ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಪ್ರದರ್ಶನಕ್ಕೆ ಆಯ್ಕೆಯಾಗಿದೆ ಕುಗ್ರಾಮ ಚಿತ್ರ. ಲೋಕೇಂದ್ರ ಸೂರ್ಯ ರಚನೆ ಮತ್ತು ನಿರ್ದೇಶನದ ಕುಗ್ರಾಮ ಚಿತ್ರವು ಆರ್ ಡಿ ಎಂಟರ್ ಪ್ರೈಸಸ್ ಅಡಿಯಲ್ಲಿ, ನಿರ್ಮಾಪಕ ರಾಜು ಕಲ್ಲುಣಿ ಯವರು ನಿರ್ಮಿಸಿದ್ದಾರೆ. ಈ ಮೊದಲು ಸಿಂಗಾಪೂರ್ , ಇಥಿಲೋಫಿಯ , ಯು ಕೆ, ಭಾರತ ಸೇರಿದಂತೆ ಇನ್ನೂ ಅನೇಕ ರಾಷ್ಟ್ರಗಳಲ್ಲಿ ಚಿತ್ರವೂ ಕಾಂಪಿಟೇಷನ್ ನಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಈಗ ಇರಾನ್ ದೇಶದ ಪ್ರಸಿದ್ಧ ಚಿತ್ರೋತ್ಸವದಲ್ಲಿ ಆಯ್ಕೆಯಾಗಿ ಮತ್ತೊಂದು ದೇಶಿಗರನ್ನು ಸ್ಪರ್ಶಿಸಲಿದೆ.
ಕಲಾತ್ಮಕ ಚಿತ್ರಗಳ ನಿರ್ಮಾಣದಲ್ಲಿ ಇರಾನ್ ದೇಶ ಸದಾ ಮುಂಚೂಣಿಯಲ್ಲಿ ಇರುತ್ತದೆ. ಇರಾನ್ ದೇಶದ ಸಿನಿಮಾಗಳು ಜಗತ್ತಿನಾದ್ಯಂತ ಗಮನ ಸೆಳೆದಿವೆ, ನಮ್ಮ ಬೆಂಗಳೂರು ಅಂತರ್ ರಾಷ್ಟ್ರೀಯ ಚಿತ್ರೋತ್ಸವದಲ್ಲಿಯೂ ಅತಿ ಹೆಚ್ಚು ಪ್ರೇಕ್ಷಕರನ್ನು ಸೆಳೆಯುವ ಚಿತ್ರಗಳು ಇರಾನ್, ಅರಭ್, ಮತ್ತು ಕೊರಿಯನ್ ಮೂಲದ ಚಿತ್ರಗಳಾಗಿರುತ್ತವೆ. ಅಲ್ಲಿನ ಜನಗಳ ಅಭಿರುಚಿಗೆ ಉತ್ತಮ ಕಥಾ ವಸ್ತು, ನೈಜತೆಯ ಚಿತ್ರಗಳು ಮಾತ್ರ ರುಚಿಸುತ್ತವೆ.
ಕುಗ್ರಾಮ ಚಿತ್ರವೂ ಅಂತಹ ಉತ್ತಮ ಕಥೆಯನ್ನು ಹೊಂದಿದ್ದು ನೈಜವಾಗಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಇಲ್ಲವಾದರೆ ಇರಾನ್ ದೇಶದ ವೇದಿಕೆಯಲ್ಲಿ ಕುಗ್ರಾಮ ಚಿತ್ರಕ್ಕೆ ಮನ್ನಣೆ ಸಿಗುತ್ತಿರಲಿಲ್ಲ ಎಂಬುದು ಸಹಜವಾಗಿಯೇ ತಿಳಿಯುತ್ತದೆ. ಹಲವು ದೇಶಗಳಲ್ಲಿ ಪ್ರದರ್ಶನ ಕಂಡ ಕುಗ್ರಾಮ ಚಿತ್ರಕ್ಕೆ ಬೆಂಗಳೂರು ಚಿತ್ರೋತ್ಸವದಲ್ಲಿ ಅನ್ಯಾಯ ವಾಗಿದೆ ಎಂಬುದು ನಿರ್ದೇಶಕರ ಅಸಮಾಧಾನದ ಮಾತುಗಳಿಂದ ತಿಳಿದು ಬರುತ್ತದೆ. ಕುಗ್ರಾಮ ಚಿತ್ರವು ಮತ್ತಷ್ಟು ದೇಶಗಳಲ್ಲಿ ಪ್ರದರ್ಶನ ಕಾಣುವ ಭರವಸೆಯನ್ನು ಚಿತ್ರ ತಂಡ ಹೊಂದಿದ್ದು, ಕನ್ನಡದ ಚಿತ್ರಕ್ಕೆ ವಿವಿಧ ದೇಶಗಳಲ್ಲಿ ಮತ್ತಷ್ಟು ಮಾನ್ಯತೆ ದೊರಕಲಿ ಎಂದು ಆಶಿಸುತ್ತೇವೆ.