ಸಮಾಜದಲ್ಲಿ ಕಾನೂನಿನ ಬಗ್ಗೆ ಅರಿವಿಲ್ಲದವರು ಹೇಗೆಲ್ಲ ತೊಂದರೆ ಅನುಭವಿಸುತ್ತಿದ್ದಾರೆ. ಕಾನೂನು ಎಂಬ ಅಸ್ತ್ರವನ್ನುಪಯೋಗಿಸಿಕೊಂಡು ಅದರಿಂದ ಹೇಗೆ ಪಾರಾಗಬಹುದು ಎಂಬುದನ್ನು ನಾಗರಾಜ್ ಎಂ.ಜಿ.ಗೌಡ ಅವರು ಕಾನೂನು ಅಸ್ತ್ರ ಚಿತ್ರದ ಮೂಲಕ ಹೇಳಹೊರಟಿದ್ದಾರೆ. ಪುಟ್ಟೇಗೌಡ. ಎನ್. ಪ್ರೊಡಕ್ಷನ್ ಅಡಿಯಲ್ಲಿ ಪುಟ್ಟೇಗೌಡ ಎನ್. ಅವರೇ ಕಥೆ, ಸಂಭಾಷಣೆ ಬರೆದು ಚಿತ್ರನಿರ್ಮಾಣ ಮಾಡುವ ಜೊತೆಗೆ ಚಿತ್ರದ ಮುಖ್ಯ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಈ ಚಿತ್ರದ ಆಡಿಯೋ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆ ಸಮಾರಂಭ ಕಾಮಾಕ್ಷಿ ಪಾಳ್ಯದ ಕೆರೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು.ಕುಣಿಗಲ್ ಬಿಜೆಪಿ ಮುಖಂಡ ರಾಜೇಶ್‌ಗೌಡ ಹಾಗೂ ನಟಿ ಅಪೂರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.
ಜನರು ವಾಹನ ಸಾಲ ಪಡೆದು, ಕಂತು ಕಟ್ಟಲು ಸ್ವಲ್ಪ ತಡವಾದರೂ ಅವರ ಮೇಲೆ ಸೀಜಿಂಗ್ ನವರ ನಡೆಸುವ ದೌರ್ಜನ್ಯ, ಗೃಹ ಸಾಲ ಪಡೆದವರ ಮೇಲೆ ಬ್ಯಾಂಕ್ ಗಳು ಬೇಕಾಬಿಟ್ಟಿ ಬಡ್ಡಿ ವಿಧಿಸುವಿಕೆ, ಸಾಲ ಪಡೆಯುವಾಗ ಖಾಲಿ ಚೆಕ್ ನೀಡಿದರೆ ಆಗುವ ಪರಿಣಾಮಗಳು, ಗಂಡ ಹೆಂಡತಿ ಡೈವೊರ್ಸ್ ಗೆ ಕಾರಣಗಳು, ನಿರಪರಾಧಿಯ ಮೇಲೆ ಕೊಲೆ ಅಪರಾಧ ಬಂದಾಗ ಕಾನೂನು ಅಂತಹವರನ್ನು ಹೇಗೆ ಸಂರಕ್ಷಿಸುತ್ತದೆ ಎಂದು ಈ ಚಿತ್ರ ಹೇಳಲಿದೆ. ಕಾನೂನಿನಲ್ಲಿ ಶ್ರೀಮಂತ, ಬಡವ ಎನ್ನುವ ಬೇಧಭಾವ ಇರುವುದಿಲ್ಲ. ಸಮಾಜದಲ್ಲಿ ನಡೆಯುವ ಅನ್ಯಾಯಗಳಿಂದ ಪಾರಾಗುವುದಕ್ಕೆ ಇರೋದು ಒಂದೇ ಆಯುಧ ಎಂದರೆ ಅದು ’ಕಾನೂನು ಅಸ್ತ್ರ ಸಕಲೇಶಪುರ, ಚಿಕ್ಕಮಗಳೂರು, ಬೆಂಗಳೂರು, ಕುಶಾಲನಗರ, ಮಡಕೇರಿ ಹಾಗೂ ಹೊರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ವೆಂಕಿ ಯು.