ಬಾಹುಬಲಿ ನಟ ಪ್ರಭಾಸ್ ದೇಶ ವಿದೇಶಗಳಲ್ಲಿ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಕಮಾಲ್ ಮಾಡುತ್ತಾ ಬರ್ತಿದ್ದಾರೆ. ಚಿತ್ರವೊಂದಕ್ಕೆ 100 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುತ್ತಾರೆ. ಸದ್ಯ ನಾಲ್ಕೈದು ಸಿನಿಮಾಗಳು ಡಾರ್ಲಿಂಗ್ ಕೈಯಲ್ಲಿದೆ.
ಖ್ಯಾತ ತೆಲುಗು ನಟ ಕೃಷ್ಣಂ ರಾಜು ಸಹೋದರನ ಮಗ ಪ್ರಭಾಸ್. ಹಾಗಾಗಿ ಅವರು ಚಿತ್ರರಂಗಕ್ಕೆ ಬರುವುದು ಕಷ್ಟವಾಗಲಿಲ್ಲ. ಆದರೆ ಬಂದ ಮೇಲೆ ತಮ್ಮದೇ ಪರಿಶ್ರಮದಿಂದ ಸ್ಟಾರ್ ನಟನಾಗಿ ಗುರ್ತಿಸಿಕೊಂಡರು. ತಮ್ಮ ಡೆಡಿಕೇಷನ್ ಮೂಲಕ ಅಸಾಧ್ಯವನ್ನು ಸಾಧಿಸಿದರು. ‘ಬಾಹುಬಲಿ’ ಸರಣಿ ಸಿನಿಮಾ ಮಾಡಿ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದರು. ಈ ಚಿತ್ರಕ್ಕಾಗಿ 5 ವರ್ಷ ಮೀಸಲಿಟ್ಟಿದ್ದರು. ಅವರ ನಂಬಿಕೆ ಸುಳ್ಳಾಗಲಿದೆ. ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಯಿತು. ಬಳಿಕ ಸಂಭಾವನೆ ಹೆಚ್ಚಿತು. ಬಾಲಿವುಡ್ ಮಂದಿ ರತ್ನಗಂಬಳಿ ಹಾಸಿದರು.
ಚಿತ್ರರಂಗದ ಮಂದಿ ಸಂಖ್ಯಾಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ, ವಾಸ್ತು ಶಾಸ್ತ್ರ ನಂಬುತ್ತಾರೆ. ಹೇಳಿ ಕೇಳಿ ಇದು ಅದೃಷ್ಟವನ್ನು ನಂಬಿಕೊಂಡಿರುವ ಇಂಡಸ್ಟ್ರಿ. ಕೋಟಿ ಕೋಟಿ ವ್ಯವಹಾರ ನಡೆಯುತ್ತದೆ. ಹಾಗಾಗಿ ಇಂಥದ್ದನ್ನೆಲ್ಲಾ ನಿರ್ಮಾಪಕರು, ನಿರ್ದೇಶಕರು, ಕಲಾವಿದರು ನಂಬುತ್ತಾರೆ. ಪ್ರಭಾಸ್ ಕೂಡ ಇದಕ್ಕೆ ಹೊರತಲ್ಲ. ಇದೀಗ ಪ್ರಭಾಸ್ ಮನೆಗೆ ಕಲ್ಪವೃಕ್ಷ ಸೇರಿದೆ. ಕಲ್ಪವೃಕ್ಷ ಬೇಡಿದ ವರ ಕೊಡುತ್ತದೆ ಎನ್ನುವ ನಂಬಿಕೆಯಿದೆ. ಭಾರತದಲ್ಲಿ ಇಬ್ಬರು ಮೂವರ ಬಳಿ ಮಾತ್ರ ಈ ಮರ ಇದೆಯಂತೆ.
ಮುಖೇಶ್ ಅಂಬಾನಿ ಮನೆಯಲ್ಲಿ ಕಲ್ಪವೃಕ್ಷದ ಮರ ಇದೆಯಂತೆ. ಅದು ಬಿಟ್ಟರೆ ಪ್ರಭಾಸ್ ಹಾಗೂ ನನ್ನ ಬಳಿ ಮಾತ್ರ ಈ ವೃಕ್ಷ ಇದೆ ಎಂದು ಎಕ್ಸ್‌ಪೀರಿಯಂ ಇಕೋ ಪಾರ್ಕ್ ಸಂಸ್ಥಾಪಕ ರಾಮ್‌ದೇವ್ ಹೇಳಿದ್ದಾರೆ. ಅವರಿಬ್ಬರಿಗೂ ಈ ಮರ ಕೊಟ್ಟಿದ್ದು ನಾನೇ ಎಂದು ತಿಳಿಸಿದ್ದಾರೆ. ಸುಮನ್ ಟಿವಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅವರು ಮಾತನಾಡಿರುವ ವೀಡಿಯೋ ಈಗ ವೈರಲ್ ಆಗುತ್ತಿದೆ.