಮದುವೆಯಾಗಬಾರದೆಂಬ ನಿರ್ಧಾರಕ್ಕೆ ಬರುತ್ತಾಳೆ.ಅದರೂ ಇವರ ಬೇಟಿ ಹಾಗಾಗ್ಗೆ ಆಕಸ್ಮಿಕವಾಗಿ ಸಂಭವಿಸುತ್ತಿರುತ್ತದೆ., ಈ ನಡುವೆ ಜಾಹ್ನವಿಗೆ ದೇವ್ ಹೇಳಿದ ಜ್ಯೋತಿಷ್ಯ ಒಮ್ಮೊಮ್ಮೆ ನಿಜವಾಗಿ ಕಾಡುತ್ತದೆ. ಅದನ್ನು ಈತನೊಂದಿಗೆ ಹೇಳಿಕೊಳ್ಳುತ್ತಾಳೆ ನಂತರ ಇವರ ಸ್ನೇಹ ಹಾಗೇ ಮುಂದುವರಿದು ಪ್ರೀತಿಯಾಗಿ ಮಾರ್ಪಡುತ್ತದೆ. ಇಡೀ ಸಿನಿಮಾದಲ್ಲಿ ಇದು ಮೊದಲಾರ್ಧವಾದರೆ, ದ್ವಿತೀಯಾರ್ದದಲ್ಲಿ ಇವರ ಪ್ರೀತಿಯ ನಡುವೆ ಒಂದು ದೊಡ್ಡ ಥ್ರಿಲ್ಲಿಂಗ್ ಕಥೆ ಪ್ರಾರಂಭವಾಗುತ್ತದೆ ಇದೇ, ಸಿನಿಮಾದ ಮುಖ್ಯವಾದ ತಿರುವು. ಅರ್ಕಾಲಜಿಸ್ಟ್ (ಫುರಾತತ್ವ ಇಲಖೆ) ಯ ಸಂಶೋಧಕ ಸೂರ್ಯನಾಥ್ ಅವರ ಕೊಲೆಯ ಸುತ್ತಾ ಕಥೆ ಚಕ್ರವ್ಯೂಹದಂತೆ ತಿರುಗಲಾರಂಭಿಸುತ್ತದೆ. ಈ ಸೂರ್ಯಕಾಂತ್ ಕೊಲೆಯ ಹಿಂದಿನ ರಹಸ್ಯವೇನು? ಈ ಕೊಲೆಗೂ ನಾಯಕಿ ಜಾಹ್ನವಿಗೂ ಹಾಗೂ ನಾಯಕನ ದೇವ್ ಗೂ ಏನು ಸಂಬಂಧ ಎಂಬುದರ ಕಥೆಯೇ ಈ ಕರ್ಮಣ್ಯೆ ವಾಧಿಕರಸ್ತೆ ಎಂಬ ವಿಭಿನ್ನ ಕಥೆ. ಇದರ ಕಥೆ, ಚಿತ್ರಕಥೆ ಮತ್ತು ನಿರ್ದೇಶನವನ್ನು ಮಾಡಿ ಶ್ರೀಹರಿ ಅವರು ಜನ ಚೇಂಜ್ ಕೇಳುತ್ತಾರೆ ಎನ್ನುತ್ತಲೇ, ಕಥೆ ವಿಭಿನ್ನವಾಗಿರಬೇಕು ಅಂತಾ ಕಥೆಯನ್ನು ಜಿಗ್ ಜಾಗ್ ಮಾದರಿಯಲ್ಲಿ ಇಡೀ ಸಿನಿಮಾವನ್ನು ತೆಗೆದುಕೊಂಡು ಹೋಗಿದ್ದಾರೆ. ಚಿತ್ರಕಥೆಯೇ ನಾಯಕ ಸುಬ್ರಮಣಿಯನ್ನು ಮುನ್ನಡೆಗೆ ತರುತ್ತದೆ. ಇನ್ನು ದಿವ್ಯಾಗೌಡ ತನ್ನ ನಟನೆಯಲ್ಲಿ ಜನಮೆಚ್ಚುಗೆಯನ್ನು ಪಡೆಯುತ್ತಾರೆ. ಈ ಚಿತ್ರದಲ್ಲಿ ಎರಡು ಹಾಡುಗಳು ಚೆನ್ನಾಗಿ ಮೂಡಿಬಂದು ಉತ್ತಮ ಲೊಕೇಷನ್ ಗಳಲ್ಲಿ ಚಿತ್ರೀಕರಿಸಿರುವುದು ಈ ಚಿತ್ರದ ಪ್ಲಸ್ ಪಾಯಿಂಟ್. ಈ ಚಿತ್ರದಲ್ಲಿ ಚೈನಾ ನಟಿಯ ಪಾತ್ರಮಾಡಿರುವ ನೇಪಾಳದ ನಟಿ ಡೋಲ್ಮಾ ಹೆಚ್ಚು ಗಮನ ಸೆಳೆಯುತ್ತಾರೆ. ಪೋಲಿಸ್ ಪಾತ್ರದಲ್ಲಿ ಉಗ್ರಂ ಮಂಜು ಖಳನಾಯಕ ಗತ್ತನ್ನು ತೋರಿಸಿದ್ದಾರೆ. ಸ್ನೇಹಿತನಾಗಿ ನಟಿಸಿರುವ ನಾಟ್ಯರಂಗನ ಕಾಮಿಡಿ ಸಿನಿಮಾದ ತೂಕ ಹೆಚ್ಚಿಸಿದೆ. ಎಂ.ಎಲ್. ಎ ಪಾತ್ರದ ನಟ ವಿಜಯ ಕೌಂಡಿನ್ಯ , ಸೂರ್ಯಕಾಂತ್ ಗುಣ್ಕಿಮಠ್ ತಮ್ಮ ಪಾತ್ರಕ್ಕೆ ಜೀವವನ್ನು ತುಂಬಿದ್ದಾರೆ. ನಾಯಕ ಪ್ರತೀಕ್ ಸುಬ್ರಮಣ್ಯ ನಾಯಕನಾಗಿ ತನ್ನ ಮೊದಲ ಚಿತ್ರದಲ್ಲಿ ಚಿತ್ರರಂಗದಲ್ಲಿ ಮೊದಲ ಮೆಟ್ಟಿಲನ್ನು ಹತ್ತುವ ಪ್ರಯತ್ನವನ್ನು ಮಾಡಿದ್ದಾರೆ. ನಾಯಕಿಯಾಗಿ ದಿವ್ಯಗೌಡ ಚಿತ್ರದಲ್ಲಿ ತನ್ನ ನಗುಮುಖದಿಂದ ಅಕರ್ಷಣೆಯಾಗಿದ್ದಾರೆ. ನಿರ್ದೇಶಕ ಶ್ರೀಹರಿ ಆನಂದ್ ಚಿತ್ರದ ಹೆಸರೇ ಹೇಳುವಂತೆ ನನ್ನ ಕೆಲಸವನ್ನು ಚೆನ್ನಾಗಿ ಮಾಡಿದ್ದೇನೆ ಮಿಕ್ಕಿದ್ದು ನಿಮ್ಮಗಳ ಆಶೀರ್ವಾ ಚಿತ್ರಪ್ರಿಯ ಸುಪರ್ದಿಗೆ ಬಿಟ್ಟಿದ್ದಾರೆ!