ಡಿ.ವಿ. ಅವರ ಸಂಕಲನ, ವಿನಯ್ ಗೌಡ ಅವರ ಛಾಯಾಗ್ರಹಣ, ವಿನಯ್‌ಪಾಂಡವಪುರ ಸಾಹಿತ್ಯದ ನಾಲ್ಕು ಹಾಡುಗಳಿಗೆ ಮಂಜು ಮಹದೇವ್ ಅವರ ಸಂಗೀತ, ಬಾಲು ಮಾಸ್ಟರ್ ಅವರ ಕೊರಿಯೋಗ್ರಫಿ ಚಿತ್ರಕ್ಮಿದೆ.ಪುಟ್ಟೇಗೌಡ. ಎನ್, ಜಗದೀಶ್. ಹೆಚ್.ಜಿ. ದೊಡ್ಡಿ, ಬಂಡೆಬಾಬು., ಲಕ್ಷ್ಮಿನಾರಾಯಣ್, ಸೌಮ್ಯರಾಜ್, ಯೋಗೇಶ್‌ಶೆಟ್ಟಿ,, ಬೇಬಿ ಸಾನ್ವಿ ಗೌಡ, ಯೋಗೇಶ್, ಅಂಜನ್, ಚಂದನ,, ಸೌಂದರ್ಯ, ಗಿರೀಶ್, ಮಂಜುನಾಥ್ ಹಿರಿಯೂರು, ಸೌಮ್ಯ ರಾಜ್, ಆನಂದ್, ಮಾನ್ಯ ಗೌಡ, ಇನ್ನೂ ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುಸಿದ್ದಾರೆ.
Director :- Nagaraj ‘MG’ Gowda Editor :- Venki UDV
ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ನವೆಂಬರ್ ವೇಳೆಗೆ ಚಿತ್ರಮಂದಿರಕ್ಕೆ ಬರುವ ಸಾಧ್ಯತೆ ಇದೆ.
ಕಲಾವಿದರು
ಲೀಗಲ್ ಸ್ಟಾರ್ – ಪುಟ್ಟೇಗೌಡ .ಎನ್, ಜಗದೀಶ್ ಹೆಚ್.ಜಿ ದೊಡ್ಡಿ, ಯೋಗೇಶ್ ಶೆಟ್ಟಿ, ರಾಜ್ವಿಗೌಡ, ಲಕ್ಷ್ಮೀ ನಾರಾಯಣ ಮಾಗಡಿ, ಬಂಡೆ ಬಾಬು ಕುಣಿಗಲ್,ಚಂದನ್ ಗೌಡ, ಸೌಂದರ್ಯ, ಗಿರೀಶ್ ಕನ್ನಮೇಡಿ, ಚಂದನ, ಮಂಜುನಾಥ್, ಸೌಮ್ಯ ರಾಜ್, ಅಂಜನ್, ಮೇಘನಾ ಶೆಟ್ಟಿ, ಮಂಜುನಾಥ ಹಿರಿಯೂರು, ಚಂದ್ರು, ಶಿವು ದೊಡ್ಡಮಾವತ್ತೂರು, ನಾಗರಾಜ್ ಕೆ ಪಿ ಕುಂದೂರು, ಆನಂದ್ BSNL ಅವ್ವೇರಹಳ್ಳಿ, ಹರೀಶ್ ಬಿ ಕಾಡು, ಶಶಿ ಕುಣಿಗಲ್, ವೀಣಾ, ವಿನಯ್, ರವಿ, ಅವನಿಕ, ಪ್ರಭಾ, ಗೀತಾ, ವಿನಾಯಕ, ಮಾನ್ಯ ಗೌಡ, ಮೌಲ್ಯ ಗೌಡ, ಮಂಜುನಾಥ್ ಹಿರಿಯೂರು, ಈರೇಗೌಡ, ಶಿವ ಶಂಕರ್, ಪೂಜಶ್ರೀ ಆನಂದ್, ನಾಗರಾಜ್ ಎಂ ಎಂ ಮಾಚನಹಳ್ಳಿ,