ಪ್ರೀತಿಗೆ ಭಾಷೆ ಇಲ್ಲ ಭಾಷೆಗೆ ಸಾವಿಲ್ಲ Kaadal Kannada Movie ಕಾದಲ್ ಹೆಸರು ಕೂಡ ಹಾಗೆ ಕನ್ನಡದೇ ಪದವಾದರೂ ಕೂಡ ಅದನ್ನು ಬಳಸದೆ ನಮ್ಮದಲ್ಲದ ಪದ ಎಂದು ಅಂದುಕೊಂಡವರಿಗೆ ಅಪ್ಪಟ ಕನ್ನಡ ಪದ ಎಂಬ ಆತ್ಮವಿಶ್ವಾಸದೊಂದಿಗೆ ಕಾದಲ್ ಅನ್ನು ಚಿತ್ರರಸಿಕರಿಗೆ ನೀಡಲು ನಿರ್ದೇಶಕ ವಿಜಯ್ ಪ್ರಿಯಾ ಸಿದ್ದರಾಗಿದ್ದಾರೆ.
ಪರಿಶುದ್ಧ ಪ್ರೇಮಕಥೆಯ ಕಾದಲ್
ನಿರ್ದೇಶಕರಾದ ವಿಜಯ್ ಪ್ರಿಯ ಅವರು ಕಾದಲ್ ಚಿತ್ರವನ್ನು ಚಿತ್ರರಸಿಕರಿಗೆ ಹೊಸತರದಿಂದ ಮತ್ತು ಅಪ್ಪಟ ಚಿತ್ರ ಪ್ರೇಮಿಗಳು ಬಯಸುವಂತಹ ಸುಮಧುರ ಗೀತೆಗಳ ಜೊತೆಗೆ ಮನರಂಜನೆ ನೀಡಲು ತುಂಬಾ ಹಂಬಲದಿಂದ ಕಥೆ ಸಿದ್ಧಪಡಿಸಿಕೊಂಡಿದ್ದಾರೆ.
ಕಾದಲ್ ಹೆಸರು ಕೇಳಿದ ತಕ್ಷಣ ಇದು ತಮಿಳು ಪದ ಅಂತ ಅನಿಸಬಹುದು ಆದರೆ ಇದು ಅಪ್ಪಟ ಕನ್ನಡದ ಪದ ಎಂಬ ದೃಢವಾದ ನಂಬಿಕೆಯಿಂದ ಮತ್ತು ಪುರಾವೆಗಳೊಂದಿಗೆ ಈ ಚಿತ್ರಕ್ಕೆ ಕಾದಲ್ ಎಂದು ಹೆಸರಿಟ್ಟಿದ್ದಾರೆ.
ಒಟ್ಟಾರೆ ನಿರ್ದೇಶಕ ವಿಜಯ್ ಪ್ರಿಯಾ ಅವರು ಪೂರ್ಣ ತಯಾರಿ ಹೊಂದಿದು ಆರ್ ಆರ್ ಗೌಡ ಪ್ರೊಡಕ್ಷನ್ ಅಡಿಯಲ್ಲಿ ಶ್ರೀ ಹೆಚ್ ಆರ್ ಸುರೇಶ್ ಗೌಡ ರಾಮಾಂಜನಪ್ಪ ಹೆಣ್ಣೂರು ಮತ್ತು ಸ್ನೇಹಿತರು ನಿರ್ಮಾಣದಲ್ಲಿ ಈ ಚಿತ್ರವನ್ನು ವಿಜಯಪ್ರಿಯ ನಿರ್ದೇಶಿಸುತ್ತಿದ್ದಾರೆ.
“ಕಾದಲ್” ಚಿತ್ರದ ಬಹುನಿರೀಕ್ಷಿತ “ಸಿಪ್ ಬೈ ಸಿಪ್” ಪಾರ್ಟಿ ಹಾಡಿನ ಪ್ರೋಮೋ ಪೋಸ್ಟರ್ ಬಿಡುಗಡೆ! ಹೆಚ್ ಆರ್ ಸುರೇಶಗೌಡರ ನಿರ್ಮಾಣದ ವಿಜಯ್ ಪ್ರಿಯಾ ನಿರ್ದೇಶನದ ಈ ಚಿತ್ರದ ಹಾಡಿಗೆ ನೀವೂ ಹೆಜ್ಜೆ ಹಾಕಲು ಸಿದ್ಧರಾಗಿ. ಹಾಡಿನ ಪ್ರೋಮೋ ಪೋಸ್ಟರ್ ನಲ್ಲಿ ಕಲರ್‌ಫುಲ್ ಡ್ಯಾನ್ಸ್ ಮೂಮೆಂಟ್ಸ್ ಇದ್ದು, ಪಾರ್ಟಿ ವೈಬ್ ಸೃಷ್ಟಿಸುತ್ತದೆ.
ಹಾಡಿನ ಪ್ರೋಮೋ ಬಿಡುಗಡೆ ದಿನಾಂಕ:24/July/2025 ಸಮಯ: 5:18PM ಈ ಪೋಸ್ಟರ್ ಅನ್ನು ನಿಮ್ಮ ಎಲ್ಲಾ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಕಾದಲ್ ಚಿತ್ರತಂಡವನ್ನು ಬೆಂಬಲಿಸಿ.